ಪತ್ರಿಕಾ ಪ್ರಕಟಣೆದಿನಾಂಕ: 06,ಆಗಸ್ಟ್ 2025*ಸಾರಿಗೆ ನೌಕರರ ಬೇಡಿಕೆಗಳನ್ನು ಸರಕಾರ ತಕ್ಷಣ ಈಡೇರಿಸಬೇಕು – ಎಸ್‌ಡಿಪಿಐ*ಸಾರಿಗೆ ಇಲಾಖೆಯ ನೌಕರರ ನ್ಯಾಯಯುತ ಬೇಡಿಕೆಗಳನ್ನು ಸರಕಾರ ತಕ್ಷಣ ಈಡೇರಿಸುವಂತೆ *ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್. ಭಾಸ್ಕರ್ ಪ್ರಸಾದ್* ಪತ್ರಿಕಾ ಪ್ರಕಟಣೆಯಲ್ಲಿ  ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರುರಾಜ್ಯದಾದ್ಯಂತ ಸಾರಿಗೆ ನೌಕರರ ಆಂದೋಲನದಿಂದಾಗಿ ಸಾವಿರಾರು ಪ್ರಯಾಣಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಸಾಮಾನ್ಯ ಜನರ ದಿನನಿತ್ಯದ ಸಂಚಾರ ಅಸ್ತವ್ಯಸ್ತವಾಗಿದ್ದು, ವಿದ್ಯಾರ್ಥಿಗಳು, ಉದ್ಯೋಗಿಗಳು, ಆಸ್ಪತ್ರೆಗಳಿಗೆ ತೆರಳುವವರು ಸೇರಿದಂತೆ ಎಲ್ಲಾ ವರ್ಗದ ಜನರು ಮುಷ್ಕರದ ಪರಿಣಾಮ ಎದುರಿಸುತ್ತಿದ್ದಾರೆ.ಸಾರಿಗೆ ನೌಕರರ ಬೇಡಿಕೆಗಳು ದೀರ್ಘಕಾಲದಿಂದ ಬಾಕಿ ಉಳಿದಿವೆ. ಅವರ ಹಕ್ಕು, ಭದ್ರತೆ ಹಾಗೂ ವೇತನ ಸಂಬಂಧಿತ ಸಮಸ್ಯೆಗಳ ಬಗ್ಗೆ ಸರಕಾರ ನಿರ್ಲಕ್ಷ್ಯ ತೋರುತ್ತಿರುವುದು ವಿಷಾದನೀಯ. ಜನತೆಗೆ ತೊಂದರೆ ಉಂಟಾಗದಂತೆ ಸರಕಾರ ತಕ್ಷಣ ಕ್ರಮ ಕೈಗೊಂಡು ನೌಕರರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ. ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಸಾರ್ವಜನಿಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದುದರಿಂದ ಸರಕಾರವು ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಸೂಕ್ತ ಸಂವಾದ ನಡೆಸಿ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಬೇಕು ಮತ್ತು ಅವರ ಬೇಡಿಕೆಗಳನ್ನು ಅರ್ಥಮಾಡಿಕೊಂಡು ಸಮನ್ವಯ ಸಾಧಿಸುವುದು ಆಡಳಿತ ಪಕ್ಷದ ಕರ್ತವ್ಯವಾಗಿದೆ ಎಂದು *ಬಿ. ಆರ್. ಭಾಸ್ಕರ್ ಪ್ರಸಾದ್* ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

admin

Recent Posts

ದಾವಣಗೆರೆ ಪಕ್ಷೇತರ ಅಭ್ಯರ್ಥಿಯಿಂದ ಅಫ್ಸರ್ ಕೊಡ್ಲಿಪೇಟೆಗೆ ಬೆಂಬಲ

ಕಾಂಗ್ರೆಸ್ಸಿನ ಹಿರಿಯ ಮುಖ೦ಡರು ದಾವಣಗೆರೆ ಉಪಚುನಾವಣೆಯ ಪಕ್ಷೇತರ ಅಭ್ಯರ್ಥಿಯೂ ಆದ ಎಚ್ ಸುಭಾನ್ ರವರು ಎಸ್ ಡಿ ಪಿ ಐ…

57 minutes ago

ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರ ಉಪ ಚುನಾವಣೆ -2026

ABHI NAHI ТОН КАВНІ NAHI SDPI ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ರವರ ಚುನಾವಣಾ ಪ್ರಚಾರಾರ್ಥವಾಗಿ ಬೃಹತ್ ర్యాలి ದಿನಾಂಕ…

3 hours ago

ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರ ಉಪ ಚುನಾವಣೆ -2026

Abhi Nahi tho kabhi nahiಸ್ವಾಭಿಮಾನಕ್ಕಾಗಿ ಮತ ನೀಡಿ SDPI ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಅವರಬೃಹತ್ ಪ್ರಚಾರ ಸಮಾವೇಶ PLACE…

2 days ago

ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರ ಉಪಚುನಾವಣೆ

ಬದಲಾಯಿಸಿ ನೋಡಿ ಬದಲಾವಣೆ ಆಗುತ್ತೆ ABHI NAHI TO KABHI NAHI ಗುಲಾಮಗಿರಿಯ ರಾಜಕಾರಣ ಅಳಿಸೋಣ ಭಯ ಬೆದರಿಕೆಗೆ ತಕ್ಕ…

1 week ago