Categories: featureNewsPolitics

ನ್ಯಾಯವ್ಯವಸ್ಥೆಯ ಮೇಲೆ ಆಕ್ರಮಣ: ಎಸ್‌ಜಿ ತುಷಾರ್ ಮೆಹ್ತಾ ಅವರ ಹೇಳಿಕೆಗೆ ಬಿಎಂ ಕಾಂಬ್ಳೆ ಖಡಕ್ ಪ್ರತಿಕ್ರಿಯೆ

2025ರ ಜುಲೈ 9ರಂದು 2020ರ ದೆಹಲಿ ಹಿಂಸಾಚಾರದ “ವಿಸ್ತೃತ ಸೂತ್ರಧಾರೆ” ಪ್ರಕರಣದ ವಿಚಾರಣೆಯಲ್ಲಿ, ದೆಹಲಿ ಹೈಕೋರ್ಟ್‌ ಎದುರು ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನೀಡಿದ ಹೇಳಿಕೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಷ್ಟ್ರೀಯ ಉಪಾಧ್ಯಕ್ಷ ಬಿಎಂ ಕಾಂಬ್ಳೆ ಅವರು ತೀವ್ರವಾಗಿ ಖಂಡಿಸಿದ್ದಾರೆ.

“ದೇಶದ್ರೋಹಿ ಕೃತ್ಯಗಳಲ್ಲಿ ಭಾಗಿಯಾದ ಆರೋಪಿಗಳನ್ನು ನಿಷ್ಕಳಂಕರೆಂದು ಪರಿಗಣಿಸಲಾಗುವವರೆಗೆ ಅಥವಾ ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ಜೈಲಿನಲ್ಲಿ ಇರಿಸಬೇಕು” ಎಂಬ ತುಷಾರ್ ಮೆಹ್ತಾ ಅವರ ಮಾತುಗಳು ಭಾರತೀಯ ಸಂವಿಧಾನ, ನ್ಯಾಯದ ತತ್ವಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ವಿರುದ್ಧವಾಗಿವೆ ಎಂದು ಅವರು ಹೇಳಿದ್ದಾರೆ.
2020ರ ಹಿಂಸಾಚಾರದಲ್ಲಿ 53 ಮಂದಿ ಪ್ರಾಣ ಕಳೆದುಕೊಂಡಿದ್ದು, ಹೆಚ್ಚಿನವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು. ಆದರೆ ಈ ಪ್ರಕರಣದ ತನಿಖೆಯಲ್ಲಿ ದೆಹಲಿ ಪೊಲೀಸ್ ತೀವ್ರ ಪಕ್ಷಪಾತ ಹಾಗೂ ಅಸಮರ್ಥತೆಯನ್ನು ತೋರಿಸಿದೆ. ವಿಶೇಷವಾಗಿ ಉಗ್ರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ನಡೆದ “ವಿಸ್ತೃತ ಸೂತ್ರಧಾರೆ” ಪ್ರಕರಣದಲ್ಲಿ ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಮುಂತಾದ ಹೋರಾಟಗಾರರು ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ವಿಚಾರಣೆಯಿಲ್ಲದೇ ಬಂಧನದಲ್ಲಿರುವುದು, ನ್ಯಾಯದ ಮೂಲ ತತ್ವಗಳ ವಿರುದ್ಧವಾಗಿದೆ.
ಇದೇ ಪ್ರಕರಣದಲ್ಲಿ ನ್ಯಾಯಾಲಯಗಳು ತಮ್ಮ ಅಭಿಪ್ರಾಯದಲ್ಲಿ ದೆಹಲಿ ಪೊಲೀಸ್ ತನಿಖೆ “ಪಕ್ಷಪಾತಪೂರ್ಣ” ಮತ್ತು “ಅಜಾಗರೂಕ”ವಾಗಿದೆ ಎಂದು ಪ್ರಸ್ತಾಪಿಸಿ ಸಾಕ್ಷ್ಯಾಧಾರಗಳ ಕೊರತೆಯನ್ನೂ, ವೈಪರಿತ್ಯತೆಗಳನ್ನೂ ತೋರಿಸಿವೆ. 757 ಪ್ರಕರಣಗಳಲ್ಲಿ 183 ಮಂದಿ ಬಿಡುಗಡೆಗೊಂಡಿದ್ದು, ಕೇವಲ 47 ಪ್ರಕರಣಗಳಲ್ಲಿ ದೋಷಾರೋಪಣೆಯಾಗಿದೆ. ಇದರಿಂದ ತನಿಖೆಯ ದೌರ್ಬಲ್ಯ ಸ್ಪಷ್ಟವಾಗುತ್ತದೆ.
SG ತುಷಾರ್ ಮೆಹ್ತಾ ಅವರ ಮಾತುಗಳು ಉಗ್ರ ಕಾನೂನುಗಳನ್ನು ದುರುಪಯೋಗಪಡಿಸಿಕೊಂಡು ಸಿಎಎ ವಿರೋಧಿ ಹೋರಾಟಗಾರರು ಮತ್ತು ಅಲ್ಪಸಂಖ್ಯಾತರ ವಿರುದ್ಧ ದಮನಾತ್ಮಕ ಕ್ರಮ ಕೈಗೊಳ್ಳುವ ಪ್ರಯತ್ನವಾಗಿದೆ. ಹಿಂಸೆಗೆ ಪ್ರಚೋದನೆ ನೀಡಿದ ಇತರರಿಗೆ ಷಡ್ಯಂತ್ರದ ಭಾಗವೆಂದು ನೋಡದೆ ನಿರ್ಲಕ್ಷ್ಯ ಮಾಡುವ ಪಡ್ಧತಿಯು ನ್ಯಾಯಕ್ಕೆ ಧಕ್ಕೆ ತಂದಿದೆ.

SDPI ಈ ಕೆಳಗಿನ ಬೇಡಿಕೆಗಳನ್ನು ಮಂಡಿಸುತ್ತದೆ:

  • ನ್ಯಾಯವಿಲ್ಲದೇ ಬಂಧಿತರನ್ನು ತಕ್ಷಣ ಜಾಮೀನಿನಲ್ಲಿ ಬಿಡುಗಡೆ ಮಾಡಬೇಕು
  • ನ್ಯಾಯದ ಪ್ರಕ್ರಿಯೆ ವೇಗಗೊಳಿಸಬೇಕು
  • ತನಿಖಾ ದೌರ್ಬಲ್ಯದ ಮೇಲೆ ಸ್ವತಂತ್ರ ತನಿಖೆ ನಡೆಯಬೇಕು
  • UAPA ಕಾಯ್ದೆಯಲ್ಲಿ ತಕ್ಷಣದ ಸುಧಾರಣೆಗಳನ್ನು ತರಬೇಕು

ನಾವು ಬಾಧಿತರೊಂದಿಗೆ ನಿಂತಿರುವೆವು. ನ್ಯಾಯಾಲಯಗಳು ಸಂವಿಧಾನಬದ್ಧ ಹಕ್ಕುಗಳನ್ನು, ನ್ಯಾಯಪ್ರಕ್ರಿಯೆಯ ಮೌಲ್ಯಗಳನ್ನು ಹಾಗೂ ಕಾನೂನು ವೈಭವವನ್ನು ಉಳಿಸಬೇಕು ಎಂಬುದು ನಮ್ಮ ಬಲವಾದ ಆಗ್ರಹವಾಗಿದೆ.

admin

Recent Posts

ಸ್ವಾತಂತ್ರ್ಯ ಪ್ರಯುಕ್ತ ಸಭಾ ಕಾರ್ಯಕ್ರಮ

INDEPENDENCE DAY CELEBRATION 15.08.2025 | ಮಧ್ಯಾನ : 3:00 | ಡೈಮಂಡ್ ಹಾಲ್ ಹತ್ತಿರ ರೈಲ್ವೆ ಸ್ಟೇಷನ್ ರೋಡ್‌…

4 days ago

ಸ್ವಾತಂತ್ರ್ಯವನ್ನು ರಕ್ಷಿಸೋಣ, ರಾಷ್ಟ್ರವನ್ನು ಉಳಿಸೋಣ

Let's Protect the Freedom, Save the Nation آئیے آزادی کی حفاظت کرین ملک کو بچائیں…

4 days ago

79 Happy Independence Day

Let's Protect The Freedom, Save The Nation "Let us remember the sacrifices that brought us…

4 days ago