ಪತ್ರಿಕಾ ಪ್ರಕಟಣೆ

ಪತ್ರಿಕಾ ಪ್ರಕಟಣೆ

03.07.2026

ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ತಕ್ಷಣ ನಿಲ್ಲಿಸಬೇಕು; 2014ರ ಕೇಂದ್ರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು:

ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್‌ ಪಾಷಾ ಆಗ್ರಹ

ಬೆಂಗಳೂರು, ಜುಲೈ 3: ಬೆಂಗಳೂರಿನಲ್ಲಿ ಜಿಬಿಎ (GBA) ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಮುಂದಾಗಿರುವ ಕ್ರಮವು ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯದ ಸಂರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ಕಾಯ್ದೆ, 2014ರ ಉದ್ದೇಶ ಮತ್ತು ನಿಯಮಗಳಿಗೆ ವಿರುದ್ಧವಾಗಿದ್ದು, ಇದು ಅಕ್ರಮ ಹಾಗೂ ಅನ್ಯಾಯಕರ ಕ್ರಮವಾಗಿದೆ ಎಂದು ಎಸ್‌ಡಿಪಿಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ ತೀವ್ರವಾಗಿ ಖಂಡಿಸಿದ್ದಾರೆ.

2014ರ ಕೇಂದ್ರ ಕಾಯ್ದೆಯು ಬೀದಿ ಬದಿ ವ್ಯಾಪಾರವನ್ನು ಮಾನ್ಯ ಜೀವನೋಪಾಯವೆಂದು ಗುರುತಿಸಿ, ವ್ಯಾಪಾರಿಗಳನ್ನು ಅನಗತ್ಯ ತೆರವು, ಕಿರುಕುಳ ಹಾಗೂ ಜೀವನೋಪಾಯ ಕಸಿದುಕೊಳ್ಳುವ ಕ್ರಮಗಳಿಂದ ರಕ್ಷಿಸಲು ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಪ್ರಕಾರ ಟೌನ್ ವೆಂಡಿಂಗ್ ಸಮಿತಿ (Town Vending Committee) ರಚನೆ, ಸಮಗ್ರ ಸಮೀಕ್ಷೆ, ಅರ್ಹ ವ್ಯಾಪಾರಿಗಳಿಗೆ ವೆಂಡಿಂಗ್ ಪ್ರಮಾಣಪತ್ರ ವಿತರಣೆ, ವೆಂಡಿಂಗ್ ವಲಯಗಳ ಗುರುತಿಸುವಿಕೆ ಹಾಗೂ ಕಾನೂನುಬದ್ಧ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದೆ ಯಾವುದೇ ವ್ಯಾಪಾರಿಯನ್ನು ತೆರವುಗೊಳಿಸುವಂತಿಲ್ಲ.

ಅದೇ ರೀತಿ, ಸಾರ್ವಜನಿಕ ಉದ್ದೇಶಕ್ಕಾಗಿ ಸ್ಥಳಾಂತರ ಅನಿವಾರ್ಯವಾದ ಸಂದರ್ಭದಲ್ಲಿಯೂ ಸಂಬಂಧಿತ ವ್ಯಾಪಾರಿಗಳಿಗೆ ಸೂಕ್ತ ನೋಟಿಸ್ ನೀಡುವುದು ಹಾಗೂ ಪರ್ಯಾಯ ಸ್ಥಳವನ್ನು ಒದಗಿಸುವುದು ಕಡ್ಡಾಯವಾಗಿದೆ. ಆದರೆ ಬೆಂಗಳೂರಿನಲ್ಲಿ ಈ ಎಲ್ಲ ಕಾನೂನುಬದ್ಧ ನಿಯಮಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಅಧಿಕಾರಿಗಳು ಏಕಪಕ್ಷೀಯವಾಗಿ ತೆರವು ಕಾರ್ಯಾಚರಣೆ ನಡೆಸುತ್ತಿರುವುದು ಅತ್ಯಂತ ಖಂಡನೀಯ.

ಕರ್ನಾಟಕ ಸರ್ಕಾರವು ಈ ಕೇಂದ್ರ ಕಾಯ್ದೆಯ ಅನುಷ್ಠಾನಕ್ಕಾಗಿ ಕರ್ನಾಟಕ ಬೀದಿ ವ್ಯಾಪಾರಿಗಳ (ಜೀವನೋಪಾಯದ ಸಂರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ನಿಯಮಗಳು, 2019 ಅನ್ನು ಜಾರಿಗೆ ತಂದಿದ್ದರೂ, ಅವುಗಳನ್ನು ಪಾಲಿಸದೆ ನಡೆಸುತ್ತಿರುವ ಕಾರ್ಯಾಚರಣೆ ಕಾನೂನು ಉಲ್ಲಂಘನೆಯಾಗಿದೆ.

ಸಾವಿರಾರು ಬಡ ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿರುವ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಸಂವಿಧಾನಬದ್ಧ ಕರ್ತವ್ಯವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಯಾವುದೇ ಕ್ರಮವನ್ನು ಎಸ್‌ಡಿಪಿಐ ತೀವ್ರವಾಗಿ ವಿರೋಧಿಸುತ್ತದೆ.

ಆದ್ದರಿಂದ, ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳು ಕೂಡಲೇ ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ, 2014ರ ಕೇಂದ್ರ ಕಾಯ್ದೆ ಮತ್ತು 2019ರ ಕರ್ನಾಟಕ ನಿಯಮಗಳ ಪ್ರಕಾರ ಮಾತ್ರ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು. ಬೀದಿ ವ್ಯಾಪಾರಿಗಳ ಜೀವನೋಪಾಯವನ್ನು ರಕ್ಷಿಸಿ, ಅವರ ಕಾನೂನುಬದ್ಧ ಹಕ್ಕುಗಳನ್ನು ಖಾತ್ರಿಪಡಿಸಬೇಕೆಂದು ಎಸ್‌ಡಿಪಿಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ, ಮತ್ತು ಬಿ ಬಿ ಎಂ ಪಿ ಆರೋಗ್ಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಮುಜಾಹಿದ್ ಪಾಷಾ ಆಗ್ರಹಿಸಿದ್ದಾರೆ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ಕರ್ನಾಟಕ

SDPIKarnataka #FootPath #Bengaluru

admin

Recent Posts

ಪತ್ರಿಕಾ ಪ್ರಕಟಣೆ

ಪೆರಿಯಾರ್ ಅವರ ಹೋರಾಟ ಮಾನವ ಘನತೆ, ಸಮಾನತೆ ಮತ್ತು ಸ್ವಾಭಿಮಾನದ ಪ್ರತೀಕ: ಅಪ್ಸರ್ ಕೊಡ್ಲಿಪೇಟೆ ಆನೇಕಲ್:ಸೆ. 17:ಸಾಮಾಜಿಕ ನ್ಯಾಯ, ಸಮಾನತೆ,…

1 week ago

ಫ್ಯಾಶಿಷ್ಟರು ಗೌರಿ ಲಂಕೇಶ್‌ ಅವರನ್ನು ಗುಂಡಿಕ್ಕಿ ಕೊಂದ ದಿನ.

5 ಸೆಪ್ಟೆಂಬರ್ 2017 ನಾವು ಮರೆಯುವುದಿಲ್ಲ SDPIKarnataka #GowriLankesh

3 weeks ago

Will fight for every citizen of this country

Prakash Raj, Abdul Majeed SDPI and several others detained by Bengaluru Police During Election Commission…

3 weeks ago

ಪ್ರೆಸ್ ರಿಲೀಸ್

ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…

1 month ago