ನಿನ್ನೆ ನವಂಬರ್ 10, ಭಾರತದ ಪ್ರಥಮ ಸ್ವಾತಂತ್ರ್ಯ ಸೇನಾನಿ, ವಿಶ್ವ ವಿಖ್ಯಾತ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ರವರ ಜನ್ಮದಿನ, ಕನ್ನಡದ ಮಣ್ಣು ದೇವನಹಳ್ಳಿಯಲ್ಲಿ ಹುಟ್ಟಿದ ಅತ್ಯಂತ ದೂರದೃಷ್ಟಿಯ ಆಡಳಿತಗಾರ, ಜನಾನುರಾಗಿ, ಹಲವು ಕ್ರಾಂತಿಕಾರಿ ಆಡಳಿತ ಸುಧಾರಣೆಯನ್ನು ತಂದ ಟಿಪ್ಪು ಸುಲ್ತಾನ್ ಜಯಂತಿಯನ್ನು 2015 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಸರ್ಕಾರಿ ಕಾರ್ಯಕ್ರಮವಾಗಿ ಆಯೋಜನೆ ಮಾಡಿತ್ತು.
ಆದರೆ ದುರಂತ ನೋಡಿ, ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೆಪಿಸಿಸಿಯ ಟ್ವಿಟರ್ ಹ್ಯಾಂಡಲ್ X ಅನ್ನು ನೋಡುತ್ತಿದ್ದೆ, ಅಲ್ಲಿ ಒನಕೆ ಓಬವ್ವ ಜಯಂತಿಯ ಶುಭಾಶಯ ಇದೆ, ಕುವೆಂಪುರವರ ಪುಣ್ಯ ಸ್ಮರಣೆಯ ಸಂದೇಶ ಇದೆ, ಆದರೆ ಟಿಪ್ಪು ಜಯಂತಿಯ ಬಗ್ಗೆ ಒಂದು ಸಣ್ಣ ಶುಭಾಶಯ ಇಲ್ಲ.
ಈ ಬಾರಿ ಕಾಂಗ್ರೆಸ್ ಪಡೆದ ಒಟ್ಟು ಮತದಲ್ಲಿ ಶೇಕಡ 30ರಷ್ಟು ಮುಸಲ್ಮಾನರ ಮತ, ಆದರೆ ಟಿಪ್ಪು ಸುಲ್ತಾನರ ಜಯಂತಿಯ ಶುಭಾಶಯವನ್ನು ಕೋರದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷ ಇಷ್ಟೊಂದು ಕೃತಘ್ನರಾಗಬಾರದಿತ್ತು.
ಕನಿಷ್ಠ ಟಿಪ್ಪು ಜಯಂತಿಯ ಬಗ್ಗೆ ಒಂದು ಶುಭಾಶಯವನ್ನು ಕೂಡ ಕೋರದ ಕಾಂಗ್ರೆಸ್ ನಾಯಕರು ಇಷ್ಟೊಂದು ಹೃದಯ ಹೀನರಾಗುತ್ತಾರೆ ಎಂದು ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
Justice for Iqbal ಕಾಶ್ಮೀರದ ಬಗ್ಗೆ ಮಾಧ್ಯಮಗಳ ಮತೀಯವಾದೀ ಪಕ್ಷಪಾತೀಯ ವರದಿಗೆ ಇಲ್ಯಾಸ್ ತುಂಬೆ ಖಂಡನೆ SDPIKarnataka
NRC ಯನ್ನು ಹಿಂಬಾಗಿಲ ಮೂಲಕ ತರುವ ಪಿತೂರಿ ~ಮುಹಮ್ಮದ್ ಶಫಿ,ರಾಷ್ಟ್ರೀಯ ಉಪಾಧ್ಯಕ್ಷರು
ಹುಬ್ಬಳ್ಳಿ: ಜೂನ್ 29, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಬಾಂಬೆ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ವಿಶೇಷ…
ಗದಗ, 26 ಜೂನ್ 2025: ಎಸ್ಡಿಪಿಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪರ್ ಕೊಡ್ಲಿಪೇಟೆ ಮತ್ತು ರಾಜ್ಯ ಕಾರ್ಯದರ್ಶಿ ಹಾಗೂ…