ಗದಗ, 26 ಜೂನ್ 2025: ಎಸ್‌ಡಿಪಿಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪರ್ ಕೊಡ್ಲಿಪೇಟೆ ಮತ್ತು ರಾಜ್ಯ ಕಾರ್ಯದರ್ಶಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಅಪ್ಪರ್ ಕೆ.ಆರ್.ನಗರ ಅವರು ಇಂದು ಪಕ್ಷದ ಸಂಘಟನಾ ಬಲವರ್ದನೆಯ ಭಾಗವಾಗಿ ಗದಗ ಜಿಲ್ಲೆಗೆ ವಿಶೇಷ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರದಲ್ಲಿ ಜೆಡಿಎಸ್ ಪಕ್ಷದ ಹಿರಿಯ ಮುಖಂಡರು ಅವರನ್ನು ಆತ್ಮೀಯವಾಗಿ ಭೇಟಿಯಾಗಿ ಚರ್ಚೆ ನಡೆಸಿದರು.
ಭೇಟಿಯಲ್ಲಿ ಜೆಡಿಎಸ್ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಅಲಿ ಕೊಪ್ಪಳ ಹಾಗೂ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಮೊಹಮ್ಮದ್ ಸಿರಾಜ್ ಕದಡಿ ಉಪಸ್ಥಿತರಿದ್ದರು. ಅವರು ತಮ್ಮ ರಾಜಕೀಯ ಅನುಭವಗಳನ್ನು ಹಂಚಿಕೊಂಡು, ಇಂದಿನ ಅಲ್ಪಸಂಖ್ಯಾತರ ಕಾರ್ಯಕ್ಷಮತೆ, ನೈತಿಕ ರಾಜಕೀಯದ ಅಗತ್ಯತೆ ಮತ್ತು ಜನಪರ ಹೋರಾಟದ ಅನಿವಾರ್ಯತೆ ಬಗ್ಗೆ ವಿಶ್ಲೇಷಣಾತ್ಮಕ ಸಂವಾದ ನಡೆಸಿದರು.
ಭೇಟಿಯ ಕೊನೆಯಲ್ಲಿ, ಎಸ್‌ಡಿಪಿಐ ಪಕ್ಷದ ತಾತ್ವಿಕ ಸ್ಥಿರತೆ, ಸೈದ್ದಾಂತಿಕ ಹೋರಾಟ, ಜನಪರ ಚಟುವಟಿಕೆಗಳು ಮತ್ತು ರಾಜಕೀಯ ಪ್ರಾಮಾಣಿಕತೆಯನ್ನು ಶ್ಲಾಘಿಸಿ, ಇಬ್ಬರು ಮುಖಂಡರು ಆಫರ್ ಕೊಡ್ಲಿಪೇಟೆ ಮತ್ತು ಕೆ.ಆರ್.ನಗರ ರವರಿಗೆ ಶಾಲು ಹೊದಿಸಿ, ಮಾಲೆ ಹಾಕಿ ಗೌರವಿಸಿದರು.
ಈ ವೇಳೆ ಎಸ್‌ಡಿಪಿಐ ರಾಜ್ಯ ಪ್ರದಾನ ಕಾರ್ಯದರ್ಶಿ ಅಪ್ಪರ್ ಕೊಡ್ಲಿಪೇಟೆ ರವರು ಇಬ್ಬರೂ ಮುಖಂಡರಿಗೆ ಪಕ್ಷಕ್ಕೆ ಸೇರ್ಪಡೆಯಾಗಲು ಆಹ್ವಾನ ನೀಡಿದರು.
ಮಾತುಕತೆಯ ವೇಳೆ ಪಕ್ಷದ ಧೋರಣೆ ಮತ್ತು ಜನಪರ ಹೋರಾಟದ ಕಡೆಗೆ ಅವರ ಆಕರ್ಷಣೆ ಸ್ಪಷ್ಟವಾಗಿ ತೂರುತಿತ್ತು. ಶೀಘ್ರದಲ್ಲೇ ಅವರು ತಮ್ಮ ಬೆಂಬಲಿಗರೊಂದಿಗೆ ಎಸ್‌ಡಿಪಿಐ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ವಿಶ್ವಾಸವನ್ನು ಪಕ್ಷದ ರಾಜ್ಯ ನಾಯಕರು ವ್ಯಕ್ತಪಡಿಸಿದ್ದಾರೆ.
ಈ ವೇಳೆ ಜಿಲ್ಲಾ ಅಧ್ಯಕ್ಷ ಬಿಲಾಲ್ ಗೋಕಾವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಫ್ಘಾನ್, ಹಿರಿಯ ನಾಯಕ ಅನ್ವರ್ ಬಾಗೇವಾಡಿ ಹಾಗೂ ಜಿಲ್ಲಾ ಸಮಿತಿ ಸದಸ್ಯ ಹಿದಾಯತ್ ಚಾಚ ಉಪಸ್ಥಿತರಿದ್ದರು.
ಇಂತಹ ಭೇಟಿಗಳು ರಾಜಕೀಯ ಸೌಹಾರ್ದತೆಗೆ ಸಾಕ್ಷಿಯಾಗಿದ್ದು, ನೈಜ ಪರ್ಯಾಯ ಬಯಸುವವರು ಸತ್ಯದ ಕಡೆಗೆ ಸಾಗುವ ಧೈರ್ಯವನ್ನು ತೋರುತ್ತಿದ್ದಾರೆ. ಸಮಾಜದ ಪರಿವರ್ತನೆಗೆ ಜವಾಬ್ದಾರಿಯುತ ರಾಜಕೀಯ ಪ್ರಕ್ರಿಯೆಗಳಿಗೆ ಇವು ಬಲವನ್ನು ನೀಡುತ್ತವೆ.
Ambedkar Jatha-3 احتجاجی اجلاس | 15اگست Belagavi | 10:30 AM سورنا سودها مطالبات 2B ریزرویشن…
DEMAND'S MEET | 15th DECEMBER BELAGAVI 10:30 AM Suvarna Soudha DEMANDS Restore the 2B Reservation…
Ambedkar Jatha-3 Ehtijaji Ajlas BELAGAVI 10:30 AM Suvarna Soudha DEMANDS 2B Reservation ko dobara bahal…
ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ – 3 📍 VENUE: Kudachi | Public Program SDPIKarnataka #AmbedkarJatha3 #chalobelagavi
Ambedkar Jatha-3 BJP ಮುಸ್ಲಿಮ್ ದ್ವೇಷದ ಭಾಗವಾಗಿ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಮತ್ತು ಮುಸ್ಲಿಮ್ ವಿರೋಧಿ ಮಸೂದೆಗಳನ್ನು ಜಾರಿಗೊಳಿಸುತ್ತದೆ. ಕಾಂಗ್ರೆಸ್ ಬಿಜೆಪಿ…
SDPI Karnataka SDPI ಹಲವು ಬೇಡಿಕೆಗಳೊಂದಿಗೆ ಕಿತ್ತೂರ ಚೆನ್ನಮ್ಮಳ ಮಣ್ಣಿನಿಂದ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾವನ್ನು ಆರಂಭಿಸಿ ಸುವರ್ಣ ಸೌಧಕ್ಕೆ…