ಮತ್ತೆ ಮತ್ತೆ ಆರ್ ಎಸ್ಎಸ್ ಖೇಡ್ದಾಕ್ಕೆ ಬೀಳುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರ – ಬಲಿ ಪಶುಗಳಾಗುತ್ತಿರುವ ಮುಸ್ಲಿಮರು
ಬೆಂಗಳೂರು : ಸೆಪ್ಟೆಂಬರ್ :10:
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಸುಮಾರು 95% ಮುಸ್ಲಿಂ ಸಮುದಾಯದ ಮತಗಳಿಂದ ಅಧಿಕಾರಕ್ಕೆ ಬಂದಿದ್ದರೂ, ಇಂದು ಆ ಸರ್ಕಾರವೇ ಬಿಜೆಪಿ, ಆರ್.ಎಸ್.ಎಸ್, ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ಮುಂತಾದ ಕೋಮುವಾದಿ ಸಂಘಟನೆಗಳ ಒತ್ತಡಕ್ಕೆ ತಲೆಬಾಗುತ್ತಿದೆ. ಇದರ ಪರಿಣಾಮವಾಗಿ ಮುಸ್ಲಿಂ ಸಮುದಾಯವನ್ನು ಅವಮಾನಿಸುವ, ಹೀನಾಯಗೊಳಿಸುವ ಹೇಳಿಕೆಗಳು ಹೆಚ್ಚಳವಾಗುತ್ತಿದೆ .
ಉಪಮುಖ್ಯಮಂತ್ರಿಯಾದ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯೊಳಗೆ ಆರ್.ಎಸ್.ಎಸ್ ಗೀತೆಯನ್ನು ಹಾಡಿದ ಘಟನೆ, ಇಂದು ಗೃಹ ಸಚಿವ ಡಾ.ಪರಮೇಶ್ವರ್ ಅವರು ಎ.ಬಿ.ವಿ.ಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು, ಶ್ರಿರಂಗಪಟ್ಟಣದ ಕಾಂಗ್ರೆಸ್ ಶಾಸಕನ ಮುಸ್ಲಿಂ ವಿರೋಧಿ ಹೇಳಿಕೆ ಹಾಗೂ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆಗೆ ಸಂಬಂಧಿಸಿದ ಘಟನೆಯಲ್ಲಿ ಖುದ್ದು ಐಜಿಪಿ ಯವರು ಪತ್ರಿಕಾಗೋಷ್ಠಿ ನಡೆಸಿ ಮಸೀದಿಯಿಂದ ಯಾವುದೇ ಕಲ್ಲು ತೂರಾಟ ಆಗಿರುವ ಸಿಸಿ ಟಿವಿ ಪೋಟೇಜ್ ಇಲ್ಲ ಎಂಬ ಹೇಳಿಕೆ ನೀಡಿದ್ದರೂ “ನಾವು ಕೇವಲ ಮುಸ್ಲಿಮರನ್ನು ಮಾತ್ರ ಬಂಧಿಸಿದ್ದೇವೆ, ಒಬ್ಬ ಹಿಂದುವನ್ನೂ ಬಂಧಿಸಿಲ್ಲ” ಎಂಬ ಅವಮಾನಕಾರಿ ಹೇಳಿಕೆ, ಇವು ಕಾಂಗ್ರೆಸ್ ಸರ್ಕಾರವು ಸಂವಿಧಾನಿಕ ಮೌಲ್ಯಗಳನ್ನು ತುಳಿಯುತ್ತಾ, ಧರ್ಮದ ಆಧಾರದ ಮೇಲೆ ಪಕ್ಷಪಾತದ ನಿಲುವು ತಾಳುತ್ತಿದೆ ಎಂಬುದನ್ನು ತೋರಿಸುತ್ತವೆ.
ಇದರಲ್ಲಿ ಮತ್ತೊಂದು ಸ್ಪಷ್ಟ ಚಿತ್ರಣವೆಂದರೆ— ಕಾಂಗ್ರೆಸ್ ನಾಯಕರು ಮೊದಲಿಗೆ ತಪ್ಪು ಮಾಡುತ್ತಾರೆ, ನಂತರ ಅದನ್ನು ಮುಚ್ಚಿಹಾಕಲು ಅಥವಾ ಸಮರ್ಥಿಸಲು ಗೊಂದಲ ಸೃಷ್ಟಿಸುತ್ತಾರೆ. ಇದು ಜನರಲ್ಲಿ ಅನುಮಾನ ಹುಟ್ಟಿಸುತ್ತದೆ. ಕಾಂಗ್ರೆಸ್ ನಾಯಕರು ನಿಜವಾಗಿಯೂ ಸಂವಿಧಾನದ ಮಾರ್ಗದಲ್ಲಿದ್ದರಾ, ಅಥವಾ ಸಂಘ ಪರಿವಾರದ ಆಟವನ್ನು ಆಡಿಕೊಂಡೇ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರಾ?
“ಧರ್ಮನಿರಪೇಕ್ಷ ಸರ್ಕಾರ” ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರ, ಧಾರ್ಮಿಕ ದ್ವೇಷ ಹರಡುವ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದವರು, ಧಾರ್ಮಿಕ ಧ್ವಜಗಳನ್ನು ದಹಿಸಿದವರು ಹಾಗೂ ಪ್ರತಾಪ್ ಸಿಂಹ, ಮತ್ತು C.T. ರವಿ ಮುಂತಾದವರು ನೀಡಿದ ಧಾರ್ಮಿಕ ದ್ವೇಷ ಹರಡುವ ಅಪರಾಧಿ ಹೇಳಿಕೆಗಳ ವಿರುದ್ಧ ಯಾವ ಕಾನೂನು ಕ್ರಮ ಕೈಗೊಂಡಿದೆ ಎಂಬುದನ್ನು ಉತ್ತರಿಸಬೇಕು.
ಅಪರಾಧಿ ಯಾವ ಧರ್ಮದವನಾಗಿದ್ದರೂ ಅವನನ್ನು ಕಾನೂನಿನ ಪ್ರಕಾರ ಬಂಧಿಸುವುದು ಸರ್ಕಾರದ ಕರ್ತವ್ಯ. ಆದರೆ, ಒಂದು ಸಮುದಾಯವನ್ನೇ ಗುರಿ ಮಾಡಿಕೊಂಡು ಬಂಧಿಸುವುದು ಸಂವಿಧಾನ ವಿರೋಧಿ ಹಾಗೂ ಸಮಾಜದಲ್ಲಿ ಅಸಮಾಧಾನವನ್ನು ಉಂಟುಮಾಡುವ ನಡೆಯಾಗಿದೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI), ಕರ್ನಾಟಕ, ಕಾಂಗ್ರೆಸ್ ಸರ್ಕಾರದ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತದೆ. . ಇಂತಹ ಹೀನ ಹೇಳಿಕೆಗಳು ಮತ್ತು ಅಸಮಾನತೆ ಮುಂದುವರಿದರೆ, ಎಸ್‌ಡಿಪಿಐ ರಾಜ್ಯದಾದ್ಯಂತ ಭಾರಿ ಜನಾಂದೋಲನ ನಡೆಸಿ, ಕಾಂಗ್ರೆಸ್ ಸರ್ಕಾರದ ಕರಾಳ ಮುಖವನ್ನು ಬಯಲಿಗೆಳೆದು ತೋರಿಸುವ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ನಾವು ಕರ್ನಾಟಕ ಸರ್ಕಾರವನ್ನು ಎಚ್ಚರಿಸುತ್ತಿದ್ದೇವೆ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI), ಕರ್ನಾಟಕ
Press Release Gulbarga, Sept 11:At the SDPI leaders’ meeting held in Gulbarga today, the party’s…
پریس ریلیز بنگلورو : 10 ستمبر : کرناٹک میں کانگریس حکومت تقریباً 95% مسلم برادری…
BAAR BAAR RSS KE JAAL MEIN PHANS'TI HUI RIYAASTI CONGRESS HUKUMAT -QURBANI KE BAKRAY BAN…
ರಾಯಚೂರಿನಲ್ಲಿ ನಡೆದ ನಾಯಕರ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್, ರಾಜ್ಯ ನಾಯಕರು ಅಬ್ದುಲ್ ರಹೀಮ್ ಪಟೇಲ್ ಹಾಗೂ ಅಕ್ಟರ್…
ಮಾನ್ಯ ಡಿ.ಜಿ.ಪಿ ರವರೇ, ತಕ್ಷಣ ಮಧ್ಯ ಪ್ರವೇಶಿಸಿ, ಧ್ವನಿವರ್ಧಕ ಪರವಾನಿಗೆಯನ್ನು ನೀಡಬೇಕಾಗಿ ಆಗ್ರಹಿಸುತ್ತೇನೆ. ~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI ಕರ್ನಾಟಕ