.ಬೆಂಗಳೂರು, 10 ಅಕ್ಟೋಬರ್ 2021: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿಐ ಪಕ್ಷ ನಗರದ ಕಿಂಗ್ಸ್ ಪ್ಯಾಲಸ್‌ನಲ್ಲಿ ಆಯೋಜಿಸಿದ ಡೆಲಿಗೇಟ್ಸ್ ಮೀಟ್‌ನಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ *ಅಜ್ಮೇರ್ ಶರೀಫ್ ದರ್ಗಾದ ಗದ್ದಿ ನಶೀನ್ ಸೈಯದ್ ಸರ್ವರ್ ಚಿಸ್ತಿ, ಬಾಬಾ ಬುಡನ್‌ಗಿರಿ ದರ್ಗಾದ ಸಜ್ಜಾದ ನಶೀನ್ ಸೈಯದ್ ಗೌಸ್ ಮೋಹ್ದಿನ್ ಶಾ ಖಾದ್ರಿ, ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಹನಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆರವರು ವಿಶೇಷ ಭಾಷಣ ಮಾಡಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಬ್ದುಲ್ ಹನ್ನಾನ್‌ರವರು ದೇಶದಲ್ಲಿ ಸಂವಿಧಾನ ಮತ್ತು ಜಾತ್ಯತೀತ ವ್ಯವಸ್ಥೆಯು ಅಪಾಯದಲ್ಲಿದ್ದು, ಇದರ ರಕ್ಷಣೆ ಮಾಡಲು ಯುವಕರು ಒಗ್ಗಾಟ್ಟಾಗಿ ಮುಂದೆ ಬರಬೇಕಾಗಿದೆ ಎಂದು ಕರೆ ನೀಡಿದರು. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಮಿತಿ ಮತ್ತು ಸಂಘಗಳನ್ನು ರಚಿಸುವ ಮೂಲಕ ರಾಜಕೀಯ-ಸಾಮಾಜಿಕ ಜವಾಬ್ದಾರಿಗಳನ್ನು ಅರ್ಥೈಸಿಕೊಂಡು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ಕೋಮುವಾದದ ಬಗ್ಗೆ ಎಚ್ಚರವಹಿಸಿ, ಶಾಂತಿ ಮತ್ತು ನ್ಯಾಯಕ್ಕಾಗಿ ತನ್ನ ಹೋರಾಟವನ್ನು ಮುಂದುವರಿಸುವಂತೆ ಅವರು ಯುವಕರಲ್ಲಿ ಕರೆ ನೀಡಿದರು.ಸೈಯದ್ ಸರ್ವರ್ ಚಿಸ್ತಿ ತಮ್ಮ ಭಾಷಣದಲ್ಲಿ *ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಾ ದೇಶದಲ್ಲಿ ದುರ್ಬಲರನ್ನು ಭಯಪಡಿಸುವ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುವ ಸನ್ನಿವೇಶದಲ್ಲಿ ಜನರ ಹಕ್ಕುಗಳಿಗಾಗಿ, ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಎಸ್.ಡಿ.ಪಿ.ಐ ಪಕ್ಷದ ಕಾರ್ಯಚಟುವಟಿಕೆಗಳು ಶ್ಲಾಘನಾರ್ಹ ಎಂದರು. ಬಾಬಾ ಬುಡನ್‌ಗಿರಿ ಪ್ರಕರಣದಲ್ಲಿ ನ್ಯಾಯಸಿಗುವವರೆಗೂ ಕಾನೂನು ಹೋರಾಟವನ್ನು ಮುಂದುವರಿಸಬೇಕು ಎಂದ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಕಾನೂನು ನೇರವು ನೀಡಲು ಸಿದ್ಧರಿರುವುದಾಗಿ ಘೋಷಿಸಿದರು. ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಪ್ರಕರಣದಲ್ಲಿ ಯು.ಎ.ಪಿ.ಎ ಹಾಗೂ ಇನ್ನಿತರ ಕರಾಳ ಕಾನೂನುಗಳ ಅಡಿಯಲ್ಲಿ ಬಂಧಿಸಲ್ಟಟ್ಟ ನೂರಾರು ಅಮಾಯಕರ ಪರವಾಗಿ ಕಾನೂನು ಹೋರಾಟ ನಡೆಸಿ ಜಾಮೀನಿನ ಮುಖಾಂತರ ಬಿಡುಗಡೆಗೊಳಿಸುವಲ್ಲಿ ಎಸ್.ಡಿ.ಪಿ.ಐ ಪಕ್ಷದ ಪಾತ್ರ ಅತೀ ದೊಡ್ಡದು. ಕೋವಿಡ್ ಸಂದರ್ಭದಲ್ಲಿ ಪಕ್ಷವು ಮಾಡಿದ ಅಂತ್ಯ ಸಂಸ್ಕಾರ ಹಾಗೂ ವಿವಿಧ ಸೇವಾ ಕಾರ್ಯಗಳು ದೇಶ ವಿದೇಶಗಳಲ್ಲಿ ಶ್ಲಾಘಿಸಲ್ಪಟ್ಟಿದೆ ಎಂದರು.ಸೈಯದ್ ಗೌಸ್ ಮೋಹ್ದಿನ್ ಶಾ ಖಾದ್ರಿ ಮತ್ತು ಅಫ್ಸರ್ ಕೊಡ್ಲಿಪೇಟೆರವರು ಬಾಬಾ ಬುಡನ್‌ಗಿರಿ ಪ್ರಕರಣದಲ್ಲಿ ಸಂಘ ಪರಿವಾರದ ನಡೆಸಿದ ಪಿತೂರಿ, ಅಪಪ್ರಚಾರ, ನಕಲಿ ಇತಿಹಾಸ ಸೃಷ್ಠಿ ಹಾಗೂ ಈ ಪ್ರಕರಣದಲ್ಲಿ ಈಗ ನಡೆಯುತ್ತಿರುವ ಕಾನೂನು ಪ್ರಕ್ರಿಯೆ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಬೆಂಗಳೂರು ಜಿಲ್ಲಾಧ್ಯಕ್ಷ ಹಾಗೂ ಬಿ.ಬಿ.ಎಂ.ಪಿ ಆರೋಗ್ಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಮುಜಾಹಿದ್ ಪಾಷಾ, ಜಿಲ್ಲಾ ಉಪಾಧ್ಯಕ್ಷ ರಮೇಶ್ ಕುಮಾರ್ ಸಿ.ವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ ಅಹಮದ್, ಜಿಲ್ಲಾ ಕಾರ್ಯದರ್ಶಿಗಳಾದ ಮುಜಮ್ಮಿಲ್ ಪಾಷಾ, ಸೈಯದ್ ಮೆಹಬೂಬ್, ಪಾದರಾಯನಪುರದ ವಾರ್ಡ್ ಅಧ್ಯಕ್ಷ ಜಮೀಲ್ ಪಾಷಾ ಹಾಗೂ ವಾರ್ಡ್ ಸಮಿತಿ ಸದಸ್ಯರು ಮತ್ತು ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.#Bababudangiri
ಜ್ಞಾನವಾಪಿ ಮಸೀದಿ ರಾಜ್ಯದಾದ್ಯಂತ ಪ್ರತಿಭಟನೆಫೆಬ್ರವರಿ 2024 ಒಳನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸಿ
1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ ಮಾರ್ಗದ…
1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ…
~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI ಕರ್ನಾಟಕ
ಬೆಂಗಳೂರು, 27 ಜನವರಿ 2024: ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಮತದಾರರ…