Categories: featureNewsPolitics

ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ಕು ಜನರ ಹತ್ಯೆ ಉಡುಪಿಯ ಇತಿಹಾಸದಲ್ಲೇ ಕಂಡು ಕೇಳರಿಯದ ಬೆಚ್ಚಿ ಬೀಳಿಸುವ ಘಟನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಿಗಿಗೊಳಿಸಬೇಕು:ಪ್ರೊಫೆಸರ್ ಸೈದಾ ಸಾದಿಯಾ, ಉಪಾಧ್ಯಕ್ಷರು ಎಸ್‌ಡಿಪಿಐ ಕರ್ನಾಟಕ

ಬೆಂಗಳೂರು, 13 ನವೆಂಬರ್ 2023: ಉಡುಪಿ ಜಿಲ್ಲೆಯ ನೇಜಾರಿನಲ್ಲಿ ನಡೆದಿರುವ ಒಂದೇ ಕುಟುಂಬದ ನಾಲ್ಕು ಸದಸ್ಯರ ಕೊಲೆ ಬೀಭತ್ಸ ಮತ್ತು ಬೆಚ್ಚಿಬೀಳಿಸುವ ಘಟನೆ. ಉಡುಪಿಯ ಇತಿಹಾಸದಲ್ಲೇ ಕಂಡು ಕೇಳರಿಯದ ಹತ್ಯಾಕಾಂಡ ಇದಾಗಿದ್ದು, ಇದನ್ನು ಕಠಿಣ ಪದಗಳಿಂದ ಖಂಡಿಸುತ್ತೇನೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ಉಪಾಧ್ಯಕ್ಷರಾದ ಸೈದಾ ಸಾದಿಯಾ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಈ ಘಟನೆಯಿಂದ ಇಡೀ ಉಡುಪಿ ಜಿಲ್ಲೆ ಬೆಚ್ಚಿಬಿದ್ದಿದೆ. ಸರ್ಕಾರ ತಕ್ಷಣ ಅಪರಾಧಿಗಳನ್ನು ಬಂಧಿಸಬೇಕು. ಆ ಮೂಲಕ ಇಲ್ಲಿ ದಿಗ್ಭ್ರಮೆಯಲ್ಲಿರುವ ಜನರಿಗೆ ಧೈರ್ಯ ತುಂಬುವ ಕೆಲಸ ಆಗಬೇಕಿದೆ. ರಾಜ್ಯಾದ್ಯಂತ, ಅದರಲ್ಲೂ ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಬಿಗಿಗೊಳಿಸಬೇಕಾದ ಅನಿವಾರ್ಯತೆ ಇದೆ. ಆ ಮೂಲಕ ಮುಂದೆ ಇಂತಹ ದುರಂತಗಳು ನಡೆಯದಂತೆ ಎಚ್ಚರವಹಿಸಬೇಕು ಎಂದು ಸಾದಿಯಾ ಅವರು ತಮ್ಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

admin

Recent Posts

SACK GYANESH KUMAR SCRAP SIR

October 8 | 10:30AM Onwards Freedom Park, Bengaluru MASS PROTEST & STATE-LEVEL PEOPLE'S TRIBUNAL ON…

5 hours ago

ಗ್ಯಾನೇಶ್ ಅನ್ನು ವಜಾಗೊಳಿಸಿ

SIR ರದ್ದುಗೊಳಿಸಿ ಅಕ್ಟೋಬರ್ 8 | ಬೆಳಗ್ಗೆ 10:30 ರಿಂದ ಫ್ರೀಡಂ ಪಾರ್ಕ್, ಬೆಂಗಳೂರು ಬೃಹತ್‌ ಪ್ರತಿಭಟನೆ ಹಾಗೂ SIR…

5 hours ago

ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿಯಂದು ದೇಶದ ಎಲ್ಲ ಜನತೆಗೆ ಹೃತ್ಪೂರ್ವಕ ಶುಭಾಶಯಗಳು. ಗಾಂಧೀಜಿ ಕಂಡ ಭಾರತ ಸರ್ವಾಧಿಕಾರದ ಭಾರತವಾಗಿರಲಿಲ್ಲ.…

4 days ago

SIR ವಿರೋಧಿ ಒಕ್ಕೂಟದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ

“ಕರ್ನಾಟಕ SIR: ದ್ರೋಹ ಮತ್ತು ಕಣ್ಣೀರ ಕಥನ” ಎಂಬ ಶೀರ್ಷಿಕೆಯಡಿ ಸಿದ್ಧಪಡಿಸಲಾದ ಪರಿಶೋಧನಾ ವರದಿಯನ್ನು SIR ವಿರೋಧಿ ಒಕ್ಕೂಟದ ನಿಯೋಗವು…

5 days ago