ಬೆಂಗಳೂರು, 22 ಜೂನ್ 2025: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ 17ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ನಾಯಂಡನಹಳ್ಳಿ ವಾರ್ಡ್ ವ್ಯಾಪ್ತಿಯ ಕಾರ್ಯಕರ್ತರ ಕುಟುಂಬ ಸದಸ್ಯರೊಂದಿಗೆ “ಫ್ಯಾಮಿಲಿ ಗೆಟ್ ಟುಗೆದರ್” ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಪಕ್ಷದ ಕಳೆದ 16 ವರ್ಷಗಳ ಹೋರಾಟದ ಬದುಕು ಮತ್ತು ಪಕ್ಷದ ಕಾರ್ಯಕರ್ತರು ಎದುರಿಸಿದ ಸಂಕಷ್ಟಗಳ ಬಗ್ಗೆ ಮಾತನಾಡುತ್ತಾ “ರಾಜಕೀಯ ಸಿದ್ದಾಂತಗಳ ಕುರಿತು ತೀವ್ರ ನಿಷ್ಠೆ ಹೊಂದಿರುವ SDPI ಪಕ್ಷದ ಚಳವಳಿಯ ಬಲವು ಕೇವಲ ವ್ಯಕ್ತಿಗಳ ತ್ಯಾಗದಲ್ಲಿ ಅಲ್ಲ, ಆ ವ್ಯಕ್ತಿಗಳ ಹಿಂದೆ ನಿಂತಿರುವ ಕುಟುಂಬಗಳ ಧೈರ್ಯ, ಸಹನೆ ಮತ್ತು ನೈತಿಕ ಬೆಂಬಲದಲ್ಲಿಯೂ ಇದೆ.
ಹೋರಾಟವು ಸಂಘಟಿತವಾಗಬೇಕಾದರೆ ಅದು ಮನೆಯ ತಳಮಟ್ಟದಲ್ಲೇ ಪ್ರಾರಂಭವಾಗಬೇಕು. ಕುಟುಂಬದ ಸದಸ್ಯರು, ಮುಖ್ಯವಾಗಿ ಮಹಿಳೆಯರು ಮತ್ತು ಯುವಕರ ಪಾಲು ಈ ಹೋರಾಟದ ಪ್ರಮುಖ ಪ್ರೇರಣೆಯಾಗಿದೆ “
ಎಂದು ಒತ್ತಿ ಹೇಳಿದರು:
“ಹಿರಿಯರ ಅನುಭವಗಳು ಮತ್ತು ಮಕ್ಕಳ ಭರವಸೆ, ಕುಟುಂಬದಲ್ಲಿ ಬೆಳೆದ ಸಂಸ್ಕಾರಗಳು ಪಕ್ಷದ ಭವಿಷ್ಯವನ್ನು ರೂಪಿಸುತ್ತವೆ. ಸಂವಿಧಾನದ ರಕ್ಷಣೆಗೆ ಸಂಬಂಧಿಸಿದ ಹೋರಾಟ ಒಂದಿಷ್ಟು ಜನರ ಹೊಣೆಗಾರಿಕೆಯಷ್ಟೇ ಅಲ್ಲ, ಅದು ಕುಟುಂಬದ ಪ್ರತಿಯೊಬ್ಬ ಸದಸ್ಯನ ನಿಷ್ಠೆ ಮತ್ತು ಜವಾಬ್ದಾರಿ ಆಗಬೇಕು.” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳಾ ಕಾರ್ಯಕರ್ತರು ತಮ್ಮ ಜೀವನದಲ್ಲಿ ಎದುರಿಸಿದ ರಾಜಕೀಯ ಅಥವಾ ಸಾಮಾಜಿಕ ಅನ್ಯಾಯಗಳನ್ನು ಹಂಚಿಕೊಂಡು ಭಾವನಾತ್ಮಕ ಹೊಣೆಗಾರಿಕೆಯನ್ನು ವ್ಯಕ್ತಪಡಿಸಿದರು. ಯುವಕರು, ವಿಶೇಷವಾಗಿ ಹೈ ಸ್ಕೂಲ್ ಹಾಗೂ ಕಾಲೇಜು ಮಟ್ಟದವರು, ತಮ್ಮ ಮುಂದಿರುವ ಸಮಾಜ ಪರಿವರ್ತನೆ ಸಂಬಂಧಿತ ಕನಸುಗಳು ಮತ್ತು ಪಕ್ಷದ ಮೂಲಕ ತಾವು ಪಡೆದ ಪ್ರೇರಣೆಯ ಬಗ್ಗೆ ಮಾತನಾಡಿದರು.
”ಈ ರೀತಿಯ ಕುಟುಂಬ ಸಮ್ಮಿಲನಗಳು ಕೇವಲ ಸಾಮಾಜಿಕ ನೆಲೆಗಟ್ಟಿನಲ್ಲಿಯೇ ಅಲ್ಲ, ಇವು ಪಕ್ಷದ ನೈತಿಕ ಶಕ್ತಿಯನ್ನು ಬಲಪಡಿಸುವ, ನಂಬಿಕೆಗಳ ಚಿಂತನೆಗೆ ಪ್ರಚೋದನೆ ನೀಡುವ, ಮತ್ತು ಮುಂದಿನ ಪೀಳಿಗೆಗೆ ರಾಜಕೀಯ ಜವಾಬ್ದಾರಿಯ ಸಂದೇಶ ನೀಡುವ ಪ್ರಮುಖ ವೇದಿಕೆಯಾಗಲಿ ಎಂದು ಅಪ್ಸರ್ ಕೊಡ್ಲಿಪೇಟೆ ಕರೆ ನೀಡಿದರು.”
ಸಭೆಯಲ್ಲಿ ಹಾಜರಿದ್ದವರು:
SDPI ನಾಯಂಡನಹಳ್ಳಿ ವಾರ್ಡ್ ಅಧ್ಯಕ್ಷ ಮೋಹಮ್ಮದ್ ನಯಾಜ್, ಕಾರ್ಯದರ್ಶಿ ಇನಾಯತ್ ಪಾಷ, ಪಕ್ಷದ ಜಿಲ್ಲಾ ನಾಯಕರು, ಮಹಿಳಾ ಘಟಕವಾದ ವಿಮೆನ್ ಇಂಡಿಯಾ ಮೂಮೆಂಟ್ ಸಂಘಟನೆಯ ಪ್ರಮುಖ ಸದಸ್ಯರು
Press Release Gulbarga, Sept 11:At the SDPI leaders’ meeting held in Gulbarga today, the party’s…
پریس ریلیز بنگلورو : 10 ستمبر : کرناٹک میں کانگریس حکومت تقریباً 95% مسلم برادری…
BAAR BAAR RSS KE JAAL MEIN PHANS'TI HUI RIYAASTI CONGRESS HUKUMAT -QURBANI KE BAKRAY BAN…
ಮತ್ತೆ ಮತ್ತೆ ಆರ್ ಎಸ್ಎಸ್ ಖೇಡ್ದಾಕ್ಕೆ ಬೀಳುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರ - ಬಲಿ ಪಶುಗಳಾಗುತ್ತಿರುವ ಮುಸ್ಲಿಮರು ಬೆಂಗಳೂರು :…
ರಾಯಚೂರಿನಲ್ಲಿ ನಡೆದ ನಾಯಕರ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್, ರಾಜ್ಯ ನಾಯಕರು ಅಬ್ದುಲ್ ರಹೀಮ್ ಪಟೇಲ್ ಹಾಗೂ ಅಕ್ಟರ್…