ಬೆಂಗಳೂರು, 13 ನವೆಂಬರ್ 2023: ಉಡುಪಿ ಜಿಲ್ಲೆಯ ನೇಜಾರಿನಲ್ಲಿ ನಡೆದಿರುವ ಒಂದೇ ಕುಟುಂಬದ ನಾಲ್ಕು ಸದಸ್ಯರ ಕೊಲೆ ಬೀಭತ್ಸ ಮತ್ತು ಬೆಚ್ಚಿಬೀಳಿಸುವ ಘಟನೆ. ಉಡುಪಿಯ ಇತಿಹಾಸದಲ್ಲೇ ಕಂಡು ಕೇಳರಿಯದ ಹತ್ಯಾಕಾಂಡ ಇದಾಗಿದ್ದು, ಇದನ್ನು ಕಠಿಣ ಪದಗಳಿಂದ ಖಂಡಿಸುತ್ತೇನೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ಉಪಾಧ್ಯಕ್ಷರಾದ ಸೈದಾ ಸಾದಿಯಾ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಈ ಘಟನೆಯಿಂದ ಇಡೀ ಉಡುಪಿ ಜಿಲ್ಲೆ ಬೆಚ್ಚಿಬಿದ್ದಿದೆ. ಸರ್ಕಾರ ತಕ್ಷಣ ಅಪರಾಧಿಗಳನ್ನು ಬಂಧಿಸಬೇಕು. ಆ ಮೂಲಕ ಇಲ್ಲಿ ದಿಗ್ಭ್ರಮೆಯಲ್ಲಿರುವ ಜನರಿಗೆ ಧೈರ್ಯ ತುಂಬುವ ಕೆಲಸ ಆಗಬೇಕಿದೆ. ರಾಜ್ಯಾದ್ಯಂತ, ಅದರಲ್ಲೂ ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಬಿಗಿಗೊಳಿಸಬೇಕಾದ ಅನಿವಾರ್ಯತೆ ಇದೆ. ಆ ಮೂಲಕ ಮುಂದೆ ಇಂತಹ ದುರಂತಗಳು ನಡೆಯದಂತೆ ಎಚ್ಚರವಹಿಸಬೇಕು ಎಂದು ಸಾದಿಯಾ ಅವರು ತಮ್ಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Justice for Iqbal ಕಾಶ್ಮೀರದ ಬಗ್ಗೆ ಮಾಧ್ಯಮಗಳ ಮತೀಯವಾದೀ ಪಕ್ಷಪಾತೀಯ ವರದಿಗೆ ಇಲ್ಯಾಸ್ ತುಂಬೆ ಖಂಡನೆ SDPIKarnataka
NRC ಯನ್ನು ಹಿಂಬಾಗಿಲ ಮೂಲಕ ತರುವ ಪಿತೂರಿ ~ಮುಹಮ್ಮದ್ ಶಫಿ,ರಾಷ್ಟ್ರೀಯ ಉಪಾಧ್ಯಕ್ಷರು
ಹುಬ್ಬಳ್ಳಿ: ಜೂನ್ 29, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಬಾಂಬೆ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ವಿಶೇಷ…
ಗದಗ, 26 ಜೂನ್ 2025: ಎಸ್‌ಡಿಪಿಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪರ್ ಕೊಡ್ಲಿಪೇಟೆ ಮತ್ತು ರಾಜ್ಯ ಕಾರ್ಯದರ್ಶಿ ಹಾಗೂ…