ಬಿಡದಿ ಟೌನ್‌ಶಿಪ್ ಯೋಜನೆ: ರೈತರ ಹಿತಾಸಕ್ತಿ ಮತ್ತು ಪಾರದರ್ಶಕತೆಯನ್ನು ಸರ್ಕಾರ ಎತ್ತಿಹಿಡಿಯಲಿ : SDPI

ಬೆಂಗಳೂರು, ಜುಲೈ 21-2026
ಬಿಡದಿ ಪ್ರದೇಶದಲ್ಲಿ ಪ್ರಸ್ತಾಪಿತ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಯ ಸುತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವೆ ನಡೆಯುತ್ತಿರುವ ರಾಜಕೀಯ ಗಲಾಟೆ ಮತ್ತು ವಾಗ್ವಾದಗಳು ಗಂಭೀರ ಆತಂಕವನ್ನು ಹುಟ್ಟುಹಾಕಿವೆ. ಸುಮಾರು ೫,೦೦೦ ಎಕರೆಗಳಷ್ಟು ಫಲವತ್ತಾದ ಕೃಷಿ ಭೂಮಿಯನ್ನು ಒಳಗೊಂಡ ಈ ಯೋಜನೆಯ ಹಿಂದೆ ನಿಜವಾದ ಸಾರ್ವಜನಿಕ ಅಭಿವೃದ್ಧಿ ಉದ್ದೇಶಕ್ಕಿಂತ ಹೆಚ್ಚಾಗಿ ರಿಯಲ್ ಎಸ್ಟೇಟ್ ಹಿತಾಸಕ್ತಿಗಳು ಮತ್ತು ಆಪ್ತ ಬಂಡವಾಳ ಶಾಹಿ ಲೆಕ್ಕಾಚಾರಗಳು ಕೆಲಸ ಮಾಡುತ್ತಿವೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು SDPI ರಾಜ್ಯ ಉಪಾಧ್ಯಕ್ಷರಾದ ದೇವನೂರ ಪುಟ್ನಂಜಯ್ಯ ಅವರು ಆರೋಪಿಸಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವೆ ನಡೆಯುತ್ತಿರುವ ಸವಾಲು-ಪ್ರತಿಸವಾಲುಗಳು ಮತ್ತು ಸಾರ್ವಜನಿಕ ಚರ್ಚೆಗಳು ರೈತರ ಭೂಮಿ, ಜೀವನೋಪಾಯ ಮತ್ತು ಪರಿಹಾರದ ನಿಜವಾದ ಸಮಸ್ಯೆಯನ್ನು ಕೇಂದ್ರೀಕರಿಸುವ ಬದಲು, ಯೋಜನೆಯಿಂದ ಉಂಟಾಗುವ ಲಾಭಾಂಶದ ಹಂಚಿಕೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇದೆಯೋ ಎಂಬ ಸಂಶಯ ನಮಗಿದೆ. ಈ ಆಂತರಿಕ ಗುದ್ದಾಟದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಕೊರತೆ ಸ್ಪಷ್ಟವಾಗಿ ಪ್ರತಿಬಿಂಬಿತವಾಗುತ್ತಿದೆ. ಎರಡೂ ಪಕ್ಷಗಳು ರೈತರ ಹಿತವನ್ನು ಮುಂದಿಟ್ಟುಕೊಂಡು ಏಕಮುಖವಾಗಿ ನಿಲ್ಲುವ ಬದಲು, ರಾಜಕೀಯ ಲಾಭಕ್ಕಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದು ದುರದೃಷ್ಟಕರವಾಗಿದೆ.
ರೈತರು ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುವ ಭಯದಿಂದ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವುದೇ ರೈತರಿಗೆ ಅನ್ಯಾಯವಾಗಬಾರದು ಎಂಬುದು ನಮ್ಮ ಮೂಲಭೂತ ನಿಲುವು. ಭೂಸ್ವಾಧೀನದಲ್ಲಿ ರೈತರ ಸ್ವಯಂಪ್ರೇರಿತ ಸಮ್ಮತಿ ಕಡ್ಡಾಯವಾಗಿರಬೇಕು. ಸಮೀಕ್ಷೆ ಮತ್ತು ಅಧಿಸೂಚನೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು. ಯೋಜನೆ ಮುಂದುವರಿದಲ್ಲಿ ಸಮರ್ಪಕ, ನ್ಯಾಯಯುತ ಪರಿಹಾರ, ಪುನರ್ವಸತಿ ಮತ್ತು ಪರ್ಯಾಯ ಜೀವನೋಪಾಯದ ವ್ಯವಸ್ಥೆಯನ್ನು ಖಚಿತಪಡಿಸಬೇಕು.
ಎಸ್‌ಡಿಪಿಐ ಯಾವಾಗಲೂ ರೈತರು ಮತ್ತು ದುರ್ಬಲ ವರ್ಗಗಳ ಪಕ್ಷದೊಂದಿಗೆ ಘನತೆಯಿಂದ ನಿಲ್ಲುತ್ತದೆ. ರಾಜಕೀಯ ಪಕ್ಷಗಳು ತಮ್ಮ ಆಂತರಿಕ ಗಲಾಟೆಗಳನ್ನು ಬದಿಗಿಟ್ಟು, ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ನಿಜವಾದ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರವು ಈ ಯೋಜನೆಯ ವಿನ್ಯಾಸ, ಲಾಭಾಂಶ ಮತ್ತು ಆಪ್ತ ಹಿತಾಸಕ್ತಿಗಳ ಸಂಬಂಧಗಳ ಬಗ್ಗೆ ಸಂಪೂರ್ಣ ಪಾರದರ್ಶಕತೆಯನ್ನು ತರಬೇಕು ಮತ್ತು ರೈತರ ಒಪ್ಪಿಗೆ ಇಲ್ಲದಿದ್ದಲ್ಲಿ ಯೋಜನೆಯನ್ನು ಪುನರ್ವಿಮರ್ಶಿಸಬೇಕು ಎಂದು ದೇವನೂರ ಪುಟ್ಂಜಯ್ಯ ಅವರು ಸರಕಾರಕ್ಕೆ ಸಲಹೆ ನೀಡಿದ್ದೂ, ತಪ್ಪಿದ್ದಲ್ಲಿ ರೈತರಪರವಾಗಿ ತೀವ್ರ ಹೋರಾಟ ನಡೆಸಲು ಪಕ್ಷ ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

admin

Recent Posts

ಜ್ಞಾನೇಶ್‌ ಅವರನ್ನು ವಜಾಗೊಳಿಸಿ!SIR ಅನ್ನು ರದ್ದುಗೊಳಿಸಿ

ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಮತದಾನದ ಹಕ್ಕು, ನಮ್ಮ ಪ್ರಜಾಪ್ರಭುತ್ವದ ಆತ್ಮ ಇಂದು ಅಪಾಯದಲ್ಲಿದೆ ಚುನಾವಣಾ ಆಯೋಗವು ಜಾರಿಗೆ ತಂದಿರುವ…

5 days ago

SACK GYANESH KUMAR SCRAP SIR

October 8 | 10:30AM Onwards Freedom Park, Bengaluru MASS PROTEST & STATE-LEVEL PEOPLE'S TRIBUNAL ON…

6 days ago

ಗ್ಯಾನೇಶ್ ಅನ್ನು ವಜಾಗೊಳಿಸಿ

SIR ರದ್ದುಗೊಳಿಸಿ ಅಕ್ಟೋಬರ್ 8 | ಬೆಳಗ್ಗೆ 10:30 ರಿಂದ ಫ್ರೀಡಂ ಪಾರ್ಕ್, ಬೆಂಗಳೂರು ಬೃಹತ್‌ ಪ್ರತಿಭಟನೆ ಹಾಗೂ SIR…

6 days ago

ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿಯಂದು ದೇಶದ ಎಲ್ಲ ಜನತೆಗೆ ಹೃತ್ಪೂರ್ವಕ ಶುಭಾಶಯಗಳು. ಗಾಂಧೀಜಿ ಕಂಡ ಭಾರತ ಸರ್ವಾಧಿಕಾರದ ಭಾರತವಾಗಿರಲಿಲ್ಲ.…

1 week ago