~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು
ಬೆಳ್ತಂಗಡಿ: ದೇಶ ಹಾಗೂ ದೇಶದ ಬಡಜನತೆ, ಶೋಷಿತರು ಉಳಿಯಬೇಕಾದರೆ, ಸಂವಿಧಾನವನ್ನು ಉಳಿಸಬೇಕು ಎಂದು ಎಸ್‌ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಹೇಳಿದ್ದಾರೆ.
77 ನೇ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ “ಸಂವಿಧಾನ ಮೌಲ್ಯಗಳ ರಕ್ಷಣೆ – ಗಣರಾಜ್ಯ ಸಂಭ್ರಮ” ಎಂಬ ಘೋಷ ವಾಕ್ಯದೊಂದಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಧ್ವಜಾರೋಹಣ ಹಾಗೂ ಸಭಾ ಕಾರ್ಯಕ್ರಮವು ಅಕ್ಟರ್ ಬೆಳ್ತಂಗಡಿ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿಯಲ್ಲಿ ನಡೆಯಿತು.
ಎಸ್‌ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ರವರು ಧ್ವಜಾರೋಹಣ ನೆರೆವೇರಿಸಿ ಮಾತಾಡಿ, ಗಣರಾಜ್ಯೋತ್ಸವ ದಿನಾಚರಣೆಯ ಭಾಗವಾಗಿ ದೇಶ ಹಾಗೂ ದೇಶದ ಬಡಜನತೆ, ಶೋಷಿತರು ಉಳಿಯಬೇಕಾದರೆ, ಸಂವಿಧಾನವನ್ನು ಉಳಿಸಬೇಕು. ಸಂವಿಧಾನ ಪೂರ್ವದಲ್ಲಿ ಇಲ್ಲದ ಹಕ್ಕುಗಳು ಸಂವಿಧಾನ ಜಾರಿಯ ನಂತರ ಹಲವಾರು ಹಕ್ಕುಗಳು ಸಿಕ್ಕಿದೆ. ಸಂವಿಧಾನವನ್ನು ಉಳಿಸಲು ನಾವೆಲ್ಲರೂ ತಯಾರಾಗಬೇಕು. ಇತ್ತೀಚಿಗೆ ಸಂವಿಧಾನ ವಿರೋಧಿ ಕರಾಳ ಕಾನೂನುಗಳು, NIA ಮತ್ತು ED ಸಂಸ್ಥೆಗಳ ದುರುಪಯೋಗ, ಸರ್ಕಾರವನ್ನು ಪ್ರಶ್ನಿಸುವವರ ಮೇಲೆ UAPA ಹೇರಿ ಅಕ್ರಮ ಬಂಧನ, ಆಳುವವರ ಷಡ್ಯಂತ್ರಗಳು ನಮ್ಮ ಸಂವಿಧಾನದ ಆತ್ಮವನ್ನೇ ದುರ್ಬಲಗೊಳಿಸುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ನೂತನ ರಾಷ್ಟ್ರೀಯ ಕಾರ್ಯದರ್ಶಿ ಅಲ್ಲೋನ್ಸ್ ಫ್ರಾಂಕೋ ಹಾಗೂ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಕಾರ್ಯಕ್ರಮನ್ನು ಉದ್ದೇಶಿಸಿ ಅತಿಥಿ ಮಾತುಗಳನ್ನಾಡಿದರು.
2026-28ರ ಅವಧಿಗೆ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೂತನವಾಗಿ ಆಯ್ಕೆಯಾದ ಅನ್ಫೋನ್ಸ್ ಫ್ರಾಂಕೋ ರವರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮವನ್ನು ಅಲ್ಪಾಕ್ ಪುಂಜಾಲಕಟ್ಟೆ ನಿರೂಪಿಸಿ ಧನ್ಯವಾದ ಮಾಡಿದರು
~ಬಿ. ಆರ್. ಭಾಸ್ಕರ್ ಪ್ರಸಾದ್,ರಾಜ್ಯ ಪ್ರಧಾನ ಕಾರ್ಯದರ್ಶಿ SDPIKarnataka #RepublicDay2026
ಈ ಗಣರಾಜ್ಯೋತ್ಸವವು ಎಲ್ಲರಿಗೂ ಹೊಸಸಂಕಲ್ಪ, ಹೊಸ ಶಕ್ತಿ ಮತ್ತು ದೇಶಸೇವೆಯ ಉತ್ಸಾಹವನ್ನು ನೀಡಲಿ ಎಂದು ಹಾರೈಸುತ್ತೇನೆ. ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ…
~ABDUL HANNAN,State Vice President SDPIKarnataka #RepublicDay2026
ಈ ಎಲ್ಲಾ ಸವಾಲುಗಳ ನಡುವೆಯೂ, ನಮ್ಮ ಸಂವಿಧಾನದ ಮೌಲ್ಯಗಳು ಸಂರಕ್ಷಣೆಗೊಳ್ಳಲು ಒಗ್ಗಟ್ಟಿನ ಹೋರಾಟದ ಅಗತ್ಯವಿದೆ, ಪ್ರಜಾಪ್ರಭುತ್ವದ ಆಧಾರಸ್ತಂಭಗಳು ದೃಢವಾಗಲಿ, ಮತ್ತು…
~Abdul Majeed,State President, SDPI SDPIKarnataka #RepublicDay2026 #RepublicDay