ಬೆಂಗಳೂರು: ಜುಲೈ 21 ಧರ್ಮಸ್ಥಳದಲ್ಲಿ ನೂರಾರು ಹೆಣ್ಣುಮಕ್ಕಳ ಮತ್ತು ಮಹಿಳೆಯರ ಅಸಹಜ ಸಾವುಗಳು,
ಹೊರಬಂದು ಅತ್ಯಾಚಾರ ಹಾಗೂ ಕೊಲೆ ಶಂಕಿತ ಪ್ರಕರಣಗಳು ದೇಶವನ್ನು ಬೆಚ್ಚಿ ಬೀಳಿಸಿದೆ . ಈ ಪ್ರಕರಣಗಳ ಸತ್ಯ ನೊಂದ ಕುಟುಂಬಗಳಿಗೆ ನ್ಯಾಯ ದೊರೆಯಬೇಕು ಮತ್ತು ಅಪರಾಧಿಗಳು ಅದೆಷ್ಟೇ ಬಲಿಷ್ಠರಾದರೂ ಅವರಿಗೆ ಕಾನೂನು ನೀಡುವ ಗರಿಷ್ಠ ಶಿಕ್ಷೆ ವಿಧಿಸಲು ಸರಕಾರ ಯಾವುದೇ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತ ಪ್ರಾಮಾಣಿಕ ತನಿಖೆ ನಡೆಸಲು ತನಿಖಾ ತಂಡಕ್ಕೆ ಮುಕ್ತ ಸ್ವಾತಂತ್ರ ನೀಡಬೇಕು ಎಂದು SDPI ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಸರಕಾರವನ್ನು ಒತ್ತಾಯಿಸಿದರು. ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ಕೊಲೆ ಶಂಕಿತ ಪ್ರಕರಣಗಳನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅಬ್ದುಲ್ ಮಜೀದ್ ಮಾತನಾಡುತಿದ್ದರು. ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಕೊಲೆ ಪ್ರಕರಣಗಳು ಗಂಭೀರ ಸವಾಲಾಗಿ ಪರಿಣಮಿಸಿರುವ ಈ ಘಟನೆಗೆ ನಿಷ್ಪಕ್ಷಪಾತ ಹಾಗೂ ಸುಧಾರಿತ ತನಿಖೆ ನಡೆಯಬೇಕೆಂಬುದು SDPIಯ ನಿಲುವಾಗಿದೆ, ಇದಕ್ಕಾಗಿ ಪಕ್ಷವು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ರಾಜ್ಯದಾದ್ಯಂತ ಹೋರಾಟಗಳನ್ನು ಸಂಘಟಿಸಿತ್ತು SDPI ಸೇರಿದಂತೆ ರಾಜ್ಯದ ಹಿರಿಯ ವಕೀಲರು ನಿವೃತ್ತ ನ್ಯಾಯಾಧೀಶರು ಧ್ವನಿ ಎತ್ತಿದ ಬಳಿಕ ರಾಜ್ಯ ಸರಕಾರ ತಡವಾಗಿಯಾದರೂ ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿರುವುದನ್ನು ಎಸ್‌ಡಿಪಿಐ ಸ್ವಾಗತಿಸುತ್ತದೆ. ಸರಕಾರದ ಈ ಕ್ರಮವು ಸಾರ್ವಜನಿಕ ಒತ್ತಡಕ್ಕೆ ಸಿಕ್ಕ ಸ್ಪಂದನೆಯಾಗಿದೆ ಇಂತಹ ಗಂಭೀರ ಘಟನೆಗಳು ನಡೆದಾಗ ಜವಾಬ್ದಾರಿಯುತ ಸ್ಥಾನದಲ್ಲಿರುವ ಸರಕಾರ ಕಾಲಹರಣ ಮಾಡದೆ ತನ್ನ ಕರ್ತವ್ಯವನ್ನು ನಿರ್ವಹಿಸಬೇಕು ತನಿಖೆ ತಡವಾದಂತೆ ಸಾಕ್ಷಿಗಳು ಮತ್ತು ಘಟನೆಯ ಕುರುಹುಗಳನ್ನು ನಾಶ ಪಡಿಸುವ ಸಾಧ್ಯತೆ ಇದೆ ಇದು ಈ ಹಿಂದಿನ ಘಟನೆಗಳಿಂದ ಸಾಬೀತಾದ ಸಂಗತಿಯಾಗಿದೆ ಎಂದು ಅಬ್ದುಲ್ ಮಜೀದ್ ಮೈಸೂರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿಭಟನೆಯ ಮೂಲಕ ಪಕ್ಷವು ರಾಜ್ಯ ಸರಕಾರದ ಗಮನಕ್ಕೆ ಈ ಕೆಳಕಂಡ ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದೆ
1) SIT ತನಿಖೆಯ ಮೇಲ್ವಿಚಾರಣೆ ಹೈಕೋರ್ಟ್ ನ್ಯಾಯಮೂರ್ತಿಯಿಂದ ನಡೆಯಬೇಕು.
ಈ ಪ್ರಕರಣದ ಸತ್ಯಾಸತ್ಯತೆ ಹೊರತರುವಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕಾಗಿದೆ. ಹೀಗಾಗಿ ಪೊಲೀಸ್ ಇಲಾಖೆ ಅಥವಾ ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾದ ಹೈಕೋರ್ಟ್ ನ್ಯಾಯಮೂರ್ತಿಯವರಿಂದ SIT ಮೇಲ್ವಿಚಾರಣೆ ನಡೆಸಬೇಕು.
2) ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಬೇಕು.
ಈ ಪ್ರಕರಣದಲ್ಲಿ ನ್ಯಾಯದ ಮಾರ್ಗದಲ್ಲಿಯೇ ಸಮರ್ಪಕ ಪ್ರಾಸಿಕ್ಯೂಷನ್ ಕಾರ್ಯ ನಡೆಯಲು, ಅನುಭವ ಮತ್ತು ಅತ್ಯುತ್ತಮ ಕೌಶಲ್ಯ ಹೊಂದಿದ ವಿಶೇಷ ಸರ್ಕಾರಿ ಅಭಿಯೋಜಕರ ನೇಮಕ ಅತ್ಯವಶ್ಯಕವಾಗಿದೆ.
3) ಸಂತಸ್ತರಿಗೆ ತ್ವರಿತ ನ್ಯಾಯ ಸಿಗಬೇಕೆಂಬ ದೃಷ್ಟಿಯಿಂದ ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲು ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್ ರಚಿಸಬೇಕು ಎಂಬ ಒತ್ತಾಯವನ್ನು ಮಂಡಿಸಲಾಯಿತು .
4.ಎಲ್ಲಾ ಮಹಜರುಗಳನ್ನು ವಿಡಿಯೋ ಮಾಡಬೇಕು.
ಪ್ರತಿಭಟನೆಯಲ್ಲಿ SDPI ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಜಾವಿದ್ ಆಝಮ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಸಲೀಂ ಅಹಮದ್, ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷರಾದ ಅಶ್ರಫ್ ಅಡ್ಡರು, ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಹಾಗೂ ಇತರ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಕರ್ನಾಟಕ SDPIKarnataka #Dharmasthala
SDPIKarnataka #happyindependenceday2025 #79thIndependenceDay #Mangalore
ಹಾರ್ದಿಕ ಸ್ವಾಗತ ಬಯಸುವ ~ಅನ್ವರ್ ಸಾದತ್ ಎಸ್,ಜಿಲ್ಲಾಧ್ಯಕ್ಷರು SDPI ಮಂಗಳೂರು ಗ್ರಾಮಾಂತರ ಜಿಲ್ಲೆ
INDEPENDENCE DAY CELEBRATION 15.08.2025 | ಮಧ್ಯಾನ : 3:00 | ಡೈಮಂಡ್ ಹಾಲ್ ಹತ್ತಿರ ರೈಲ್ವೆ ಸ್ಟೇಷನ್ ರೋಡ್…
Let's Protect the Freedom, Save the Nation آئیے آزادی کی حفاظت کرین ملک کو بچائیں…
Let's Protect The Freedom, Save The Nation "Let us remember the sacrifices that brought us…