ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ನಮ್ಮ ರಾಷ್ಟ್ರದ ಬುನಾದಿಯಾಗಿದ್ದು ಅದು ಈಗ ಸರ್ವಾಧಿಕಾರಿ ಮತ್ತು ಬಲಪಂಥೀಯ ಫ್ಯಾಸಿಸ್ಟ್ ಆಡಳಿತದ ಅಡಿಯಲ್ಲಿ ನಲುಗುತ್ತಿದೆ. ಈ ಸರ್ಕಾರದ ಭ್ರಷ್ಟ ಮತ್ತು ಸಂವಿಧಾನ ವಿರೋಧಿ ನೀತಿಗಳ ವಿರುದ್ಧ ಮಾತನಾಡಿದ ವಿರೋಧ ಪಕ್ಷಗಳ ನಾಯಕರು ಸಂಸತ್ತಿನಿಂದ ಉಚ್ಚಾಟನೆಯಾಗುವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಪ್ರಾಮಾಣಿಕವಾಗಿ ಮಾತನಾಡುವ ಮತ್ತು ಬರೆಯುವ ಮಾಧ್ಯಮಗಳ ಮೇಲೆ ತನಿಖಾ ಸಂಸ್ಥೆಗಳು ದಾಳಿ ನಡೆಸುತ್ತಿವೆ ಮತ್ತು ಪತ್ರಕರ್ತರನ್ನು ಜೈಲುಗಳಿಗೆ ತಳ್ಳಲಾಗುತ್ತಿದೆ. ಸಂಸತ್ತಿನ ಒಳಗೆ ಮತ್ತು ಹೊರಗೆ ಅವಾಚ್ಯ, ಪ್ರಚೋದನಕಾರಿ ಮತ್ತು ಜನಾಂಗೀಯ ದ್ವೇಷಿ ಭಾಷೆ ಬಳಸಲು ನಾಚಿಕೆಪಡದಂತಹ ಕೀಳು ಮಟ್ಟಕ್ಕೆ ಆಡಳಿತಾರೂಢ ಶಾಸಕರು ಕುಸಿದಿದ್ದಾರೆ. ಇನ್ನೊಂದೆಡೆ ಕಾರ್ಪೊರೇಟ್ ಸಂಸ್ಥೆಗಳಿಂದ ಬರಬೇಕಿದ್ದ 2.69 ಲಕ್ಷ ಕೋಟಿ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡಲಾಗಿದೆ. ಆದರೆ ಬಡವರು ಮತ್ತು ರೈತರು ನಿರುದ್ಯೋಗ, ಬ್ಯಾಂಕ್ ಸಾಲಗಳು ಮತ್ತು ಅಪೌಷ್ಟಿಕತೆಯ ಪರಿಣಾಮವಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಆಡಳಿತ ಪಕ್ಷದ ಅಜೆಂಡಾ ಅಭಿವೃದ್ಧಿಯಲ್ಲ ಕೋಮು ದ್ವೇಷವಾಗಿದೆ. ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಗಳು ಮತ್ತೆ ಅಧಿಕಾರ ಹಿಡಿಯದಂತೆ ತಡೆಯಲು ಎಲ್ಲಾ ಸಮುದಾಯಗಳ ಜನರು ಜೊತೆಗೆ ಸಣ್ಣ ಅಥವಾ ದೊಡ್ಡ ಪಕ್ಷಗಳನ್ನು ಒಳಗೊಂಡ ವಿಶಾಲ ತಳಹದಿಯ ಮೈತ್ರಿಯನ್ನು ರೂಪಿಸಬೇಕು ಎಂದು SDPI ಮನವಿ ಮಾಡಿದೆ.
ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು SDPI ಕರ್ನಾಟಕ.
ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…
~ ರಿಯಾಜ್ ಫರಂಗಿಪೇಟೆ, SDPI ರಾಷ್ಟ್ರೀಯ ಕಾರ್ಯದರ್ಶಿ