Categories: featureNewsPolitics

ಮೈಸೂರಿನಲ್ಲಿ ಡಿಸೆಂಬರ್ 12 ಮತ್ತು 13, 2023 ರಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೇಯಲ್ಲಿ ಅಂಗೀಕರಿಸಲಾದ ನಿರ್ಣಯಗಳು.

  1. ದಲಿತರ ಮೇಲಿನ ದೌರ್ಜನ್ಯಗಳ ಏರಿಕೆ ಬಹಳ ಕಳವಳಕಾರಿ

ಭಾರತದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಸಾಮಾನ್ಯವಾಗಿವೆ. ಮೇಲ್ವರ್ಗದ ಜನರು ಚಾತುರ್ವರ್ಣ ವ್ಯವಸ್ಥೆಯ ಪರಿಧಿಯಿಂದ ಹೊರಗಿರುವ ದಲಿತರನ್ನು ಅಸ್ಪೃಶ್ಯರಾಗಿ ಕಾಣುತ್ತಾರೆ. ಅವರನ್ನು ಮನುಷ್ಯರೆಂದು ಪರಿಗಣಿಸುವುದಿಲ್ಲ. ಈ ದೇಶದಲ್ಲಿ ಗೋವುಗಳಿಗೆ ಸಿಗುವ ಕನಿಷ್ಠ ಗೌರವ, ಘನತೆ ಕೂಡ ದಲಿತರಿಗೆ ಸಿಗುತ್ತಿಲ್ಲ. ಅವರಿಗೆ ನಾಗರಿಕ, ಮೂಲಭೂತ ಮತ್ತು ಮಾನವ ಹಕ್ಕುಗಳನ್ನು ನಿರಾಕರಿಸಲಾಗಿದೆ ಮತ್ತು ಉಲ್ಲಂಘಿಸಲಾಗಿದೆ. ಅವರು ಮೇಲ್ಜಾತಿಗಳಿಂದ ನಾಗರಿಕ ತಲೆತಗ್ಗಿಸುವಂತ ಅಮಾನವೀಯ ವರ್ತನೆಗೆ ಒಳಪಡುತ್ತಾರೆ. ಯುಪಿ, ಗುಜರಾತ್, ಮಧ್ಯಪ್ರದೇಶ, ಬಿಹಾರ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ದಲಿತರ ಮೇಲೆ ಮೂತ್ರ ವಿಸರ್ಜನೆ ಮಾಡುವುದು , ಮೂತ್ರ ಕುಡಿಯಲು ಒತ್ತಾಯಿಸುವುದು, ಬೀದಿಗಳಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡುವುದು ಮುಂತಾದ ಎಲ್ಲಾ ರೀತಿಯ ದೌರ್ಜನ್ಯಗಳಿಗೆ ಗುರಿಯಾಗುತ್ತಾರೆ. ಅವರಿಗೆ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ಅಥವಾ ಮೇಲ್ಜಾತಿಯ ಜನರೊಂದಿಗೆ ನೀರು ಕುಡಿಯಲು ಅಥವಾ ಊಟ ಮಾಡಲು ಅವಕಾಶವಿಲ್ಲ.

ದೇಶದಾದ್ಯಂತ ಪ್ರತಿ ವರ್ಷ ಸುಮಾರು 60,000 ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತವೆ. ಈ ಅಂಕಿಗಳು ಇದರ ಗಂಭೀರತೆಯನ್ನು ತೋರಿಸುತ್ತವೆ. ದೇಶದಲ್ಲಿ ಜನರನ್ನು ಅವರ ಜಾತಿ ಅಥವಾ ಧರ್ಮದ ಹೊರತಾಗಿ ಸಮಾನವಾಗಿ ಪರಿಗಣಿಸುವವರೆಗೆ ಮತ್ತು ಅವರ ಘನತೆಯನ್ನು ಗೌರವಿಸದ ಹೊರತು ಈ ಸನ್ನಿವೇಶ ಬದಲಾಗುವುದಿಲ್ಲ.

ದೇಶದಲ್ಲಿ ದಲಿತ ಸಮುದಾಯದ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಬಗ್ಗೆ SDPI ತೀವ್ರ ಕಳವಳವನ್ನು ದಾಖಲಿಸುತ್ತದೆ. ದೇಶದ ವಿವಿಧ ಭಾಗಗಳಲ್ಲಿ ದಲಿತರನ್ನು ಮೇಲ್ಜಾತಿಯವರು ನಡೆಸಿಕೊಳ್ಳುತ್ತಿರುವ ರೀತಿ ಅತ್ಯಂತ ಅಮಾನವೀಯ ಮತ್ತು ನಾಗರೀಕ ಸಮಾಜಕ್ಕೆ ಅವಮಾನ. ಈ ದುಷ್ಕೃತ್ಯಗಳನ್ನು ಕೊನೆಗೊಳಿಸಲು ಆಡಳಿತಾರೂಢ ಸರ್ಕಾರಗಳು ಅಪರಾಧಿಗಳ ವಿರುದ್ಧ ಕಠಿಣ ಕ್ರಮಗಳನ್ನು ಪ್ರಾರಂಭಿಸಬೇಕು ಎಂದು SDPI ಈ ಮೂಲಕ ಆಗ್ರಹಿಸುತ್ತದೆ.

admin

Recent Posts

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…

1 month ago

ನೆನಪು

ಕೆ.ಎಂ. ಶರೀಫ್ ಸಾಬ್ 01.09.1964-22.12.2020 25 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದಲ್ಲಿ ಸಂಘಪರಿವಾರ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಕಾಲ. ಅದನ್ನು…

1 month ago