ದಿನಾಂಕ 21-10-2022 ರಂದು ಬೈಂದೂರು ವಿಧಾನಸಭಾ ಕ್ಷೇತ್ರದ ಕಂಡ್ಲೂರಿನ ಸಂಜೀವ ಶೆಟ್ಟಿ ಸಭಾಂಗಣದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಮತ್ತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಎಸ್.ಡಿ.ಪಿ.ಐ ಉಡುಪಿ ಜಿಲ್ಲಾ ಅಧ್ಯಕ್ಷರಾದ ಶಾಹಿದ್ ಅಲಿ ಅವರು ಮಾತನಾಡಿ ಪಕ್ಷದ ಅವಶ್ಯಕತೆಗಳ ಬಗ್ಗೆ ವಿವರಿಸಿದರು.
ಬೈಂದೂರು ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ನಾಖುಧ ಅಬೂಬಕ್ಕರ್ ರವರು ಮಾತನಾಡಿ ಪಕ್ಷವನ್ನು ಸಂಘಟಿಸುವ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ಪ್ರಸಕ್ತ ಭಾರತದ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡುತ್ತ, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರ ಮೇಲೆ ರಾಜಕೀಯವಾಗಿ ದಬ್ಬಾಳಿಕೆ, ದೌರ್ಜನ್ಯ, ಅನ್ಯಾಯ ಆಗುತ್ತಿರುವ ಬಗ್ಗೆ ವಿವರಿಸಿ, ಇದಕ್ಕೆಲ್ಲ ಪರಿಹಾರವೆಂದರೆ ನಾವೆಲ್ಲ ಒಂದಾಗಿ ಒಗ್ಗಟ್ಟಾಗಿ ರಾಜಕೀಯವಾಗಿ ಸಬಲೀಕರಣಗೊಳ್ಳುವುದು. ಅದಕ್ಕಾಗಿ ತಾವೆಲ್ಲರೂ ಆ ನಿಟ್ಟಿನಲ್ಲಿ ದುಡಿಯುತ್ತಿರುವ ಎಸ್.ಡಿ.ಪಿ.ಐ ಪಕ್ಷವನ್ನು ಬೆಂಬಲಿಸಿ ಸಂವಿಧಾನದ ಮೌಲ್ಯಗಳನ್ನು ಉಳಿಸಿ ದೇಶವನ್ನು ಹಸಿವು ಮುಕ್ತ ಭಾರತ, ಭಯಮುಕ್ತ ಭಾರತ ವನ್ನಾಗಿ ಮಾಡೋಣ ಎಂದು ಕರೆಕೊಟ್ಟರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ರಫ್ ಮಾಚಾರ್ ಮಾತನಾಡಿ, ಫಾಶಿಸ್ಟ್ ಶಕ್ತಿಗಳು ನಮಗೆ ಸಂವಿಧಾನ ಕೊಟ್ಟಿರುವಂತಹ ಬದುಕುವ ಹಕ್ಕು, ತಿನ್ನುವ ಹಕ್ಕು, ದುಡಿಯುವ ಹಕ್ಕು, ಕಲಿಯುವ ಹಕ್ಕು, ಸಾಮಾಜಿಕ ಹಕ್ಕನ್ನು ಕಸಿಯುವ ಉನ್ನಾರ ನಡೆಸುತ್ತಿವೆ. ನಾವೆಲ್ಲರೂ ಎಚ್ಚೆತ್ತು, ಒಂದಾಗಿ ನಮ್ಮ ಹಕ್ಕನ್ನು ಪಡೆಯುವ ಹೋರಾಟವನ್ನು ಮಾಡಬೇಕಾಗಿದೆ, ಅದಕ್ಕಾಗಿ ನಮ್ಮ ಪಕ್ಷವು ಕಾರ್ಯಕರ್ತರ ಸಭೆ ಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ತಿಳುವಳಿಕೆ ಮೂಡಿಸುವಂತಹ ಕೆಲಸಗಳನ್ನು ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಖಲೀಲ್ ಅಹಮದ್, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಭಾವ ಮತ್ತು ಬೈಂದೂರು ಕ್ಷೇತ್ರದ ಸಮಿತಿಯ ಅಧ್ಯಕ್ಷರಾದ ಸುಹೇಲ್ ಮುಕ್ತೇಸರ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಮತ್ತು ವಂದನಾರ್ಪಣೆಯನ್ನು ಪಕ್ಷದ ಸದಸ್ಯರಾದ ಮುಕ್ತಿಯಾರ್ ನೆರವೇರಿಸಿದರು.
(20/07/2025) ಟ್ವಿಟ್ಟರ್ ಅಭಿಯಾನವನ್ನು ಮುಂದೂಡಲಾಗಿದೆ ಧರ್ಮಸ್ಥಳ ಪ್ರಕರಣ – ಎಸ್‌ಡಿಪಿಐ ಪ್ರತಿಕ್ರಿಯೆ ಧರ್ಮಸ್ಥಳದಲ್ಲಿ ನೂರಾರು ಹೆಣ್ಣುಮಕ್ಕಳ ಅಸಹಜ ಸಾವುಗಳು, ಅತ್ಯಾಚಾರ…
ಮೌನವನ್ನು ಮುರಿಯೋಣ ಸತ್ಯಕ್ಕೆ ಧ್ವನಿಯಾಗೋಣಆತ್ಮೀಯರೇ, ಧರ್ಮಸ್ಥಳದಲ್ಲಿ ಬೆಳಕಿಗೆ ಬಂದಿರುವ ಹೃದಯವಿದ್ರಾವಕ ಘಟನೆಗಳು ಅನೇಕ ಯುವತಿಯರು ಮತ್ತು ಮಹಿಳೆಯರ ಮೇಲೆ ನಡೆದ…
TWITTER CAMPAIGN ON 20 | 07 | 2025 | SUNDAY | TIME : 4:00 PM…
ایس ڈی پی آئی دیون ملی کے کسانوں کی کامیابی کا خیر مقدم کرتی ہے۔…