Categories: featureNewsPolitics

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕವಿತಾಳ ಪಟ್ಟಣದಲ್ಲಿ ರಾಜ್ಯ ಹೋಶಾಧಿಕಾರಿ ನೇತ್ರತ್ವದಲ್ಲಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕವಿತಾಳ ಪಟ್ಟಣದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಾಗೂ ಪದಗ್ರಹಣ ಸಮಾರಂಭ ಜಿಲ್ಲಾ ಉಸ್ತುವಾರಿ ಹಾಗೂ ಪಕ್ಷದ ರಾಜ್ಯ ಕೋಶಾಧಿಕಾರಿ ಸೈಯದ್‌ ಇಸಹಾಖ ಹುಸೇನ್‌ (ಖಾಲಿದ್) ಅವರ ನೇತ್ರತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕವಿತಾಳ ಪಟ್ಟಣದ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಮೊಹಮ್ಮದ್ ಫಯಾಜ್ ಹಾಗೂ ಉಪಾಧ್ಯಕರಾಗಿ ಚಾಂದ್ ಪಾಷಾ, ಕಾರ್ಯದರ್ಶಿಯಾಗಿ ಮುಸ್ತಫಾ, ಸಹಕಾರ್ಯದರ್ಶಿಯಾಗಿ ರಸೂಲ್, ಕೋಶಾಧಿಕಾರಿಯಾಗಿ ಮೊಹಮ್ಮದ್ ಅಮೀರ್ ಅಯ್ಕೆಯಾದರು.ಈ ಸಮಾರಂಭದಲ್ಲಿ 50ಕ್ಕೂ ಹೆಚ್ಚು ಯುವಕರು ಮತ್ತು ಹಿರಿಯರು ಎಸ್‌ಡಿಪಿಐ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಕ್ಷದ ರಾಜ್ಯ ಕೋಶಾಧಿಕಾರಿ ಸೈಯದ್‌ ಇಸಹಾಖ ಹುಸೇನ್ (ಖಾಲಿದ್ ಅವರು ಮಾತನಾಡಿ, ಪಕ್ಷದ ಅಗತ್ಯತೆ ಮತ್ತು ತತ್ವ ಸಿದ್ಧಾಂತಗಳ ಬಗ್ಗೆ ವಿವರಿಸಿದರು. ಇನ್ನೋರ್ವ ಅತಿಥಿ ಜಿಲ್ಲಾ ಸಮಿತಿ ಸದಸ್ಯರೂ ಆದ ಮೀರ್ ಅಲಿ ಅವರು ಪಕ್ಷದ ನಿಲುವಿನ ಕುರಿತು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ತಾಲೂಕು ಸಂಘಟನಾ ಕಾರ್ಯದರ್ಶಿಯಾದ ಜಿಲಾನಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮೀರ ಅಲಿ ಅವರು ನೆರವೇರಿಸಿದರು.

admin

Recent Posts

” چیف الیکشن کمشنر گیانیش کمار نے جمہوریت کا قتل کیا ہے؛

انہیں عوام اور جمہوری نظام کے سامنے جواب دہ ہونا ہوگا" عبد المجيد~ ریاستی صدر…

2 days ago

ಪತ್ರಿಕಾ ಪ್ರಕಟಣೆ

ಪೆರಿಯಾರ್ ಅವರ ಹೋರಾಟ ಮಾನವ ಘನತೆ, ಸಮಾನತೆ ಮತ್ತು ಸ್ವಾಭಿಮಾನದ ಪ್ರತೀಕ: ಅಪ್ಸರ್ ಕೊಡ್ಲಿಪೇಟೆ ಆನೇಕಲ್:ಸೆ. 17:ಸಾಮಾಜಿಕ ನ್ಯಾಯ, ಸಮಾನತೆ,…

1 week ago

ಫ್ಯಾಶಿಷ್ಟರು ಗೌರಿ ಲಂಕೇಶ್‌ ಅವರನ್ನು ಗುಂಡಿಕ್ಕಿ ಕೊಂದ ದಿನ.

5 ಸೆಪ್ಟೆಂಬರ್ 2017 ನಾವು ಮರೆಯುವುದಿಲ್ಲ SDPIKarnataka #GowriLankesh

3 weeks ago