Categories: featureNewsPolitics

ಪತ್ರಿಕಾ ವರದಿ (Newspaper Coverage):

ಪತ್ರಿಕಾ ವರದಿ (Newspaper Coverage):

ಗಂಗಾವತಿ, ಜುಲೈ 8:
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಜಿಲ್ಲಾಸಮಿತಿಯ ವಿಶೇಷ ಸಭೆ ಗಂಗಾವತಿಯಲ್ಲಿ ಜರುಗಿತು. ಈ ಸಭೆಯನ್ನು ಜಿಲ್ಲಾಧ್ಯಕ್ಷರಾದ ಸಲೀಂ ಮನಿಯಾರ್ ರವರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಅಬ್ದುಲ್ ಹನ್ನಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಖಜಾಂಚಿ ಅಮ್ಜದ್ ಖಾನ್ ರವರು ಭಾಗವಹಿಸಿದ್ದರು. ವಿವಿಧ ಸಂಘಟನಾ ವಿಷಯಗಳು ಮತ್ತು ಮುಂಬರುವ ಚುನಾವಣಾ ತಯಾರಿ ಕುರಿತು ಮಹತ್ವದ ಚರ್ಚೆಗಳು ನಡೆದವು.

SDPIKarnataka #newspapercoverage #Gangavathi

ಗಂಗಾವತಿ, ಜುಲೈ 8:
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಜಿಲ್ಲಾಸಮಿತಿಯ ವಿಶೇಷ ಸಭೆ ಗಂಗಾವತಿಯಲ್ಲಿ ಜರುಗಿತು. ಈ ಸಭೆಯನ್ನು ಜಿಲ್ಲಾಧ್ಯಕ್ಷರಾದ ಸಲೀಂ ಮನಿಯಾರ್ ರವರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಅಬ್ದುಲ್ ಹನ್ನಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಖಜಾಂಚಿ ಅಮ್ಜದ್ ಖಾನ್ ರವರು ಭಾಗವಹಿಸಿದ್ದರು. ವಿವಿಧ ಸಂಘಟನಾ ವಿಷಯಗಳು ಮತ್ತು ಮುಂಬರುವ ಚುನಾವಣಾ ತಯಾರಿ ಕುರಿತು ಮಹತ್ವದ ಚರ್ಚೆಗಳು ನಡೆದವು.

SDPIKarnataka #newspapercoverage #Gangavathi

admin

Recent Posts

ಪತ್ರಿಕಾ ಪ್ರಕಟಣೆ

ಚುನಾವಣಾ ಪೂರ್ವ ತಯಾರಿಗಳ ಬಗ್ಗೆ ಕೊಪ್ಪಳ ಜಿಲ್ಲಾ ಮತ್ತು ವಿಧಾನಸಭಾ ನಾಯಕರ ವಿಶೇಷ ಸಭೆ*

ಗಂಗಾವತಿ:ಜುಲೈ 8:
ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಸಮಿತಿಯ ವಿಶೇಷ ಸಭೆಯು ಜಿಲ್ಲಾಧ್ಯಕ್ಷರಾದ ಸಲೀಂ ಮನಿಯಾರ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಅಬ್ದುಲ್ ಹನ್ನಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣೆ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಖಜಾಂಚಿ ಅಮ್ಜದ್ ಖಾನ್ ರವರ ಸಮ್ಮುಖದಲ್ಲಿ ನಡೆಯಿತು.

ಜಿಲ್ಲಾ, ವಿಧಾನಸಭಾ ಮತ್ತು ವಿವಿಧ ಹಂತದ ಪದಾಧಿಕಾರಿಗಳು, ಪ್ರತಿನಿಧಿಗಳು ಹಾಗೂ ನಾಯಕರು ಮುಂಬರಲಿರುವ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳ ಪೂರ್ವ ತಯಾರಿಗಳ ಬಗ್ಗೆ, ವಾರ್ಡ್ ಹಾಗೂ ಬೂತ್ ಮಟ್ಟದ ಸಂಘಟನಾ ಸ್ಥಿತಿಗತಿಯ ಕುರಿತು ವಿಶ್ಲೇಷಣೆ, ಕಾರ್ಯತಂತ್ರಗಳ ವಿವಿಧ ಸಮಿತಿಗಳ ವರದಿಗಳು ಹಾಗೂ ಜವಾಬ್ದಾರಿಗಳ ಹಂಚಿಕೆ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಹನ್ನಾನ್, “ಪ್ರತಿಯೊಬ್ಬನೂ ಚುನಾವಣಾ ಕಾರ್ಯಗಳತ್ತ ಹೆಚ್ಚು ಕಾಳಜಿಯಿಂದ ನಿರತರಾಗಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವುದು ನಮ್ಮ ಮೇಲೆ ಇರುವ ಪ್ರಮುಖ ಜವಾಬ್ದಾರಿ. ಸ್ಥಳೀಯ ಸಂಸ್ಥೆ ಚುನಾವಣೆಯ ವಿಳಂಬವು ಮತ್ತು ಸರ್ಕಾರದ ನಿರ್ಲಕ್ಷ್ಯವೂ ಪ್ರಜಾಪ್ರಭುತ್ವದ ಅಪಮಾನ” ಎಂದು ಅಭಿಪ್ರಾಯಪಟ್ಟರು .
ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣೆ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ, “ಪಕ್ಷವನ್ನು ಬೂತ್ ಮಟ್ಟದ ಬಲಗೊಳಿಸುವುದು ಅವಶ್ಯಕ. ಪ್ರತಿಯೊಬ್ಬ ಕಾರ್ಯಕರ್ತನು ‘ಬೂತ್ ಗೆಲುವು ನನ್ನ ನಿಲುವು’ ಎಂಬ ಘೋಷವಾಕ್ಯದಡಿಯಲ್ಲಿ ತಕ್ಕ ರೀತಿಯಲ್ಲಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.

ಸಭೆಯ ಅಂತಿಮ ಭಾಗದಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ನಾಯಕರು ತಮ್ಮ ಕ್ಷೇತ್ರದ ಸಂಘಟನೆ ಬಲವರ್ಧನೆಗಾಗಿ ತಂತ್ರಮೂಲಕ ಪ್ರಸ್ತಾವನೆಗಳನ್ನು ಮಂಡಿಸಿದರು. ಕ್ಷೇತ್ರವಾರು ಕಾರ್ಯತಂತ್ರ, ಯೋಜಿತ ಚಟುವಟಿಕೆಗಳ ಬಗ್ಗೆ ಆಳವಾದ ಚರ್ಚೆ ನಡೆಸಿ, ಮುಂದಿನ ಹಂತದ ಕಾರ್ಯತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಯೂಸುಫ್ ಮೋದಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸೈಯದ್ ಶಾಕೀಬ್, ಜಿಲ್ಲಾ ಕಾರ್ಯದರ್ಶಿ ಚಾಂದ್, ಜಿಲ್ಲಾ ಕೋಶಾಧಿಕಾರಿ ಮಹೇಬೂಬ್ ರಜಾ, ಗಂಗಾವತಿ ವಿಧಾನ ಸಭಾ ಅಧ್ಯಕ್ಷರು ಇರ್ಫಾನ್, ಕೊಪ್ಪಳ ವಿಧಾನಸಭಾ ಅಧ್ಯಕ್ಷರು ಸಲೀಮ್ ಖಾದ್ರಿ, ಕನಕಗಿರಿ ವಿಧಾನಸಭಾ ಅಧ್ಯಕ್ಷರು ಅಜ್ಮಿರ್ ಸಿಂಗನಾಳ್,ಕುಷ್ಟಗಿ ವಿಧಾನಸಭಾ ಉಪಾಧ್ಯಕ್ಷರು ಸಲೀಮ್ ಕೆ ಬಿ, ಸಿಂದನೂರ್ ವಿಧಾನಸಭಾ ಅಧ್ಯಕ್ಷರು ಆಸೀಫ್ ಕೆ, ಕಂಪ್ಲಿ ವಿಧಾನಸಭಾ ಅಧ್ಯಕ್ಷರು ಇಮ್ರಾನ್
ಉಪಸ್ಥಿತರಿದ್ದರು.

2 days ago

ಬದ್ಧತೆ ಮತ್ತು ಕಠಿಣ ಪರಿಶ್ರಮದ ಮೂಲಕ ಪಕ್ಷವನ್ನು ‘ಜನಾಧಿಕಾರದ ಕಡೆಗೆ ಮುನ್ನಡೆಸುವ ಮಹತ್ವದ ಪಾತ್ರನಿಭಾಯಿಸಬೇಕಿದೆ ಅಫ್ಸರ್ ಕೊಡ್ಲಿಪೇಟೆ

ಮೈಸೂರು, 03 ಜುಲೈ 2025: ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ರವರ ಮಾರ್ಗದರ್ಶನದಲ್ಲಿ…

1 week ago