ಕರಾವಳಿ ಜನರ ಬದುಕು, ಉದ್ಯೋಗ, ವಸತಿ ಮತ್ತು ಹಕ್ಕುಗಳ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಕರಾವಳಿ ಸವೆತ, ಕುಡಿಯುವ ನೀರಿನ ಸಮಸ್ಯೆ, ಉದ್ಯೋಗದ ಅನಿಶ್ಚಿತತೆ ಹಾಗೂ ಮೀನುಗಾರರ ಆರ್ಥಿಕ ಸಂಕಷ್ಟ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳಿಗೆ ಸರ್ಕಾರಗಳು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.
ಈ ನಿಟ್ಟಿನಲ್ಲಿ SDPI ಕೇರಳ ರಾಜ್ಯವು ಹಮ್ಮಿಕೊಂಡಿರುವ ‘ಕರಾವಳಿ ಮುನ್ನಡೆ ಯಾತ್ರೆ’ ಕರಾವಳಿ ಜನರ ಹಕ್ಕುಗಳು ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಮಹತ್ವದ ಹೋರಾಟವಾಗಿದೆ.
ಈ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮವು ನವೆಂಬರ್ 4ರಂದು ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ನಡೆಯಲಿದ್ದು, SDPI ಕರ್ನಾಟಕ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಸಮಿತಿ ಸದಸ್ಯರಾದ ಅಬ್ದುಲ್ ಮಜೀದ್ ಅವರು ಯಾತ್ರೆಯನ್ನು ಉದ್ಘಾಟಿಸಲಿದ್ದಾರೆ.
ಕರಾವಳಿ ಜನರ ನ್ಯಾಯಯುತ ಹಕ್ಕುಗಳಿಗಾಗಿ, ಅವರ ಉದ್ಯೋಗ ಮತ್ತು ಬದುಕಿನ ಭದ್ರತೆಗಾಗಿ ನಡೆಯುತ್ತಿರುವ ಈ ಹೋರಾಟ ಯಶಸ್ವಿಯಾಗಲಿ. ಕರಾವಳಿ ಸಮುದಾಯದ ಧ್ವನಿಯಾಗಿ ಈ ಯಾತ್ರೆ ಸರ್ಕಾರಗಳ ಗಮನ ಸೆಳೆಯಲಿ ಹಾಗೂ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗೆ ನಾಂದಿಯಾಗಲಿ ಎಂದು ಹಾರೈಸುತ್ತೇನೆ.
ತೀರವನ್ನು ಕಾಪಾಡೋಣ – ಮೀನುಗಾರರ ಬದುಕನ್ನು ಉಳಿಸೋಣ!
**SDPI ಕೇರಳದ ಕರಾವಳಿ ಮುನ್ನಡೆ ಯಾತ್ರೆಗೆ ಹೃತ್ಪೂರ್ವಕ ಶುಭಾಶಯಗಳು.
~ಮಿಸ್ರಿಯಾ ಕಣ್ಣೂರು,ರಾಜ್ಯ ಸಮಿತಿ ಸದಸ್ಯರು
ರಾಜ್ಯೋತ್ಸವವೆಂದರೆ ಕೇವಲ ಸಂಭ್ರಮದ ಆಚರಣೆಯಲ್ಲ; ನಾಡಿನ ಸಮಗ್ರ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಂಕಲ್ಪವನ್ನು ಪುನರುಚ್ಚರಿಸುವ ದಿನ. ಕರ್ನಾಟಕದ…
ಒಲವಿನ ಕರ್ನಾಟಕ ಕರ್ನಾಟಕ ರಾಜ್ಯೋತ್ಸವ 01 ನವೆಂಬರ್ ದ್ವಜಾರೋಹಣ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮಗಳು SDPIKarnataka #kannadarajyotsava
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI ಕರ್ನಾಟಕ SDPIKarnataka
22 Oct ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷ್ ಆಳ್ವಿಕೆಯ ವಿರುದ್ಧ ಹೋರಾಡಿ ಗಲ್ಲಿಗೇರಿ ವೀರಮರಣವನ್ನು ಸ್ವೀಕರಿಸಿದ ಮಹಾನ್ ಕ್ರಾಂತಿಕಾರಿ ಶಹೀದ್ ಅಶ್ಫಾಕುಲ್ಲಾ…
ಅಕ್ಟೋಬರ್ 23ರ ಜನತಾ ಮೆರವಣಿಗೆಗೆ ಎಸ್‌ಡಿಪಿಐ ಬೆಂಬಲ ಎಸ್‌ಐಆರ್ ರದ್ದುಗೊಳಿಸಿ, ಅರ್ಹ ಮತದಾರರ ಹಕ್ಕುಗಳನ್ನು ಮರುಸ್ಥಾಪಿಸಿ: ಅಬ್ದುಲ್ ಮಜೀದ್ ಬೆಂಗಳೂರು,…