feature

75ನೇ ಗಣರಾಜ್ಯೋತ್ಸವದ ಶುಭಾಶಯಗಳು

ಸಾಕಷ್ಟು ತ್ಯಾಗ, ಬಲಿದಾನಗಳ ನಂತರ ಪಡೆದುಕೊಂಡ ಸ್ವಾತಂತ್ರ್ಯವನ್ನು ಶಾಶ್ವತವಾಗಿಸಿಕೊಳ್ಳಲು ದೇಶಕ್ಕೆ ಸಮರ್ಥ ಸಂವಿಧಾನದ ಅವಶ್ಯಕತೆ ಇತ್ತು. ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರು ಅದನ್ನು ನಮಗೆ ಒದಗಿಸಿಕೊಟ್ಟರು. ಅದರ ಆಧಾರದಲ್ಲಿ ನಾವು ನಮ್ಮ ಭಾರತ ದೇಶವನ್ನು ಗಣರಾಜ್ಯವಾಗಿ ಘೋಷಿಸಿಕೊಂಡೆವು. ಹಾಗೆ ಸ್ಥಾಪಿಸಲಾದ ದೇಶದಲ್ಲಿ ಇಂದು ನಮ್ಮ ಸಂವಿಧಾನದ ಮೂಲ ಆಶಯಗಳನ್ನು ಫ್ಯಾಸಿಸ್ಟ್ ಶಕ್ತಿಗಳು ದುರ್ಬಲಗೊಳಿಸುತ್ತಿವೆ, ಜಾತ್ಯಾತಿತ ಪರಂಪರೆ ದುರ್ಬಲವಾಗುತ್ತಿದೆ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು ಬಲವಾಗಿ ನಿಂತು ಸಂವಿಧಾನದ ಆಶಯಗಳನ್ನು ರಕ್ಷಿಸಿ, ಸಂವಿಧಾನವನ್ನು ಉಳಿಸಬೇಕಿದೆ.

ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರದ ಗದ್ದುಗೆ ಸಾಧಿಸುವ ಮೂಲಕ ಸಂವಿಧಾನದ ಮೇಲೆ ದೊಡ್ಡ ಮಟ್ಟದ ಪ್ರಹಾರ ಮಾಡುತ್ತಿವೆ. ಹಂತ ಹಂತವಾಗಿ ಮನುವಾದವನ್ನು ಹೇರುತ್ತಿವೆ. ಇದೆಲ್ಲದರ ಬಗ್ಗೆ ನಾವು ಜಾಗೃತರಾಗಬೇಕಾದ ಮತ್ತು ಇತರರನ್ನೂ ಜಾಗೃತಗೊಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.

~ಅಬ್ದುಲ್ ಮಜೀದ್,

ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ

admin

Recent Posts

ಬದ್ಧತೆ ಮತ್ತು ಕಠಿಣ ಪರಿಶ್ರಮದ ಮೂಲಕ ಪಕ್ಷವನ್ನು ‘ಜನಾಧಿಕಾರದ ಕಡೆಗೆ ಮುನ್ನಡೆಸುವ ಮಹತ್ವದ ಪಾತ್ರನಿಭಾಯಿಸಬೇಕಿದೆ ಅಫ್ಸರ್ ಕೊಡ್ಲಿಪೇಟೆ

ಮೈಸೂರು, 03 ಜುಲೈ 2025: ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ರವರ ಮಾರ್ಗದರ್ಶನದಲ್ಲಿ…

4 days ago

Booker Prize Winner Deepa Basti Honoured by SDPI Kodagu

SDPI Kodagu District Committee felicitated Deepa Basti for her remarkable achievement in winning the Booker…

6 days ago

ದೀಪ ಬಾಸ್ತಿ ಅವರನ್ನು ಸನ್ಮಾನಿಸಿ ಗೌರವಿಸಿದ ಎಸ್‌.ಡಿ.ಪಿ.ಐ ಜಿಲ್ಲಾ ಸಮಿತಿ

ಶ್ರೀಮತಿ ದೀಪ ಬಾಸ್ತಿ ರವರಿಗೆ ಸಾಹಿತ್ಯ ಸಾಧನೆಯ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ದಿನಾಂಕ 29.06.2025ರಂದು…

6 days ago