ಪತ್ರಿಕಾ ಪ್ರಕಟಣೆ*ಸ್ಥಳೀಯ ಸಂಸ್ಥೆಗಳ ಆಡಳಿತವು ಪ್ರಜಾಪ್ರಭುತ್ವದ ಅಡಿಪಾಯ: ಆಯ್ಕೆಯಾದ ಪ್ರತಿನಿಧಿಗಳು ಕಾರ್ಯಕ್ಷಮತೆಯ ಮೂಲಕ ಪಕ್ಷವನ್ನು ‘Emerging to Power’ ದಿಕ್ಕಿಗೆ ಮುನ್ನಡೆಸಬೇಕು” – ಅಫ್ಸರ್ ಕೊಡ್ಲಿಪೇಟೆ* *ಕಲ್ಯಾಣ ಕರ್ನಾಟಕ ಭಾಗದ ಎಸ್‌ಡಿಪಿಐ ಜನಪ್ರತಿನಿಧಿಗಳ ಸಭೆ**ಗುಲ್ಬರ್ಗ : 4 ಆಗಷ್ಟ್ 2025 –* ಸ್ಥಳೀಯ ಸಂಸ್ಥೆಗಳ ಆಡಳಿತವು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ ಎಂಬ ಘೋಷಣೆಯೊಂದಿಗೆ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ವ್ಯಾಪ್ತಿಯ ಎಸ್‌ಡಿಪಿಐ ಪಕ್ಷದ ಚುನಾಯಿತ ಜನಪ್ರತಿನಿಧಿಗಳ ಮೇಲುಸ್ತುವಾರಿಗಳ (ERM) ವಿಶೇಷ ಸಭೆ, ರಾಜ್ಯ ಪ್ರದಾನ ಕಾರ್ಯದರ್ಶಿ ಮತ್ತು ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ERM ಉಸ್ತುವಾರಿ ಅಬ್ರಾರ್ ಅಹ್ಮದ್ ರವರ ನೇತೃತ್ವದಲ್ಲಿ ಗುಲ್ಬರ್ಗ ನಗರದಲ್ಲಿ ಜರುಗಿತು.ಸಭೆಯಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಅಫ್ಸರ್ ಕೊಡ್ಲಿಪೇಟೆ ಅವರು, “ಪಕ್ಷದ ರಾಜಕೀಯ ಶಕ್ತಿ ಹಾಗೂ ಸಾರ್ವಜನಿಕ ಪ್ರಭಾವವನ್ನು ವಿಸ್ತರಿಸಲು ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಪ್ರಮುಖವಾಗಿವೆ. ಈ ಹಿನ್ನಲೆಯಲ್ಲಿ, ಪಕ್ಷದ ಪರವಾಗಿ ಆಯ್ಕೆಯಾದ ಪ್ರತಿನಿಧಿಗಳು ರಾಜಕೀಯ ಬದ್ಧತೆ, ನೈತಿಕತೆ ಮತ್ತು ಕಾರ್ಯಕ್ಷಮತೆಯ ಮೂಲಕ ಪಕ್ಷವನ್ನು ‘Emerging to Power’ ದಿಕ್ಕಿಗೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿದೆ,” ಎಂದು ಸೂಚಿಸಿದರು.ಅಬ್ರಾರ್ ಅಹ್ಮದ್ ಮಾತನಾಡುತ್ತಾ, “ಪಕ್ಷದ ಪರವಾಗಿ ಆಯ್ಕೆಯಾದ ಪ್ರತಿನಿಧಿಗಳು ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ನಿರಂತರ ತರಬೇತಿಗಳಲ್ಲಿ ಭಾಗವಹಿಸಿ ಉತ್ತಮ ಆಡಳಿತದ ಮಾದರಿಯನ್ನು ನೀಡಬೇಕು,” ಎಂದು ಸಲಹೆ ನೀಡಿದರು.ಸಭೆಯಲ್ಲಿ ಪಾಲ್ಗೊಂಡ ಶಹಾಪುರ ನಗರಸಭಾ ಸದಸ್ಯೆ ಫಿರ್ದೋಸ್ ಖಾತೂನ್, ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು ಬಳ್ಳಾರಿ ಮತ್ತು ಬೀಜಾಪುರ ಜಿಲ್ಲೆಗಳ ವಿವಿಧ ಪಂಚಾಯಿತಿಗಳ ಸದಸ್ಯರು ಮತ್ತು ಚುನಾಯಿತ ಪ್ರತಿನಿಧಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತ, ಸ್ಥಳೀಯ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು, ಸರಕಾರದ ಯೋಜನೆಗಳ ಅನುಷ್ಠಾನ ಹಾಗೂ ಜನರ ವಿಶ್ವಾಸ ಗಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.ಈ ಸಭೆ, ಪಕ್ಷದ ಜನಪರ ರಾಜಕೀಯ ಭದ್ರತೆಗಾಗಿ ದಿಕ್ಕು ತೋರಿದ ಹೆಜ್ಜೆಯಾಗಿದ್ದು, ಮುಂದಿನ ರಾಜಕೀಯ ಬೆಳವಣಿಗೆಗೆ ಬುನಾದಿ ಕಲ್ಪಿಸಿದೆ.ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ರಹೀಮ್ ಪಟೇಲ್, ಗುಲ್ಬರ್ಗ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಮೋಹಿಸಿನ್, ಯಾದಗಿರಿ ಜಿಲ್ಲಾಧ್ಯಕ್ಷರಾದ ಇಸಾಖ್  ಹುಸೇನ್, ಗುಲ್ಬರ್ಗ ಜಿಲ್ಲಾ ಕಾರ್ಯದರ್ಶಿ ಹಾಗೂ ERM ಉಸ್ತುವಾರಿ ಶಕೀಲ್ ಪಟೇಲ್ ಹಾಜರಿದ್ದರು.

admin

Recent Posts

ಕನ್ನಡ ರಾಜ್ಯೋತ್ಸವಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕಎಸ್.ಡಿ.ಪಿ.ಐ ಸಂಕಲ್ಪ

ಒಲವಿನ ಕರ್ನಾಟಕ 1 ನವೆಂಬರ್ 2025 ನಮ್ಮ ನಾಡು, ನಮ್ಮ ನುಡಿ, ನಮ್ಮ ಹೆಮ್ಮೆ ಕರ್ನಾಟಕ ಕನ್ನಡ ನಾಡಿನ ಶಾಂತಿ,…

3 hours ago

ಕನ್ನಡ ರಾಜ್ಯೋತ್ಸವಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕಎಸ್.ಡಿ.ಪಿ.ಐ ಸಂಕಲ್ಪ

ಒಲವಿನ ಕರ್ನಾಟಕ 1 ನವೆಂಬರ್ 2025 ಕನ್ನಡದಲ್ಲೇ ಮಾತನಾಡೋಣ, ಕನ್ನಡದಲ್ಲೇ ವ್ಯವಹರಿಸೋಣ, ಹೆಮ್ಮೆಯ ಕನ್ನಡಿಗರಾಗೋಣ ನಾವೆಲ್ಲರೂ ಜೊತೆಯಾಗಿ ಕನ್ನಡ ನಾಡು…

4 hours ago

ಕನ್ನಡ ರಾಜ್ಯೋತ್ಸವಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ ಎಸ್.ಡಿ.ಪಿ.ಐ ಸಂಕಲ್ಪ

ಒಲವಿನ ಕರ್ನಾಟಕ 1 ನವೆಂಬರ್ 2025 ಕನ್ನಡ ನನ್ನ ಕನಸು ಕನ್ನಡ ನನ್ನ ಮನಸ್ಸು ಕನ್ನಡಿಗನೆಂಬ ಹೆಮ್ಮೆ ಸೊಗಸು ನಾವೆಲ್ಲ…

7 hours ago

ಕರ್ನಾಟಕ ರಾಜ್ಯೋತ್ಸವ

ಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ ಎಸ್.ಡಿ.ಪಿ.ಐ ಸಂಕಲ್ಪ ಒಲವಿನ ಕರ್ನಾಟಕ 01 ನವೆಂಬರ್ 2025 ಎಸ್‌ಡಿಪಿಐ ಕರ್ನಾಟಕ ರಾಜ್ಯಾದ್ಯಂತ ಕನ್ನಡ…

2 days ago

اقلیتوں کی فلاح و بہبود کے لیے

مختص رقم کہاں گئی؟ وائٹ پیپر جاری کرو ایس ڈی پی آئی 2025-26 کے بجٹ…

5 days ago

Aqalliyaton ki falah-o-behbood ke liye

Maqsoos Budget ki Raqham kahan gayi? White Paper jari karo - SDPI 2025-26 ke budget…

5 days ago