Kannada Press Releases

26 September

*ಲದಾಖ್ ನ ರಕ್ತಪಾತ ಮೋದಿ ಸರ್ಕಾರದ ವಂಚನೆಯನ್ನು ಬಹಿರಂಗಗೊಳಿಸಿದೆ…,*

ಲದಾಖ್ ನಲ್ಲಿ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಗಳ ಮೇಲೆ ಗುಂಡು ಹಾರಿಸಿ ನಾಲ್ಕು ಜನರ ಜೀವ ತೆಗೆದಿರುವ ಮೋದಿ ಆಡಳಿತದ ಕ್ರೌರ್ಯವನ್ನು ಸೋಶಿಯಲ್‌ ಡೆಮಾಕ್ರಟಿಲ್‌ ಪಾರ್ಟಿ ಆಫ್‌ ಇಂಡಿಯಾ (SDPI) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಸ್ಮಿನ್ ಫಾರೂಕಿ ತೀವ್ರವಾಗಿ ಖಂಡಿಸಿದ್ದಾರೆ. ಈ ದಮನಕಾರಿ ಘಟನೆಯಲ್ಲಿ 70 ಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸ್ ಸಿಬ್ಬಂದಿಯೂ ಸಹ ಸೇರಿದ್ದಾರೆ. ಹಿಮಾಲಯ ತಪ್ಪಲಿನ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡುವುದು, ಆರನೇ ಅನುಚ್ಚೇಧಕ್ಕೆ ಸೇರಿಸುವುದು, ಉದ್ಯೋಗದಲ್ಲಿ ಮೀಸಲಾತಿ, ಭೂಮಿ ಮತ್ತು ಸಾಂಸ್ಕೃತಿಕ ಗುರುತಿನ ರಕ್ಷಣೆಯ ನ್ಯಾಯಯುತ ಬೇಡಿಕೆಯೊಂದಿಗೆ ಪ್ರತಿಭಟಿಸುತ್ತಿದ್ದವರ ಮೇಲೆ ನಡೆದ ಈ ರಕ್ತಪಾತ ದಾಳಿ ರಾಜ್ಯದ ಜನರ ಹಕ್ಕುಗಳ ರಕ್ಷಣೆ ಮಾಡುವುದರಲ್ಲಿ ಸರ್ಕಾರ ಸಂಪೂರ್ಣವಾಗಿ ವೈಫಲ್ಯವನ್ನು ಕಂಡಿದೆ ಎಂದು ತೋರಿಸುತ್ತದೆ. ಈ ಎಲ್ಲಾ ಬೇಡಿಕೆಗಳು 2019 ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಏಕಪಕ್ಷೀಯವಾಗಿ ವಿಭಜಿಸಿದ ದಿನದಂದಲೇ ಉದ್ಭವಿಸಿವೆ.

ಮೋದಿ ಸರ್ಕಾರ ಎಸಗಿರುವ ಮಹಾ ವಂಚನೆ ಇಲ್ಲಿ ಬಹಳ ಸ್ಪಷ್ಟವಾಗಿದ್ದು, ಆರ್ಟಿಕಲ್ 370 ರದ್ದು ಪಡಿಸಿದ ನಂತರ ಅಭಿವೃದ್ದಿಯ ಭರವಸೆಯನ್ನು ನೀಡಲಾಗಿತ್ತಾದರೂ, ವಾಸ್ತವದಲ್ಲಿ ಸರ್ಕಾರದ ನಿರ್ಲಕ್ಷ್ಯ, ನಿರುದ್ಯೋಗದಲ್ಲಿ ಏರಿಕೆ ಮತ್ತು ಪರಿಸರದ ನಾಶ ಮಾತ್ರ ಕಂಡು ಬಂದಿದೆ. ಇದು ದೇಶದ ಉತ್ತರ  ತುದಿಭಾಗದ ರಾಜ್ಯದಲ್ಲಿ ತೀವ್ರ ಪರಿಣಾಮ ಬೀರಿದೆ. ಉನ್ನತ ಮಟ್ಟದ ಸಮಿತಿಯ ಮೂಲಕ ಅರ್ಥಪೂರ್ಣ ಸಂವಾದ ನಡೆಸಬೇಕಾಗಿದ್ದ ಸಮಯದಲ್ಲಿ, ಸರ್ಕಾರ ಆಶ್ರುವಾಯು, ಲಾಠಿ ಬೀಸುವಿಕೆ, ಬಲವಂತ ಕರ್ಫ್ಯೂ ಹೇರಿಕೆ ಮತ್ತು ಚಳುವಳಿಗಾರರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿ ಸುಳ್ಳು ಪ್ರಕರಣಗಳ ದಾಖಲಿಸುವಿಕೆ ಇತ್ಯಾದಿ ದಬ್ಬಾಳಿಕೆಗಳು ನಡೆದಿದೆ. ನ್ಯಾಯಯುತ ತಮ್ಮ ಬೇಡಿಕೆಗಳಿಗೆ 15 ದಿನಗಳಿಂದ ಸೋನಂ ವಾಂಗ್ಚುಕ್ ಅವರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ಮಾಡಿದ್ದಲ್ಲದೆ, ಗಲಭೆಗೆ ಅವರೇ ಕಾರಣ ಎಂದು ಅವರನ್ನು ದೂಷಿಸಲಾಗುತ್ತಿದೆ. ಇದು ಜನಪರ ಆಡಳಿತವಲ್ಲ,  ಇದು ಸರ್ವಾಧಿಕಾರಿ ಧೋರಣೆಯ ಪರಮಾವಧಿ.  ರೈತರ ಹೋರಾಟಗಳನ್ನು ಹತ್ತಿಕ್ಕುವುದರಿಂದ ಹಿಡಿದು, ಅಲ್ಪಸಂಖ್ಯಾತರ ದಮನದವರೆಗೆ ಈ ಆಡಳಿತದ ಧೋರಣೆ ಇದೇ ರೀತಿ ಮುಂದುವರೆದಿದೆ.

SDPI ಪಕ್ಷ ಲದಾಖ್ ಪ್ರದೇಶದ ಜನರ ಸಾಂವಿಧಾನಿಕ ಹಕ್ಕುಗಳ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ. ತನಿಖಾ ಸಂಸ್ಥೆಗಳ ದುರುಪಯೋಗ ಮತ್ತು ಒಡೆದು ಆಳುವ ರಾಜಕಾರಣದ ಭಾಗವಾದ, ಉದಾಹರಣೆಗೆ ವಕ್ಫ್ ತಿದ್ದುಪಡಿ ಮಸೂದೆ ಮತ್ತು ಹಿಂಸೆಯನ್ನು ಪೋಷಿಸುವ ಗೋ ರಕ್ಷಣಾ ನೀತಿಗಳು ದೇಶದಾದ್ಯಂತ ಶೋಷಿತ ಸಮುದಾಯಗಳನ್ನು ಇನ್ನಷ್ಟು ಮೂಲೆ ಗುಂಪು ಮಾಡಲು ಕಾರಣವಾಗುತ್ತಿವೆ.

ನ್ಯಾಯವನ್ನು ನಿರಾಕರಿಸುವ ಈ ರೀತಿಯ ದಮನಕಾರಿ ನೀತಿ ಭಾರತದ ಪ್ರಜಾಪ್ರಭುತ್ವದಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಮತ್ತಷ್ಟು ಆಳಕ್ಕೆ ತಗೆದುಕೊಂಡು ಹೋಗುತ್ತದೆ. ಆದುದರಿಂದ ಪ್ರಧಾನಿ ಮೋದಿ ತಕ್ಷಣ ಅಲ್ಲಿ ಮಾತುಕತೆ ಆರಂಭಿಸಿ ಅವರ ಪ್ರಮುಖ ಬೇಡಿಕೆಯಾದ ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸುವುದಲ್ಲದೇ,  ಈ ದಮನ ನೀತಿಯನ್ನು ಅಂತ್ಯಗೊಳಿಸಬೇಕು ಎಂದು SDPI ಆಗ್ರಹಿಸುತ್ತದೆ.

Read More
24 September

ಪ್ಯಾಲೆಸ್ತೀನಿನ ರಕ್ತದ ಕಲೆಗಳಿಂದ ಬ್ರಿಟನ್ ಕೈ ತೊಳೆಯಲು ಸಾಧ್ಯವಿಲ್ಲ

ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾ ಇತ್ತೀಚೆಗೆ ಪ್ಯಾಲೆಸ್ಟೈನನ್ನು ರಾಷ್ಟ್ರವಾಗಿ ಗುರುತಿಸುವ ನಿರ್ಧಾರವನ್ನು ಪ್ರಕಟಿಸಿದ್ದು, ದಶಕಗಳ ಹಳೆಯ ಸಮಸ್ಯೆಗೆ “ಎರಡು ರಾಷ್ಟ್ರ ಪರಿಹಾರ” ಅಗತ್ಯವಿದೆ ಎಂದು ಹೇಳಿದ್ದಾರೆ. ಇಸ್ರೇಲ್ ಪ್ಯಾಲೆಸ್ತೀನಿಯರ ಮೇಲೆ ನಡೆಸುತ್ತಿರುವ ಹಿಂಸಾಚಾರಗಳು, ಈ ದೇಶಗಳಿಗೆ ತಮ್ಮ ಹಳೆಯ ನೀತಿಗಳನ್ನು ಪುನರ್

Read More
14 September

ಪತ್ರಿಕಾ ಪ್ರಕಟಣೆಗಾಗಿ

ಬದಲಾವಣೆ ಎಂದರೆ ಯಾರೋ ಒಬ್ಬ ನಾಯಕ ಬಂದು ಮಾಡುವ ಕೆಲಸವಲ್ಲ, ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತ ತನ್ನ ಕೊಡುಗೆಯನ್ನು ನೀಡಿದಾಗ ಮಾತ್ರ ಸಾಧ್ಯವಾಗುವ ಶಕ್ತಿ. ಅಪ್ಸರ್ ಕೊಡ್ಲಿಪೇಟೆ ಹೊಸಕೋಟೆ : ಸೆಪ್ಟೆಂಬರ್-11 :ಇಂದು ಹೊಸಕೋಟೆಯಲ್ಲಿ ನಡೆದ ಎಸ್‌ಡಿಪಿಐ ಪಕ್ಷದ ನಾಯಕರ ಸಭೆಯಲ್ಲಿ ಪಕ್ಷದ

Read More
11 September

ಪತ್ರಿಕಾ ಪ್ರಕಟಣೆ

ಮತ್ತೆ ಮತ್ತೆ ಆರ್ ಎಸ್ಎಸ್ ಖೇಡ್ದಾಕ್ಕೆ ಬೀಳುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರ – ಬಲಿ ಪಶುಗಳಾಗುತ್ತಿರುವ ಮುಸ್ಲಿಮರು ಬೆಂಗಳೂರು : ಸೆಪ್ಟೆಂಬರ್ :10:ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಸುಮಾರು 95% ಮುಸ್ಲಿಂ ಸಮುದಾಯದ ಮತಗಳಿಂದ ಅಧಿಕಾರಕ್ಕೆ ಬಂದಿದ್ದರೂ, ಇಂದು ಆ ಸರ್ಕಾರವೇ ಬಿಜೆಪಿ,

Read More
14 August

79 ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

“ಸ್ವಾತಂತ್ರ್ಯವನ್ನು ರಕ್ಷಿಸೋಣ, ದೇಶವನ್ನು ಉಳಿಸೋಣ” ಭಿನ್ನತೆಗಳನ್ನು ಮೀರಿದ ಸಹೋದರತ್ವ, ನ್ಯಾಯದಿಂದ ತುಂಬಿದ ರಾಷ್ಟ್ರ, ಸ್ವಾತಂತ್ರ್ಯವನ್ನು ರಕ್ಷಿಸಿ, ಜನರ ಗೌರವವನ್ನು ಉಳಿಸೋಣ! ಶಾಹಿದಾ ತಸ್ನೀಮ್,ಉಪಾಧ್ಯಕ್ಷೆ, SDPI ಕರ್ನಾಟಕ SDPIKarnataka #happyindependenceday2025 #79thIndependenceDay

Read More
07 August

ಗುಜರಾತ್, ಬಿಹಾರದಲ್ಲಿ ಕುಸಿಯುತ್ತಿರುವ ಸೇತುವೆಗಳ ಡಿಪಿಆರ್ ಮಾಡಿದವರು ಯಾರು?: ಪ್ರತಾಪ್ ಸಿಂಹರಿಗೆ ಎಸ್‌ಡಿಪಿಐ ಟಾಂಗ್
ಆಗಸ್ಟ್ 06, 2025

ಮೈಸೂರು : ಸತತ 25 ವರ್ಷಗಳಿಂದ ಬಿಜೆಪಿ ಆಡಳಿತವಿರುವ ಗುಜರಾತ್ ರಾಜ್ಯದಲ್ಲಿ ಮತ್ತು ಬಿಜೆಪಿ, ಜೆಡಿಯು ಸಮ್ಮಿಶ್ರ ಸರ್ಕಾರವಿರುವ ಬಿಹಾರ ರಾಜ್ಯದಲ್ಲಿ ಸತತವಾಗಿ ಕುಸಿಯುತ್ತಿರುವ ಸೇತುವೆಗಳ ಡಿಪಿಆರ್ ಮಾಡಿದವರು ಯಾರು ಹೇಳು? ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಶ್ನಿಸುವ ಮೂಲಕ ಕೆಆರ್‍ಎಸ್ ಜಲಾಶಯಕ್ಕೆ ಟಿಪ್ಪು ಅಡಿಗಲ್ಲು ಹಾಕಿದ್ದಾರೆ ಎಂಬ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿಕೆ ಕುರಿತು, ಯಾವ ಮುಲ್ಲ ಡಿಪಿಆರ್ ಮಾಡಿಸಿದ್ದು ಎಂದು ಪ್ರಶ್ನಿಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಾಂಗ್ ನೀಡಿದರು.
ಮಹದೇವಪುರ ರಸ್ತೆಯಲ್ಲಿರುವ ಎಸ್‍ಡಿಪಿಐ ಕಚೇರಿಯಲ್ಲಿ ಬುಧವಾರ ಮದ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಒಬ್ಬ ದಡ್ಡ ಮತ್ತು ಮೂರ್ಖ, ಆತನಿಗೆ ಇತಿಹಾಸ ಗೊತ್ತಿಲ್ಲ, ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಕೆಆರ್‍ಎಸ್ ಜಲಾಶವನ್ನು ಟಿಪ್ಪು ಸುಲ್ತಾನ್ ಕಟ್ಟಿಸಿದ್ದು ಎಂದು ಎಲ್ಲೂ ಹೇಳಿಲ್ಲ, ಕಾವೇರಿ ನದಿಗೆ ಅಣೆಕಟ್ಟೆ ಕಟ್ಟುವ ಯೋಜನೆ ರೂಪಿಸಿ ಅದಕ್ಕೆ ಮೊದಲು ಅಡಿಗಲ್ಲು ಹಾಕಿಸಿದ್ದು ಟಿಪ್ಪು ಎಂದು ಹೇಳಿದ್ದಾರೆ ಅಷ್ಟೇ, ಈ ಶಾಸನವನ್ನು ಕೆಆರ್‍ಎಸ್ ಜಲಾಶಯ ಕಟ್ಟಿಸಿದ ಮಹಾತ್ಮರಾದ ನಾಲ್ವಡಿ ಕೃಷ್ಣರಾಜ ಪಡೆಯರ್ ಅವರೇ ಜಲಾಶಯದ ಬಳಿ ಟಿಪ್ಪು ಪರ್ಶಿಯನ್ ಭಾಷೆಯಲ್ಲಿ ಬರೆಸಿದ್ದ ಶಾಸನವನ್ನು ಕನ್ನಡದಲ್ಲಿ ಬರೆಸಿ ಜಲಾಶಯದ ಬಳಿಯೇ ಹಾಕಿಸುವ ಮೂಲಕ ತಮ್ಮ ದೊಡ್ಡತನವನ್ನು ಮೆರೆದಿದ್ದಾರೆ. ಆದರೇ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಮಾತ್ರ ತಮ್ಮ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದ್ದಾರೆ. ಗುಜರಾತ್ ರಾಜ್ಯದಲ್ಲಿ ಕಳೆದ 25 ವರ್ಷಗಳಿಂದಲೂ ಬಿಜೆಪಿ ಸರ್ಕಾರದ ಆಡಳಿತವೇ ಇದೆ. ಪ್ರಧಾನಿ ಮೋದಿಯವರು ಮೊದಲು ಗುಜರಾತ್ ಮುಖ್ಯಮಂತ್ರಿ ಆಗಿದ್ದವರು, ಆ ರಾಜ್ಯದಲ್ಲಿ ಎಷ್ಟು ಸೇತುವೆಗಳು ಕುಸಿದಿವೆ, ಎಷ್ಟೋಂದು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅದೇ ರೀತಿ ಬಿಜೆಪಿ ಮತ್ತು ಜೆಡಿಯು ಸಮ್ಮಿಶ್ರ ಸರ್ಕಾರವಿರುವ ಬಿಹಾರದಲ್ಲಿಯೂ ಹತ್ತಾರು ಸೇತುವೆಗಳು ಕುಸಿದಿವೆ, ಅವುಗಳ ಡಿಪಿಆರ್ ಮಾಡಿದವರು ಯಾರು ಹೇಳು ನೋಡೋಣ? ಎಂದು ಖಾರವಾಗಿ ಪ್ರಶ್ನಿಸಿದರು.

ವಿಶ್ವವಿಖ್ಯಾತ ಆಗ್ರಾದ ತಾಜ್‍ಮಹಲ್, ದೆಹಲಿಯ ಕೆಂಪುಕೋಟೆ, ಕುತುಬ್ ಮಿನಾರ್, ಅಷ್ಟೇ ಏಕೆ ಕರ್ನಾಟಕದಲ್ಲಿರುವ ಗೋಲ್‍ಗುಂಬಜ್ ಕಟ್ಟಡಗಳ ಡಿಪಿಆರ್ ಮಾಡಿದವರು ಯಾರು ಎಂಬುದು ನಿನಗೆ ಗೊತ್ತಿದೆಯಾ? ನೀನೊಬ್ಬ ಮೂರ್ಖ ನಿನ್ನಂತೆ ಇರುವ ಮೂರ್ಖರು ಮಾತ್ರ ನಿನ್ನ ಮಾತಿಗೆ ಶಹಬ್ಬಾಸ್ ಹೇಳುತ್ತಾರೆ, ಬುದ್ಧಿವಂತರು ನಿನ್ನ ಮಾತಿಗೆ ಉಗಿಯುತ್ತಾರೆ ಎಂದು ಝಾಡಿಸಿದರು.

ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿಖಾನ್ ಅವರು ಈ ನಾಡಿನ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ನೀರಾವರಿ ಇಲ್ಲದ ಸಂದರ್ಭದಲ್ಲಿ ಚೀನಾದಿಂದ ರೇಷ್ಮೆ ಬೆಳೆಯನ್ನು ತರಿಸಿ ತನ್ನ ರಾಜ್ಯದಲ್ಲಿ ಅಭಿವೃದ್ಧಿಪಡಿಸಿದರು, ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹ ನೀಡಿದರು. 1782 ರಲ್ಲಿ ಟಿಪ್ಪು ಸುಲ್ತಾನ್ ಅವರು, ಕಾವೇರಿ ನದಿಗೆ 70 ಅಡಿ ಎತ್ತರದ ಅಣೆಕಟ್ಟೆ ಕಟ್ಟುವ ಮೂಲಕ ರೈತರ ಬದುಕು ಹಸನು ಮಾಡಲು ಯತ್ನಿಸಿ ಅದಕ್ಕೆ ಹಣಕಾಸು ಹೊಂದಿಸಿದ್ದರು, ಆದರೇ, 3ನೇ ಮೈಸೂರು ಆಂಗ್ಲೋ ಯುದ್ಧದಲ್ಲಿ ಟಿಪ್ಪು ಬ್ರಿಟೀಷರ ವಿರುದ್ಧ ಸೋಲು ಅನುಭವಿಸಿ ಯುದ್ಧದ ಖರ್ಚು 3 ಕೋಟಿ ಹಣವನ್ನು ಬ್ರಿಟಿಷರಿಗೆ ಕೊಡಲಾಗದೆ ತಮ್ಮ ಮಕ್ಕಳನ್ನು ಒತ್ತೆ ಇಟ್ಟಿದ್ದು ಯಾರೂ ಮರೆಯಲು ಸಾಧ್ಯವಿಲ್ಲ, ಬಳಿಕ ನಾಲ್ಕನೇ ಮೈಸೂರು-ಆಂಗ್ಲೋ ಯುದ್ಧದಲ್ಲಿ ಟಿಪ್ಪು ವೀರ ಮರಣ ಹೊಂದಿದಾಗ ಅಣೆಕಟ್ಟೆ ಕಟ್ಟಲು ಆಗುವುದಿಲ್ಲ, ಆದರೇ ರಾಜರ್ಷಿ ನಾಲ್ವಡಿ ಕೃಷ್ಣರಾಯ ಒಡೆಯರ್ ಅವರು ಕೆಆರ್‍ಎಸ್ ಜಲಾಶಯ ಕಟ್ಟುವ ಸಂದರ್ಭದಲ್ಲಿ ಸಿಕ್ಕ ಶಾಸನವನ್ನು ಅದೇ ಜಾಗದಲ್ಲಿ ಇರಿಸಿದ್ದರು. ನಿಮ್ಮಂತಹವರು ಏನಾದರೂ ಆಗ ಇದ್ದಿದ್ದರೆ ಆ ಶಾಸನವನ್ನು ಒಡೆದುಹಾಕುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಟಿಪ್ಪು ಸುಲ್ತಾನ್ ತನ್ನ ರಾಜ್ಯದ ಒಟ್ಟು ಭೂಮಿಯ ಶೇ.30 ರಷ್ಟು ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದ್ದರು, ಅವರು ತಮ್ಮ ರಾಜ್ಯದಲ್ಲಿ 40 ಸಾವಿರ ಕೆರೆ, ಕಟ್ಟೆಗಳನ್ನು ಕಟ್ಟಿಸಿದ್ದರು, ನೀನು 10 ವರ್ಷ ಎಂಪಿ ಆಗಿದ್ದೆ ಎಷ್ಟು ಕೆರೆಗಳನ್ನು ಕಟ್ಟಿಸಿದ್ದಿಯಾ ಅಥವಾ ಎಷ್ಟು ಕೆರೆಗಳ ಹೂಳು ಎತ್ತಿಸಿದ್ದೀಯಾ ಹೇಳು?

ಟಿಪ್ಪು ಸುಲ್ತಾನರ ಬಗ್ಗೆ ವ್ಯಂಗ್ಯವಾಗಿ ಮಾತನಾಡುವ ನೀನು ಮೈಸೂರು-ಕೊಡಗು ಜಿಲ್ಲೆಯಲ್ಲಿ 40-50 ವರ್ಷಗಳಿಂದ ಉಳುಮೆ ಮಾಡುತ್ತಿರುವ ಭೂ ರಹಿತರು ಅರ್ಜಿ ನಮೂನೆ 50, 53, 57 ರಲ್ಲಿ ತಮಗೆ ಭೂ ಒಡೆತನ ನೀಡುವಂತೆ ಸರ್ಕಾರಕ್ಕೆ 10 ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿ ತಾಲ್ಲೂಕು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಎಷ್ಟು ಜನರಿಗೆ ನೀನು ಭೂಮಿ ಕೊಡಿಸಿದ್ದೀಯಾ ಹೇಳು? ಟಿಪ್ಪು ಸುಲ್ತಾನರು ತಮ್ಮ ಆಳ್ವಿಕೆಯಲ್ಲೇ ಭೂ ರಹಿತ ದಲಿತರಿಗೆ, ಇತರರಿಗೆ ಭೂಮಿ ಒಡೆತನ ನೀಡಿದ್ದರು ಎನ್ನುವುದು ನಿನಗೆ ಗೊತ್ತಿಲ್ಲದಿದ್ದರೆ, ಇತಿಹಾಸ ಓದು ಎಂದು ಅಬ್ದುಲ್ ಮಜೀದ್ ಟಾಂಗ್ ನೀಡಿದರು.

1340ರಲ್ಲಿ ಹೊಯ್ಸಳರ ಕಾಲದಲ್ಲಿ ಮುಡುಕುತೋರೆ ಬಳಿ ಅಣೆಕಟ್ಟೆ ಕಟ್ಟಲಾಗಿತ್ತು, ಅದಕ್ಕೂ ಮುನ್ನ ಗಂಗರು ಪಾಂಡವಪುರದ ಬಳಿ ಅಣೆಕಟ್ಟೆ ಕಟ್ಟಿದ್ದಾರೆ. ಅದರ ಡಿಪಿಆರ್ ಕೇಳಲು ನಿನಗೆ ಆಗುತ್ತದೆಯಾ? ಪದೇ ಪದೇ ಟಿಪ್ಪು ಸುಲ್ತಾನರ ಅವಹೇಳನ ಸಲ್ಲದು, ಟಿಪ್ಪು ಒಬ್ಬ ಮುಸ್ಲಿಂ ದೊರೆ ಎಂದು ಬಿಜೆಪಿಯವರು ಅವರ ಅಭಿವೃದ್ಧಿ ಕಾರ್ಯಗಳನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಆದರೇ, ಇತಿಹಾಸವನ್ನು ಬದಲಾಯಿಸಲು ಅಸಾಧ್ಯ ಎಂದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಸ್ವಾಮಿ, ಮೈಸೂರು ಜಿಲ್ಲಾ ಎಸ್‍ಡಿಪಿಐ ಅಧ್ಯಕ್ಷ ರಫತ್ ಖಾನ್, ಫಿರ್ದೋಸ್, ಸಫಿಯುಲ್ಲಾ ಇದ್ದರು.

Read More
06 August

ಪತ್ರಿಕಾ ಪ್ರಕಟಣೆ
ದಿನಾಂಕ: 06,ಆಗಸ್ಟ್ 2025

*ಸಾರಿಗೆ ನೌಕರರ ಬೇಡಿಕೆಗಳನ್ನು ಸರಕಾರ ತಕ್ಷಣ ಈಡೇರಿಸಬೇಕು – ಎಸ್‌ಡಿಪಿಐ*

ಸಾರಿಗೆ ಇಲಾಖೆಯ ನೌಕರರ ನ್ಯಾಯಯುತ ಬೇಡಿಕೆಗಳನ್ನು ಸರಕಾರ ತಕ್ಷಣ ಈಡೇರಿಸುವಂತೆ *ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್. ಭಾಸ್ಕರ್ ಪ್ರಸಾದ್* ಪತ್ರಿಕಾ ಪ್ರಕಟಣೆಯಲ್ಲಿ  ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು
ರಾಜ್ಯದಾದ್ಯಂತ ಸಾರಿಗೆ ನೌಕರರ ಆಂದೋಲನದಿಂದಾಗಿ ಸಾವಿರಾರು ಪ್ರಯಾಣಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಸಾಮಾನ್ಯ ಜನರ ದಿನನಿತ್ಯದ ಸಂಚಾರ ಅಸ್ತವ್ಯಸ್ತವಾಗಿದ್ದು, ವಿದ್ಯಾರ್ಥಿಗಳು, ಉದ್ಯೋಗಿಗಳು, ಆಸ್ಪತ್ರೆಗಳಿಗೆ ತೆರಳುವವರು ಸೇರಿದಂತೆ ಎಲ್ಲಾ ವರ್ಗದ ಜನರು ಮುಷ್ಕರದ ಪರಿಣಾಮ ಎದುರಿಸುತ್ತಿದ್ದಾರೆ.

ಸಾರಿಗೆ ನೌಕರರ ಬೇಡಿಕೆಗಳು ದೀರ್ಘಕಾಲದಿಂದ ಬಾಕಿ ಉಳಿದಿವೆ. ಅವರ ಹಕ್ಕು, ಭದ್ರತೆ ಹಾಗೂ ವೇತನ ಸಂಬಂಧಿತ ಸಮಸ್ಯೆಗಳ ಬಗ್ಗೆ ಸರಕಾರ ನಿರ್ಲಕ್ಷ್ಯ ತೋರುತ್ತಿರುವುದು ವಿಷಾದನೀಯ. ಜನತೆಗೆ ತೊಂದರೆ ಉಂಟಾಗದಂತೆ ಸರಕಾರ ತಕ್ಷಣ ಕ್ರಮ ಕೈಗೊಂಡು ನೌಕರರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.

ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಸಾರ್ವಜನಿಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದುದರಿಂದ ಸರಕಾರವು ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಸೂಕ್ತ ಸಂವಾದ ನಡೆಸಿ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಬೇಕು ಮತ್ತು ಅವರ ಬೇಡಿಕೆಗಳನ್ನು ಅರ್ಥಮಾಡಿಕೊಂಡು ಸಮನ್ವಯ ಸಾಧಿಸುವುದು ಆಡಳಿತ ಪಕ್ಷದ ಕರ್ತವ್ಯವಾಗಿದೆ ಎಂದು *ಬಿ. ಆರ್. ಭಾಸ್ಕರ್ ಪ್ರಸಾದ್* ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

Read More
04 August

ಪತ್ರಿಕಾ ಪ್ರಕಟಣೆ

*ಸ್ಥಳೀಯ ಸಂಸ್ಥೆಗಳ ಆಡಳಿತವು ಪ್ರಜಾಪ್ರಭುತ್ವದ ಅಡಿಪಾಯ: ಆಯ್ಕೆಯಾದ ಪ್ರತಿನಿಧಿಗಳು ಕಾರ್ಯಕ್ಷಮತೆಯ ಮೂಲಕ ಪಕ್ಷವನ್ನು ‘Emerging to Power’ ದಿಕ್ಕಿಗೆ ಮುನ್ನಡೆಸಬೇಕು” – ಅಫ್ಸರ್ ಕೊಡ್ಲಿಪೇಟೆ*

*ಕಲ್ಯಾಣ ಕರ್ನಾಟಕ ಭಾಗದ ಎಸ್‌ಡಿಪಿಐ ಜನಪ್ರತಿನಿಧಿಗಳ ಸಭೆ*

*ಗುಲ್ಬರ್ಗ : 4 ಆಗಷ್ಟ್ 2025 –*

ಸ್ಥಳೀಯ ಸಂಸ್ಥೆಗಳ ಆಡಳಿತವು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ ಎಂಬ ಘೋಷಣೆಯೊಂದಿಗೆ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ವ್ಯಾಪ್ತಿಯ ಎಸ್‌ಡಿಪಿಐ ಪಕ್ಷದ ಚುನಾಯಿತ ಜನಪ್ರತಿನಿಧಿಗಳ ಮೇಲುಸ್ತುವಾರಿಗಳ (ERM) ವಿಶೇಷ ಸಭೆ, ರಾಜ್ಯ ಪ್ರದಾನ ಕಾರ್ಯದರ್ಶಿ ಮತ್ತು ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ERM ಉಸ್ತುವಾರಿ ಅಬ್ರಾರ್ ಅಹ್ಮದ್ ರವರ ನೇತೃತ್ವದಲ್ಲಿ ಗುಲ್ಬರ್ಗ ನಗರದಲ್ಲಿ ಜರುಗಿತು.

ಸಭೆಯಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಅಫ್ಸರ್ ಕೊಡ್ಲಿಪೇಟೆ ಅವರು, “ಪಕ್ಷದ ರಾಜಕೀಯ ಶಕ್ತಿ ಹಾಗೂ ಸಾರ್ವಜನಿಕ ಪ್ರಭಾವವನ್ನು ವಿಸ್ತರಿಸಲು ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಪ್ರಮುಖವಾಗಿವೆ. ಈ ಹಿನ್ನಲೆಯಲ್ಲಿ, ಪಕ್ಷದ ಪರವಾಗಿ ಆಯ್ಕೆಯಾದ ಪ್ರತಿನಿಧಿಗಳು ರಾಜಕೀಯ ಬದ್ಧತೆ, ನೈತಿಕತೆ ಮತ್ತು ಕಾರ್ಯಕ್ಷಮತೆಯ ಮೂಲಕ ಪಕ್ಷವನ್ನು ‘Emerging to Power’ ದಿಕ್ಕಿಗೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿದೆ,” ಎಂದು ಸೂಚಿಸಿದರು.

ಅಬ್ರಾರ್ ಅಹ್ಮದ್ ಮಾತನಾಡುತ್ತಾ, “ಪಕ್ಷದ ಪರವಾಗಿ ಆಯ್ಕೆಯಾದ ಪ್ರತಿನಿಧಿಗಳು ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ನಿರಂತರ ತರಬೇತಿಗಳಲ್ಲಿ ಭಾಗವಹಿಸಿ ಉತ್ತಮ ಆಡಳಿತದ ಮಾದರಿಯನ್ನು ನೀಡಬೇಕು,” ಎಂದು ಸಲಹೆ ನೀಡಿದರು.

ಸಭೆಯಲ್ಲಿ ಪಾಲ್ಗೊಂಡ ಶಹಾಪುರ ನಗರಸಭಾ ಸದಸ್ಯೆ ಫಿರ್ದೋಸ್ ಖಾತೂನ್, ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು ಬಳ್ಳಾರಿ ಮತ್ತು ಬೀಜಾಪುರ ಜಿಲ್ಲೆಗಳ ವಿವಿಧ ಪಂಚಾಯಿತಿಗಳ ಸದಸ್ಯರು ಮತ್ತು ಚುನಾಯಿತ ಪ್ರತಿನಿಧಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತ, ಸ್ಥಳೀಯ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು, ಸರಕಾರದ ಯೋಜನೆಗಳ ಅನುಷ್ಠಾನ ಹಾಗೂ ಜನರ ವಿಶ್ವಾಸ ಗಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

ಈ ಸಭೆ, ಪಕ್ಷದ ಜನಪರ ರಾಜಕೀಯ ಭದ್ರತೆಗಾಗಿ ದಿಕ್ಕು ತೋರಿದ ಹೆಜ್ಜೆಯಾಗಿದ್ದು, ಮುಂದಿನ ರಾಜಕೀಯ ಬೆಳವಣಿಗೆಗೆ ಬುನಾದಿ ಕಲ್ಪಿಸಿದೆ.

ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ರಹೀಮ್ ಪಟೇಲ್, ಗುಲ್ಬರ್ಗ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಮೋಹಿಸಿನ್, ಯಾದಗಿರಿ ಜಿಲ್ಲಾಧ್ಯಕ್ಷರಾದ ಇಸಾಖ್  ಹುಸೇನ್, ಗುಲ್ಬರ್ಗ ಜಿಲ್ಲಾ ಕಾರ್ಯದರ್ಶಿ ಹಾಗೂ ERM ಉಸ್ತುವಾರಿ ಶಕೀಲ್ ಪಟೇಲ್ ಹಾಜರಿದ್ದರು.

Read More
28 July

ಗಾಜಾದಲ್ಲಿ ನರಮೇಧ ಮತ್ತು ಹಸಿವಿನಿಂದ ಆಗುತ್ತಿರುವ ಸಾವುಗಳ ವಿರುದ್ಧ ಕ್ರಮಕ್ಕೆ ಎಸ್‌ಡಿಪಿಐ ಒತ್ತಾಯ

ಗಾಜಾದಲ್ಲಿ ತೀವ್ರ ಹಸಿವಿನಿಂದ 85 ಮಕ್ಕಳೂ ಸೇರಿ 127 ಅಮಾಯಕ ಪ್ಯಾಲೆಸ್ಟೈನಿಯನ್ನರ ಸಾವಿನ ಬಗ್ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಮೊಹಮ್ಮದ್ ಶಫಿ ಅವರು ತೀವ್ರ ದುಃಖ ಮತ್ತು ಖಂಡನೆ ವ್ಯಕ್ತಪಡಿಸಿದ್ದಾರೆ. ಇದು ಯುದ್ಧದ

Read More
16 July

ಭೂ ಸ್ವಾಧೀನ ವಿರೋಧಿ ಹೋರಾಟ ಅಂತಿಮವಾಗಿ ಗೆದ್ದಿದೆ

ದೇವನಹಳ್ಳಿ ರೈತರ ವಿಜಯವನ್ನು ಎಸ್.ಡಿ.ಪಿ.ಐ ಸ್ವಾಗತಿಸುತ್ತದೆ ಬೆಂಗಳೂರು 15-07-2025 : ರೈತರ ಹೋರಾಟಕ್ಕೆ ಸ್ಪಂದಿಸಿ, ಬೂಸ್ವಾಧೀನ ಕೈ ಬಿಟ್ಟ ಸಿದ್ದರಾಮಯ್ಯ ಸರ್ಕಾರದ ನಿರ್ಧಾರ ಸ್ವಾಗತರ್ಹ SDPI. ದೇವನಹಳ್ಳಿ ತಾಲ್ಲೂಕಿನ ೧೩ ಹಳ್ಳಿಯ ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ೧೧೯೮ ದಿನಗಳಿಂದ ಹೋರಾಟ

Read More
09 July

ಪತ್ರಿಕಾ ಪ್ರಕಟಣೆ

ಚುನಾವಣಾ ಪೂರ್ವ ತಯಾರಿಗಳ ಬಗ್ಗೆ ಕೊಪ್ಪಳ ಜಿಲ್ಲಾ ಮತ್ತು ವಿಧಾನಸಭಾ ನಾಯಕರ ವಿಶೇಷ ಸಭೆ*

ಗಂಗಾವತಿ:ಜುಲೈ 8:
ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಸಮಿತಿಯ ವಿಶೇಷ ಸಭೆಯು ಜಿಲ್ಲಾಧ್ಯಕ್ಷರಾದ ಸಲೀಂ ಮನಿಯಾರ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಅಬ್ದುಲ್ ಹನ್ನಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣೆ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಖಜಾಂಚಿ ಅಮ್ಜದ್ ಖಾನ್ ರವರ ಸಮ್ಮುಖದಲ್ಲಿ ನಡೆಯಿತು.

ಜಿಲ್ಲಾ, ವಿಧಾನಸಭಾ ಮತ್ತು ವಿವಿಧ ಹಂತದ ಪದಾಧಿಕಾರಿಗಳು, ಪ್ರತಿನಿಧಿಗಳು ಹಾಗೂ ನಾಯಕರು ಮುಂಬರಲಿರುವ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳ ಪೂರ್ವ ತಯಾರಿಗಳ ಬಗ್ಗೆ, ವಾರ್ಡ್ ಹಾಗೂ ಬೂತ್ ಮಟ್ಟದ ಸಂಘಟನಾ ಸ್ಥಿತಿಗತಿಯ ಕುರಿತು ವಿಶ್ಲೇಷಣೆ, ಕಾರ್ಯತಂತ್ರಗಳ ವಿವಿಧ ಸಮಿತಿಗಳ ವರದಿಗಳು ಹಾಗೂ ಜವಾಬ್ದಾರಿಗಳ ಹಂಚಿಕೆ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಹನ್ನಾನ್, “ಪ್ರತಿಯೊಬ್ಬನೂ ಚುನಾವಣಾ ಕಾರ್ಯಗಳತ್ತ ಹೆಚ್ಚು ಕಾಳಜಿಯಿಂದ ನಿರತರಾಗಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವುದು ನಮ್ಮ ಮೇಲೆ ಇರುವ ಪ್ರಮುಖ ಜವಾಬ್ದಾರಿ. ಸ್ಥಳೀಯ ಸಂಸ್ಥೆ ಚುನಾವಣೆಯ ವಿಳಂಬವು ಮತ್ತು ಸರ್ಕಾರದ ನಿರ್ಲಕ್ಷ್ಯವೂ ಪ್ರಜಾಪ್ರಭುತ್ವದ ಅಪಮಾನ” ಎಂದು ಅಭಿಪ್ರಾಯಪಟ್ಟರು .
ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣೆ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ, “ಪಕ್ಷವನ್ನು ಬೂತ್ ಮಟ್ಟದ ಬಲಗೊಳಿಸುವುದು ಅವಶ್ಯಕ. ಪ್ರತಿಯೊಬ್ಬ ಕಾರ್ಯಕರ್ತನು ‘ಬೂತ್ ಗೆಲುವು ನನ್ನ ನಿಲುವು’ ಎಂಬ ಘೋಷವಾಕ್ಯದಡಿಯಲ್ಲಿ ತಕ್ಕ ರೀತಿಯಲ್ಲಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.

ಸಭೆಯ ಅಂತಿಮ ಭಾಗದಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ನಾಯಕರು ತಮ್ಮ ಕ್ಷೇತ್ರದ ಸಂಘಟನೆ ಬಲವರ್ಧನೆಗಾಗಿ ತಂತ್ರಮೂಲಕ ಪ್ರಸ್ತಾವನೆಗಳನ್ನು ಮಂಡಿಸಿದರು. ಕ್ಷೇತ್ರವಾರು ಕಾರ್ಯತಂತ್ರ, ಯೋಜಿತ ಚಟುವಟಿಕೆಗಳ ಬಗ್ಗೆ ಆಳವಾದ ಚರ್ಚೆ ನಡೆಸಿ, ಮುಂದಿನ ಹಂತದ ಕಾರ್ಯತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಯೂಸುಫ್ ಮೋದಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸೈಯದ್ ಶಾಕೀಬ್, ಜಿಲ್ಲಾ ಕಾರ್ಯದರ್ಶಿ ಚಾಂದ್, ಜಿಲ್ಲಾ ಕೋಶಾಧಿಕಾರಿ ಮಹೇಬೂಬ್ ರಜಾ, ಗಂಗಾವತಿ ವಿಧಾನ ಸಭಾ ಅಧ್ಯಕ್ಷರು ಇರ್ಫಾನ್, ಕೊಪ್ಪಳ ವಿಧಾನಸಭಾ ಅಧ್ಯಕ್ಷರು ಸಲೀಮ್ ಖಾದ್ರಿ, ಕನಕಗಿರಿ ವಿಧಾನಸಭಾ ಅಧ್ಯಕ್ಷರು ಅಜ್ಮಿರ್ ಸಿಂಗನಾಳ್,ಕುಷ್ಟಗಿ ವಿಧಾನಸಭಾ ಉಪಾಧ್ಯಕ್ಷರು ಸಲೀಮ್ ಕೆ ಬಿ, ಸಿಂದನೂರ್ ವಿಧಾನಸಭಾ ಅಧ್ಯಕ್ಷರು ಆಸೀಫ್ ಕೆ, ಕಂಪ್ಲಿ ವಿಧಾನಸಭಾ ಅಧ್ಯಕ್ಷರು ಇಮ್ರಾನ್
ಉಪಸ್ಥಿತರಿದ್ದರು.

Read More
27 June

SDPI ರಾಜ್ಯ ನಾಯಕರು ಗದಗ ಜಿಲ್ಲೆಗೆ ಭೇಟಿ: ರಾಜಕೀಯ ಬದ್ಧತೆ, ಪರಸ್ಪರ ಗೌರವ ಮತ್ತು ಭವಿಷ್ಯದ ಸಹಯೋಗದ ಚರ್ಚೆ

ಗದಗ, 26 ಜೂನ್ 2025: ಎಸ್‌ಡಿಪಿಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪರ್ ಕೊಡ್ಲಿಪೇಟೆ ಮತ್ತು ರಾಜ್ಯ ಕಾರ್ಯದರ್ಶಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಅಪ್ಪರ್ ಕೆ.ಆರ್.ನಗರ ಅವರು ಇಂದು ಪಕ್ಷದ ಸಂಘಟನಾ ಬಲವರ್ದನೆಯ ಭಾಗವಾಗಿ ಗದಗ ಜಿಲ್ಲೆಗೆ ವಿಶೇಷ ಭೇಟಿ

Read More
17 June

ಪತ್ರಿಕಾ ಪ್ರಕಟಣೆ

ದುಂಡು ಮೇಜಿನ ಸಭೆ: ಜನಗಣತಿ ಮತ್ತು ಸಮೀಕ್ಷೆ ಕುರಿತ ಗೊಂದಲ ನಿವಾರಣೆಗೆ ಸಜ್ಜಾದ SDPI ಬೆಂಗಳೂರು, ದಿನಾಂಕ: ಜೂನ್ 16: ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಈ ನಿರ್ಣಾಯಕ ಹಂತದಲ್ಲಿ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯಲಿರುವ ಜನಗಣತಿ ಹಾಗೂ ಅದಕ್ಕೆ

Read More
22 December

ಶಾ ಅವರ ಹೇಳಿಕೆ ವಿರೋಧಿಸಿ ಡಿಸೆಂಬರ್ 24ರ ಗುಲಬರ್ಗಾ ಬಂದ್ ಗೆ ಎಸ್‌ಡಿಪಿಐ ಸಂಪೂರ್ಣ ಬೆಂಬಲ

ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಸೈಯದ್ ದಸ್ತಗೀರ್ ರವರ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್ ಹಾಗೂ ರಾಜ್ಯ ಪ್ರಧಾನ

Read More
28 January

ತೀರ್ಥಹಳ್ಳಿ ಸರ್ಕಾರಿ ಕಾಲೇಜಿನ ಕಾರ್ಯಕ್ರಮದಲ್ಲಿ ಭಗವದ್ಗೀತೆ ಹಂಚಿಕೆ ಮತ್ತು ಅತಿಥಿಯಾಗಿದ್ದ ನ್ಯಾಯಾಧೀಶರಿಂದಲೇ ಜೈ ಶ್ರೀರಾಮ್ ಘೋಷಣೆ ಕೂಗಿ ಭಗವದ್ಗೀತೆ ಸಂವಿಧಾನಕ್ಕೆ ಸಮ ಎಂದಿದ್ದು ಸಂವಿಧಾನ ವಿರೋಧಿ ನಡವಳಿಕೆ: ಬಿ.ಆರ್. ಭಾಸ್ಕರ್ ಪ್ರಸಾದ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ

ಬೆಂಗಳೂರು, 27 ಜನವರಿ 2024: ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಣೆಯ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ತಹಶೀಲ್ದಾರ್ ಹಾಗೂ ತಾಲ್ಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಭಗವದ್ಗೀತೆ ಹಂಚಿಕೆ ನಡೆದಿದೆ. ಅಲ್ಲದೆ

Read More
25 January

ಬಾಬರಿ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಮುಸ್ಲಿಮರ ವಿರುದ್ಧ ಏಕಿಷ್ಟು ದ್ವೇಷ? ಯಾರನ್ನು ಮೆಚ್ಚಿಸಲು ಇಷ್ಟೊಂದು ಪ್ರಕರಣ, ಬಂಧನಗಳು?: ಬಿ.ಆರ್. ಭಾಸ್ಕರ್ ಪ್ರಸಾದ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ

ಬೆಂಗಳೂರು, 25 ಜನವರಿ 2024: ಬಾಬರಿಯನ್ನು ಕಳೆದುಕೊಂಡು ನೋವಿನಲ್ಲಿರುವ ಮುಸ್ಲಿಮ್ ಸಮುದಾಯದ ಮೇಲೆ ಅವರ ಮತಗಳನ್ನು ಪಡೆದು ಅಧಿಕಾರ ಭದ್ರ ಮಾಡಿಕೊಂಡ ಕಾಂಗ್ರೆಸ್ ಸರ್ಕಾರಕ್ಕೆ ಏಕಿಷ್ಟು ದ್ವೇಷ? ಸಂವಿಧಾನ ಒದಗಿಸಿಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ತಮ್ಮ ನೋವನ್ನು ಹಂಚಿಕೊಂಡರೆ ಅವರ ವಿರುದ್ಧ

Read More
22 January

ರಾಮಮಂದಿರವನ್ನು ಬಾಬರಿ ಮಸೀದಿಯ ಭೂಮಿಯಲ್ಲಿ ನಿರ್ಮಿಸಲಾಗಿದೆ

ರಾಮಮಂದಿರವನ್ನು ನಿರ್ಮಿಸಿರುವ ಭೂಮಿ ವಕ್ಫ್ ಗೆ ಸೇರಿದ ಬಾಬರಿ ಮಸೀದಿಯ ಭೂಮಿಯಾಗಿದೆ. ಅಲ್ಲಿ ಮಂದಿರವನ್ನು ನಿರ್ಮಿಸಿದ್ದರೂ ಅದು ವಕ್ಫ್ ಸ್ವತ್ತಾಗಿದ್ದು, ಬಾಬರಿ ಮಸೀದಿಯ ಭೂಮಿಯಾಗಿಯೇ ಉಳಿಯಲಿದೆ ಎಂದು 2024 ರ ಜನವರಿ 19 ರಂದು ಬೆಂಗಳೂರಿನಲ್ಲಿ ನಡೆದ ಎಸ್ಟಿಪಿಐ ಪಕ್ಷದ ರಾಷ್ಟ್ರೀಯ

Read More
10 January

ಬಿಲ್ಕಿಸ್ ಬಾನೋ ಪ್ರಕರಣದ ಕೊಲೆ ಪಾತಕಿ, ಅತ್ಯಾಚಾರಿಗಳು ಮತ್ತೆ ಜೈಲಿಗೆ ಹೋಗಬೇಕು ಎಂಬ ಸುಪ್ರೀಂಕೋರ್ಟ್ ತೀರ್ಪು ಮೋದಿ ಸರ್ಕಾರದ ಕೋಮು ನೀತಿಗೆ ಕಪಾಳಮೋಕ್ಷ: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ

ಬೆಂಗಳೂರು, 10 ಜನವರಿ 2024: ಬಿಲ್ಕಿಸ್ ಬಾನೋ ಪ್ರಕರಣದ ಪಾತಕಿಗಳನ್ನು ಸನ್ನಡತೆ ಎಂದು ಸಬೂಬು ಹೇಳಿ ಬಿಡುಗಡೆ ಮಾಡಿದ್ದು ನೀಚ ಕೃತ್ಯ. ಗುಜರಾತ್ ಸರ್ಕಾರದ ಈ ನೀಚ ಕೃತ್ಯವನ್ನು ಮತಿಹೀನ ನಿರ್ಣಯ ಎಂದು ಜರಿದು ಎಲ್ಲ 11 ಅಪರಾಧಿಗಳನ್ನು ಮತ್ತೆ ಜೈಲಿಗೆ

Read More
02 December

ಪತ್ರಿಕಾ ಪ್ರಕಟಣೆ

ಬೆಂಗಳೂರು ಶಾಲೆಗಳಿಗೆ ಹುಸಿ ಬಾಂಬ್ ಕರೆಗಳ ಮೂಲ ಮತ್ತು ಉದ್ದೇಶದ ಸಮಗ್ರ ತನಿಖೆಯಾಗಲಿ. ಇಂತಹ ಕರೆಗಳ ಹಿಂದೆ ಯೋಜಿತ ಷಡ್ಯಂತ್ರವಿರುವಂತಿದೆ: ದೇವನೂರು ಪುಟ್ಟನಂಜಯ್ಯ, ರಾಜ್ಯ ಉಪಾಧ್ಯಕ್ಷರು, ಎಸ್‌ಡಿಪಿಐ ಬೆಂಗಳೂರು, 02 ಡಿಸೆಂಬರ್ 2023: ಇಂದು ಬೆಂಗಳೂರಿನ ಸುಮಾರು 40ಕ್ಕೂ ಹೆಚ್ಚು ಶಾಲೆಗಳಿಗೆ

Read More
25 November

ಪತ್ರಿಕಾ ಪ್ರಕಟಣೆ

ಖ್ಯಾತ ಬಹು ಭಾಷ ನಟ ಪ್ರಕಾಶ್ ರೈಗೆ ಇಡಿ ಸಮ್ಮನ್ಸ್: ಸರಕಾರವನ್ನು ಟೀಕೆ ಮಾಡುವವರನ್ನು ಹತ್ತಿಕ್ಕುವ ಅಜೆಂಡಾದ ಮುಂದುವರಿದ ಭಾಗ: ಅಬ್ದುಲ್ ಲತೀಫ್ ಪುತ್ತೂರು, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್.ಡಿ.ಪಿ.ಐ ಬೆಂಗಳೂರು, 24 ನವೆಂಬರ್ 2023: ಬಿಜೆಪಿ ಮತ್ತು ಮೋದಿ ಸರ್ಕಾರವನ್ನು

Read More
15 November

ಪತ್ರಿಕಾ ಪ್ರಕಟಣೆ

KEA ಪರೀಕ್ಷೆಗಳಲ್ಲಿ ಮಂಗಳಸೂತ್ರ, ಕಾಲುಂಗರಕ್ಕೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ ಹಿಜಾಬ್ ಮೇಲೆ ದ್ವೇಷ ಏಕೆ?: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಬೆಂಗಳೂರು, 15 ನವೆಂಬರ್ 2023: ಕಳೆದ ಬಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಮಂಗಳಸೂತ್ರ,

Read More
09 November

ಪತ್ರಿಕಾ ಪ್ರಕಟಣೆ. ಗ್ರೂಪ್ ಸಿ ಪರೀಕ್ಷೆಯ ವೇಳೆ ಮಹಿಳೆಯರ ಮಂಗಳಸೂತ್ರ, ಕಾಲುಂಗುರ ತೆಗೆಸಿರುವ ಘಟನೆ ಅಕ್ಷಮ್ಯ: ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ

ಬೆಂಗಳೂರು, 09 ಅಕ್ಟೋಬರ್ 2023: ಗ್ರೂಪ್ ಸಿ ಹುದ್ದೆಗಳ ಪರೀಕ್ಷೆಯ ವೇಳೆ ಮಹಿಳೆಯರ ಮಂಗಳಸೂತ್ರ, ಕಾಲುಂಗುರ ತೆಗೆಸಿರುವ ಘಟನೆ ಅಕ್ಷಮ್ಯ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ತಮ್ಮ ಪತ್ರಿಕಾ

Read More
19 October

ಇಸ್ರೇಲ್ ಗುರಿ ಪ್ಯಾಲೇಸ್ತೀನಿಯರ ನರಮೇಧವಾಗಿದೆ. ವೈಟ್ ಪಾಸ್ಫರ್ ರಾಸಾಯನಿಕ ಅಸ್ತ್ರ ಬಳಕೆ ಮತ್ತು ಆಸ್ಪತ್ರೆಗಳ ಮೇಲಿನ ದಾಳಿಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಭಾರತ ಸೇರಿದಂತೆ ಇಡೀ ವಿಶ್ವ ಈ ಜಿಯೋನಿಸ್ಟರ ಕ್ರೌರ್ಯದ ವಿರುದ್ಧ ನಿಲ್ಲಬೇಕಿದೆ.

ಬೆಂಗಳೂರು, 14 ಅಕ್ಟೋಬರ್ 2023: ಪ್ಯಾಲೇಸ್ತೀನನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಇಸ್ರೇಲ್ ಕಳೆದ 70 ವರ್ಷಗಳಿಂದ ಪ್ಯಾಲೇಸ್ತೀನಿಯರ ಶೋಷಣೆಯಲ್ಲಿ ತೊಡಗಿದೆ. ಈಗ ಅದು ಪ್ಯಾಲೇಸ್ತೀನಿಯರನ್ನು ಶಾಶ್ವತವಾಗಿ ಇಲ್ಲವಾಗಿಸುವ ಉದ್ದೇಶದಿಂದ ಬರ್ಬರ ನರಮೇಧದಲ್ಲಿ ತೊಡಗಿದೆ. ಇದಕ್ಕೆ ಜಿಯೋನಿಸ್ಟ್ ಇಸ್ರೇಲ್ ಈಗ ನಡೆಯುತ್ತಿರುವ ಸಂಘರ್ಷದಲ್ಲಿ ವೈಟ್

Read More
14 October

ಪತ್ರಿಕಾ ಪ್ರಕಟಣೆ ಅತ್ತಿಬೆಲೆ ಪಟಾಕಿ ದುರಂತ ಕೊನೆಯ ಎಚ್ಚರಿಕೆಯಾಗಲಿ. ಸರ್ಕಾರ ಪಟಾಕಿ ಕಾರ್ಮಿಕರ ಸುರಕ್ಷತೆಗೆ ಪ್ರಬಲ ನಿಯಮ ರೂಪಿಸಲಿ: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ

ಬೆಂಗಳೂರು, 09 ಅಕ್ಟೋಬರ್ 2023: ಅಗ್ನಿ ಅವಘಡದಲ್ಲಿ 14 ಜನ ಮೃತರಾಗಿದ್ದು, ಏಳು ಜನರು ಗಂಭೀರ ಸ್ಥಿತಿ ತಲುಪಿರುವ ಬೆಂಗಳೂರಿನ ಅತ್ತಿಬೆಲೆ ಪಟಾಕಿ ದುರಂತ ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ ಗಾಯಗೊಂಡಿರುವವರು ಆದಷ್ಟು ಬೇಗ ಗುಣಮುಖರಾಗಲಿ ಎಂದು

Read More
03 October

ಗ್ರಾಮ, ಗ್ರಾಮದಲ್ಲೂ ಮದ್ಯದಂಗಡಿ ತೆರೆಯಲು ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ ಗಾಂಧಿ ಜಯಂತಿ ಆಚರಿಸುವ ನೈತಿಕತೆ ಇಲ್ಲ: ಭಾಸ್ಕರ್ ಪ್ರಸಾದ್ ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ

ಬೆಂಗಳೂರು, 01 ಅಕ್ಟೋಬರ್ 2023: ಸಂಪೂರ್ಣ ಪಾನ ನಿಷೇಧ ಮಹಾತ್ಮ ಗಾಂಧಿಯವರ ಅತಿ ದೊಡ್ಡ ಕನಸಾಗಿತ್ತು. ಅವರ ತತ್ವ ಪಾಲಿಸುತ್ತೇವೆ ಎಂದು ಸುಳ್ಳು ಹೇಳುತ್ತಾ ಬಂದಿರುವ ಕಾಂಗ್ರೆಸ್ ಪಕ್ಷದ ಕರ್ನಾಟಕ ಸರ್ಕಾರ ಈಗಾಗಲೇ ಇರುವ ಮದ್ಯದಂಗಡಿಗಳು ಸಾಲದು ಎಂದು ಗ್ರಾಮ ಪoಚಾಯತ್

Read More
23 September

ಪತ್ರಿಕಾ ಪ್ರಕಟಣೆ

ದ್ವೇಷ ಭಾಷಣ ಬೀದಿಯಿಂದ ಸಂಸತ್ತು ತಲುಪಿದೆ. ಸಂಸದ ಡ್ಯಾನಿಶ್ ಅಲಿ ಅವರನ್ನು ಸದನದಲ್ಲಿ ಉಗ್ರವಾದಿ ಎಂದು ಕರೆದ ಬಿಜೆಪಿ ಸಂಸದ ಬಿಧೂರಿಯನ್ನು ಸಂಸದ ಸ್ಥಾನದಿಂದ ವಜಾ ಮಾಡಬೇಕು: ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಬೆಂಗಳೂರು, 22 ಸೆಪ್ಟೆಂಬರ್ 2023: ದ್ವೇಷ ಭಾಷಣಗಳ

Read More
18 August

ಪತ್ರಿಕಾ ಪ್ರಕಟಣೆ

ಪತ್ರಿಕಾ ಪ್ರಕಟಣೆ ದಲಿತರ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿಗಿಂತ ಬಿನ್ನವಲ್ಲ ಎಂದು ಉಪೇಂದ್ರ ಪ್ರಕರಣದಲ್ಲಿ ತೋರಿಸಿಕೊಟ್ಟಿದೆ:ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಬೆಂಗಳೂರು, 14 ಆಗಸ್ಟ್ 2023: ದಲಿತರ ಮೇಲೆ ದೌರ್ಜನ್ಯ ಮತ್ತು ಅವಹೇಳನದ ಪ್ರಕರಣಗಳು ನಡೆದಾಗ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು

Read More
11 August

ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಚುನಾವಣೆಯ ಕುರಿತು ಅಪಪ್ರಚಾರಗಳಿಗೆ ಕಿವಿಗೊಡ ಬೇಡಿ : SDPI

ಉಳ್ಳಾಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಲಪಾಡಿ ಗ್ರಾಮ ಪಂಚಾಯತ್ ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ SDPI ಅಭ್ಯರ್ಥಿ ಇಸ್ಮಾಯಿಲ್. ಟಿ ಅವರು ಗೆಲುವು ಸಾಧಿಸಿದ ಕುರಿತು ನಡೆಯುತ್ತಿರುವ ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದು SDPI ಮಂಗಳೂರು(ಉಳ್ಳಾಲ) ವಿಧಾನ ಸಭಾ ಕ್ಷೇತ್ರಾಧ್ಯಕ್ಷರಾದ ಇರ್ಷಾದ್

Read More
07 August

ಕ್ರಾಂತಿಕಾರಿ ಕವಿ, ಗಾಯಕ ಗದ್ದರ್ ಅವರ ಹಾಡುಗಳು ಶೋಷಿತರ ನೋವು ಮತ್ತು ಪ್ರತಿರೋಧದ ಹೋರಾಟಗಳಿಗೆ ಪ್ರೇರಣ ಶಕ್ತಿಯಾಗಿದ್ದವು:

ಬೆಂಗಳೂರು, 07 ಆಗಸ್ಟ್ 2023: ದಲಿತ ಕುಟುಂಬದಲ್ಲಿ ಜನಿಸಿದ ವಿಠಲ್ ರಾವ್ ಗದ್ದರ್ ಅವರಿಗೆ ಶೋಷಣೆ ಮತ್ತು ಶೋಷಣೆಗೆ ಒಳಗಾದವರ ನೋವುಗಳ ಸ್ವ ಅನುಭವ ಇತ್ತು. ಅವರ ಕ್ರಾಂತಿಕಾರಿ ಹಾಡುಗಳು ಶೋಷಿತರ ನೋವು ಮತ್ತು ಹೋರಾಟಗಳಿಗೆ ಪ್ರೇರಣಶಕ್ತಿಗಳಾಗಿದ್ದವು. ಅವರ ನಿಧನಕ್ಕೆ ತೀವ್ರ

Read More
05 August

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿಯ ಎರಡು ದಿನಗಳ (ದಿನಾಂಕ 01.08.2023- 02.03.2023) ಸಭೆಯಲ್ಲಿ ಕೈಗೊಂಡ ನಿರ್ಣಯಗಳು.

1.ದಲಿತ ಸಮುದಾಯದ ಕಲ್ಯಾಣ ಯೋಜನೆಗಳಿಗಾಗಿ SCP-TSP ರೂಪದಲ್ಲಿ ಮೀಸಲಿಟ್ಟಿರುವ 11,000 ಕೋಟಿ ಹಣವನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ನಿರ್ಣಯಕ್ಕೆ ಬಂದಿದೆ. ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಅದೇ ಸಮುದಾಯದ ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುವುದು ಎಂದು ಸಮಾಜ ಕಲ್ಯಾಣ

Read More