Categories: featureNewsPolitics

ಎಸ್‌ಡಿಪಿಐ ಜನಪರ ಹೋರಾಟಗಳ ಮೂಲಕ ಜನರ ಸೇವೆ ಮಾಡುವ ಜೊತೆಗೆ ಘನತೆಯ ರಾಜಕೀಯಕ್ಕಾಗಿ ಸ್ವತಂತ್ರ ರಾಜ್ಯಾಧಿಕಾರದ ಗುರಿಯಡೆಗೆ ಮುನ್ನುಗ್ಗುತ್ತಿದೆ: ಅಪ್ಸರ್ ಕೊಡ್ಲಿಪೇಟೆ

ಎಸ್ಡಿಪಿಐ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ದ್ವಜಾರೋಹಣ ಕಾರ್ಯಕ್ರಮ

ಹಾಸನ :(ಜೂನ್ 21) ಎಸ್ಡಿಪಿಐ ಪಕ್ಷದ 15ನೇ ವರ್ಷದ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಹಾಸನ ಜಿಲ್ಲಾ ಕಚೇರಿ ಮುಂಭಾಗ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಪ್ಸರ್ ಕೊಡ್ಲಿಪೇಟೆ ಯವರು ಧ್ವಜಾರೋಹಣ ನೆರವೇರಿಸಿ ಸಂದೇಶ ಭಾಷಣ ಮಾಡಿದರು. ಪಕ್ಷವು ನಡೆದು ಬಂದ ಹಾದಿ ಹಾಗೂ ಪಕ್ಷದ ಪ್ರಾಮುಖ್ಯತೆ ಬಗ್ಗೆ ವಿವರಿಸಿ ಮಾತನಾಡಿದ ಅವರು ಈ ದೇಶದಲ್ಲಿ ಅಲ್ಪಸಂಖ್ಯಾತರು,ದಲಿತರು,ಆದಿವಾಸಿಗಳು ನಿರಂತರ ತುಳಿತಕ್ಕೊಳಪಡುತ್ತಿದ್ದು ಈ ಪಕ್ಷ ಅಂತಹವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಿಸುತಿದ್ದು ರಾಜಕೀಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ,ಯಶಸ್ವೀ 15 ನೇ ವರ್ಷಕ್ಕೆ ಕಾಲಿಡುತ್ತ ಜನಪರ ಹೋರಾಟಗಳ ಮೂಲಕ ಜನರ ಸೇವೆ ಮಾಡುವ ಜೊತೆಗೆ ಘನತೆಯ ರಾಜಕೀಯಕ್ಕಾಗಿ ಸ್ವತಂತ್ರ ರಾಜ್ಯಾಧಿಕಾರದ ಗುರಿಯಡೆಗೆ ಮುನ್ನುಗ್ಗುತ್ತಿದೆ. ಎಂದು ಅಭಿಪ್ರಾಯಪಟ್ಟು, ಶುಭಾಶಯ ಕೋರಿದರು .

ಈ ಸಂಧರ್ಭದಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷರಾದ ಸಿದ್ದಿಕ್ ಆನೆಮಹಲ್, ಭಿಮ್ ಆರ್ಮಿ ಜಿಲ್ಲಾಧ್ಯಕ್ಷರಾದ ಪ್ರದೀಪ್‌ ಹಾಗೂ ಎಸ್ಡಿಪಿಐ ಜಿಲ್ಲಾ ಉಪಾಧ್ಯಕ್ಷರಾದ ಇರ್ಫಾನ್, ಜಿಲ್ಲಾ ಸಮಿತಿ ಸದಸ್ಯರುಗಳಾದ ಅಜ್ಮಲ್, ಹಾಸನ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶರ್ಜೀಲ್ ಅಹಮದ್ ಹಾಗೂ ಪಕ್ಷದ ಕಾರ್ಯಕರ್ತರ ಉಪಸ್ಥಿತರಿದ್ದರು. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಫರೀದ್ ಧ್ವಜಾರೋಹಣ ನೆರವೇರಿಸಿದರೆ, ಹಾಸನ ನಗರ ಚಿಕ್ಕನಾಳ್ ಸರ್ಕಲ್, ಮಿರ್ಜಾ ಮೂಹಲ್ಲ, ಹಾಸನ ಗ್ರಾಮಾಂತರ ಪ್ರದೇಶದ ಗುಲ್ಲೇನಹನಹಳ್ಳಿ ಮತ್ತು ಜಿಲ್ಲೆಯ ವಿವಿಧೆಡೆ ಪಕ್ಷದ ಧ್ವಜಾರೋಹಣ ಕಾರ್ಯಕ್ರಮಗಳು ನಡೆಯಿತು.
ಪಕ್ಷದ 15 ನೇ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ನಂತರ ಪಕ್ಷದ ನಾಯಕರುಗಳು ಮತ್ತು ಕಾರಣಕರ್ತರು ಮನೆ ಮನೆಗೆ ತೆರಳಿ ಕರಪತ್ರ ಹಂಚುವ ಮೂಲಕ ಪಕ್ಷದ ತತ್ವ ಸಿದ್ಧಾಂತಗಳ ಕುರಿತು ಜನ ಜಾಗೃತಿ ಮೂಡಿಸಿ ಸಿಹಿಯನ್ನು ಹಂಚಿ ಸಂಭ್ರಮಿಸಿದರು.

admin

Recent Posts

ಸ್ವಾತಂತ್ರ್ಯ ಪ್ರಯುಕ್ತ ಸಭಾ ಕಾರ್ಯಕ್ರಮ

INDEPENDENCE DAY CELEBRATION 15.08.2025 | ಮಧ್ಯಾನ : 3:00 | ಡೈಮಂಡ್ ಹಾಲ್ ಹತ್ತಿರ ರೈಲ್ವೆ ಸ್ಟೇಷನ್ ರೋಡ್‌…

3 days ago

ಸ್ವಾತಂತ್ರ್ಯವನ್ನು ರಕ್ಷಿಸೋಣ, ರಾಷ್ಟ್ರವನ್ನು ಉಳಿಸೋಣ

Let's Protect the Freedom, Save the Nation آئیے آزادی کی حفاظت کرین ملک کو بچائیں…

3 days ago

79 Happy Independence Day

Let's Protect The Freedom, Save The Nation "Let us remember the sacrifices that brought us…

3 days ago

79 ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

"ಸ್ವಾತಂತ್ರ್ಯವನ್ನು ರಕ್ಷಿಸೋಣ, ದೇಶವನ್ನು ಉಳಿಸೋಣ" ಈ ಸ್ವಾತಂತ್ರ್ಯ ದಿನದಂದು, ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಸತ್ಯವನ್ನು ಮಾತನಾಡಲು ಧೈರ್ಯ ಮಾಡಿದ…

3 days ago