ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ರಾಯಚೂರು ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದ ಇಂದು ಮುದ್ಗಲ್ ನಲ್ಲಿ ಚುನಾವಣಾ ನಿರ್ವಹಣಾ ತರಬೇತಿ ಕಾರ್ಯಾಗಾರವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಾಗಾರದಲ್ಲಿ ಚುನಾವಣಾ ಪ್ರಕ್ರಿಯೆಗಳು, ಪರಿಣಾಮಕಾರಿ ಚುನಾವಣಾ ನಿರ್ವಹಣೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು, ವಿಳಾಸ ಬದಲಾವಣೆ, ಬೂತ್ ನಿರ್ವಹಣೆ, SIR ನ Votters Mapping ಹಾಗೂ ಪಕ್ಷದ ಕಾರ್ಯಕರ್ತರ ಜವಾಬ್ದಾರಿ ಇತ್ಯಾದಿ ವಿಷಯಗಳ ಕುರಿತು ಸಮಗ್ರ ತರಬೇತಿ ನೀಡಲಾಯಿತು.
ಪಕ್ಷದ ಜಿಲ್ಲಾ ಮಟ್ಟದ ಮುಖಂಡರು, ಬೂತ್ ಮಟ್ಟದ ಚುನಾವಣಾ ಉಸ್ತುವಾರಿಗಳು, ವಿಮೆನ್ ಇಂಡಿಯಾ ಮೂಮೆಂಟ್ ನ ನಾಯಕಿಯರು ಮತ್ತು ವಿವಿಧ ಕ್ಷೇತ್ರಗಳ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿದರು. ಈ ತರಬೇತಿ ಕಾರ್ಯಾಗಾರವು ಪಕ್ಷದ ಸಂಘಟನಾ ಬಲವರ್ಧನೆಗೆ, ವಿಶೇಷವಾಗಿ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ತಯಾರಾಗುವ ದೃಷ್ಟಿಯಿಂದ ಬಹುಮುಖ್ಯ ಹೆಜ್ಜೆಯಾಗಿದೆ.
ಸಭೆಯಲ್ಲಿ ಮಾತನಾಡಿದವರು, ಚುನಾವಣೆ ನ್ಯಾಯಸಮ್ಮತವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಲು ಸಂಘಟಿತ ಪ್ರಯತ್ನ, ಪ್ರಬುದ್ದ ಮತದಾರ ಸಂಪರ್ಕ ಹಾಗೂ ನಿಖರ ನಿರ್ವಹಣೆಯ ಅಗತ್ಯತೆಯನ್ನು ಒತ್ತಿಹೇಳಿದರು. ಪ್ರತಿ ಬೂತ್ ಮಟ್ಟದ ಕಾರ್ಯಕರ್ತರೂ ತಮಗೆ ನೀಡಲಾದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ಪಕ್ಷದ ಬಲ ವೃದ್ಧಿಯಾಗುತ್ತದೆ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು.
ಈ ತರಬೇತಿಯನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಸಮಿತಿ ಸದಸ್ಯರುಗಳಾದ ಅಬ್ರಾರ್ ಅಹ್ಮದ್, ಅಕ್ಬರ್ ನಾಗುಂಡಿ ಮತ್ತು ರಾಜ್ಯ ಮುಖಂಡರಾದ ಯೂಸುಫ್ ಮೋದಿ ಅವರು ನಡೆಸಿಕೊಟ್ಟರು.
ಕಾರ್ಯಾಗಾರದಲ್ಲಿ ಚರ್ಚಿಸಲ್ಪಟ್ಟ ಮಾರ್ಗಸೂಚಿಗಳು ಮುಂದಿನ ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ಮಾರ್ಗದರ್ಶಿಯಾಗಲಿವೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರಫಿ ಖಾಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಹ್ಮದ್ ರಝಾ ಖಾಝಿ, ಜಿಲ್ಲಾ ಉಪಾಧ್ಯಕ್ಷರಾದ ಪಾಷಾ ಕಡ್ಡಿಪುಡಿ,, ವಿಮೆನ್ ಇಂಡಿಯಾ ಮೂಮೆಂಟ್ ನ ಜಿಲ್ಲಾಧ್ಯಕ್ಷೆ ಮಾಲನ್ ಬೇಗಂ ಉಪಸ್ಥಿತರಿದ್ದರು.
~ಮೊಹಮ್ಮದ್ ಅಶ್ರಫ್ ಅಂಕಜಾಲ್,SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ SDPIKarnataka #SIR #DelhiProtest
ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಮತದಾನದ ಹಕ್ಕು, ನಮ್ಮ ಪ್ರಜಾಪ್ರಭುತ್ವದ ಆತ್ಮ ಇಂದು ಅಪಾಯದಲ್ಲಿದೆ ಚುನಾವಣಾ ಆಯೋಗವು ಜಾರಿಗೆ ತಂದಿರುವ…
October 8 | 10:30AM Onwards Freedom Park, Bengaluru MASS PROTEST & STATE-LEVEL PEOPLE'S TRIBUNAL ON…
SIR ರದ್ದುಗೊಳಿಸಿ ಅಕ್ಟೋಬರ್ 8 | ಬೆಳಗ್ಗೆ 10:30 ರಿಂದ ಫ್ರೀಡಂ ಪಾರ್ಕ್, ಬೆಂಗಳೂರು ಬೃಹತ್ ಪ್ರತಿಭಟನೆ ಹಾಗೂ SIR…
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿಯಂದು ದೇಶದ ಎಲ್ಲ ಜನತೆಗೆ ಹೃತ್ಪೂರ್ವಕ ಶುಭಾಶಯಗಳು. ಗಾಂಧೀಜಿ ಕಂಡ ಭಾರತ ಸರ್ವಾಧಿಕಾರದ ಭಾರತವಾಗಿರಲಿಲ್ಲ.…