ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಮತದಾನದ ಹಕ್ಕು, ನಮ್ಮ ಪ್ರಜಾಪ್ರಭುತ್ವದ ಆತ್ಮ ಇಂದು ಅಪಾಯದಲ್ಲಿದೆ ಚುನಾವಣಾ ಆಯೋಗವು ಜಾರಿಗೆ ತಂದಿರುವ SIR (Special Intensive Revision)ಹೆಸರಿನಲ್ಲಿ ರಾಜ್ಯಾದ್ಯಂತ ಲಕ್ಷಾಂತರ ಅರ್ಹ ಮತದಾರರ, ವಿಶೇಷವಾಗಿ ದಲಿತ, ಅಲ್ಪಸಂಖ್ಯಾತ, ಬಡ ಮತ್ತು ವಲಸೆ ಕಾರ್ಮಿಕರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. Form-7 ದುರುಪಯೋಗದ ಮೂಲಕ ನಡೆಯುತ್ತಿರುವ ಈ ಮತ ಕಳ್ಳತನಕ್ಕೆ ಚುನಾವಣಾ ಆಯೋಗವೇ ಕುಮ್ಮಕ್ಕು ನೀಡುತ್ತಿದೆ ಎಂಬ ಗಂಭೀರ ಆರೋಪಗಳಿವೆ.
ಪಕ್ಷಪಾತಿಯಾಗಿ ವರ್ತಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ ಆದ್ದರಿಂದ.
ಈ ನಿಟ್ಟಿನಲ್ಲಿ ಅಕ್ಟೋಬರ್ 8ರಂದು ಬೆಳಗ್ಗೆ 10:30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಾಗೂ SIR ಕುರಿತು ರಾಜ್ಯಮಟ್ಟದ ಜನತಾ ಅದಾಲತ್ ಅನ್ನು ಆಯೋಜಿಸಲಾಗಿದೆ. ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಅಳಿಸಲ್ಪಡುವುದನ್ನು ತಡೆಯಲು, ಸಂವಿಧಾನವನ್ನು ರಕ್ಷಿಸಲು, ಪ್ರಜಾಪ್ರಭುತ್ವವನ್ನು ಉಳಿಸಲು ನೀವೆಲ್ಲರೂ ಸಾವಿರಾರು ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಭಾಗವಹಿಸಿ.
ಇದು ನಮ್ಮ ಮತದ ಹಕ್ಕಿಗಾಗಿ ನಡೆಯುವ ಜನತಾ ನ್ಯಾಯಾಲಯ
ಬನ್ನಿ, ಹೋರಾಡೋಣ, ಗೆಲ್ಲೋಣ
~ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ
October 8 | 10:30AM Onwards Freedom Park, Bengaluru MASS PROTEST & STATE-LEVEL PEOPLE'S TRIBUNAL ON…
SIR ರದ್ದುಗೊಳಿಸಿ ಅಕ್ಟೋಬರ್ 8 | ಬೆಳಗ್ಗೆ 10:30 ರಿಂದ ಫ್ರೀಡಂ ಪಾರ್ಕ್, ಬೆಂಗಳೂರು ಬೃಹತ್ ಪ್ರತಿಭಟನೆ ಹಾಗೂ SIR…
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿಯಂದು ದೇಶದ ಎಲ್ಲ ಜನತೆಗೆ ಹೃತ್ಪೂರ್ವಕ ಶುಭಾಶಯಗಳು. ಗಾಂಧೀಜಿ ಕಂಡ ಭಾರತ ಸರ್ವಾಧಿಕಾರದ ಭಾರತವಾಗಿರಲಿಲ್ಲ.…
“ಕರ್ನಾಟಕ SIR: ದ್ರೋಹ ಮತ್ತು ಕಣ್ಣೀರ ಕಥನ” ಎಂಬ ಶೀರ್ಷಿಕೆಯಡಿ ಸಿದ್ಧಪಡಿಸಲಾದ ಪರಿಶೋಧನಾ ವರದಿಯನ್ನು SIR ವಿರೋಧಿ ಒಕ್ಕೂಟದ ನಿಯೋಗವು…
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI ಕರ್ನಾಟಕ