ಗ್ರಾಮ ಪಂಚಾಯತ್ ಅಧ್ಯಕ್ಷರ ಅಧಿಕಾರಕ್ಕೆ ಕತ್ತರಿ: ರಾಜ್ಯ ಸರ್ಕಾರದ ನಡೆಗೆ ಎಸ್ ಡಿಪಿಐ ವಿರೋಧ<br>ಉದ್ಯೋಗ ಖಾತ್ರಿ, ವಿವಿಧ ವಸತಿ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸಿನ ನಿಧಿ,ತೆರಿಗೆ, ಖರ್ಚು-ವೆಚ್ಚಗಳ ಎಲ್ಲ ಚೆಕ್‌ಗಳಿಗೂ ಖಡ್ಡಾಯವಾಗಿದ್ದ PDO ಹಾಗೂ ಪಂಚಾಯ್ತಿ ಅಧ್ಯಕ್ಷರ ಜಂಟಿ ಸಹಿಯ ಅಧಿಕಾರದಿಂದ ಚುನಾಯಿತ ಅಧ್ಯಕ್ಷರನ್ನು ಹೊರಗಿಡುವ ಸರ್ಕಾರದ ನಿರ್ಧಾರ ಚುನಾಯಿತ ಪ್ರತಿನಿಧಿಗಳ ಅಧಿಕಾರಮೊಟಕು ಗೊಳಿಸುವ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ.<br>ಪಂಚಾಯತ್ ರಾಜ್ ಕಾಯ್ದೆಯ 64 ರಿಂದ 70ರ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ #ಬಿಜೆಪಿ ಸರ್ಕಾರವು ಹಣಕಾಸು ನಿರ್ವಹಣೆಯ ಹೊಣೆಗಾರಿಕೆಯಿಂದ ಗ್ರಾಮ ಪಂಚಾಯ್ತಿ ಅಧ್ಯಕ್ಷರನ್ನು ಹೊರಗಿಡಲು ನಿರ್ಧರಿಸಿ ರಾಜ್ಯದಲ್ಲಿ 5,963 ಗ್ರಾಮ ಪಂಚಾಯಿತಿಗಳ 91,437 ಗ್ರಾಮ ಪಂಚಾಯಿತಿ ಸದಸ್ಯರ ಮತ್ತು ಗ್ರಾಮ ಸಭೆಗಳ ಅಧಿಕಾರವನ್ನು ಕಿತ್ತುಕೊಂಡಂತ್ತಾಗಿದೆ.<br>~ಅಫ್ಸರ್ ಕೊಡ್ಲಿಪೇಟೆ,<br>ರಾಜ್ಯ ಪ್ರಧಾನ ಕಾರ್ಯದರ್ಶಿ, SDPI

2 years ago