Categories: featureNewsPolitics

ಪರ್ಯಾಯ ರಾಜಕೀಯ ಚಳುವಳಿಯ ಅಗತ್ಯತೆ ಮತ್ತು ಸವಾಲುಗಳು ವಿಚಾರ ಸಂಕಿರಣ ಎಸ್‌ಡಿಪಿಐ ಕೇವಲ ರಾಜಕೀಯ ಆಯ್ಕೆಯಾಗಿ ಅಲ್ಲ ಅದು ತಾರತಮ್ಯವಿಲ್ಲದ, ಸಮಸಮಾಜ ನಿರ್ಮಾಣದ ದೃಢ ಸಂಕಲ್ಪದ ಚಳುವಳಿಯಾಗಿದೆ: ಅಪ್ಸರ್ ಕೊಡ್ಲಿಪೇಟೆ

ಕುಂದಾಪುರ, ಜುಲೈ 27: ಉಡುಪಿ ಜಿಲ್ಲೆಯ ಕುಂದಾಪುರದ ಶರೋನ್ ಹೋಟೆಲ್ ಸಭಾಂಗಣದಲ್ಲಿ ”ಪ್ರಸಕ್ತ ಕಾಲಘಟ್ಟದಲ್ಲಿ ಪರ್ಯಾಯ ರಾಜಕೀಯ ಚಳುವಳಿಯ ಅಗತ್ಯತೆ ಮತ್ತು ಸವಾಲುಗಳು” ಎಂಬ ಮಹತ್ವದ ವಿಷಯದ ಕುರಿತು ವಿಶೇಷ ವಿಚಾರ ಸಂಕಿರಣವನ್ನು ಆಯೋಜಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಎಸ್ಟಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಜನತೆಯ ನಂಬಿಕೆಗೆ ಪಾತ್ರವಾಗುವ, ನೈತಿಕತೆಯ ಅಡಿಪಾಯದ ಮೇಲೆ ನಿಂತ ಹೊಸ ರಾಜಕೀಯ ಚಳುವಳಿ ನಿರ್ಮಾಣದ ಅಗತ್ಯತೆಯನ್ನು ಒತ್ತಿಹೇಳಿದರು. ಧರ್ಮಾಧಾರಿತ ರಾಜಕಾರಣ, ಬಂಡವಾಳಶಾಹಿ ಹಾಗೂ ಮತಬ್ಯಾಂಕ್ ರಾಜಕೀಯಗಳು ಪ್ರಬಲವಾಗುತ್ತಿರುವ ಇಂದು, ತಳಮಟ್ಟದ ಸಮುದಾಯಗಳಲ್ಲಿ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಧರ್ಮನಿರಪೇಕ್ಷತೆಯನ್ನು ಕೇವಲ ಘೋಷಣೆಗಳಲ್ಲದೆ ನೈಜವಾಗಿ ಅನುಷ್ಠಾನಗೊಳಿಸುವ ಪರ್ಯಾಯ ರಾಜಕೀಯ ಚಳುವಳಿಗೆ ಬಲ ನೀಡುವುದು ಬಹಳ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು . ಈ ಚರ್ಚೆಯ ಪ್ರಭಾವದಿಂದ ಪ್ರೇರಿತವಾಗಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಲವಾರು ಉತ್ಸಾಹಿ ಯುವಕರು ಮತ್ತು ಹಿರಿಯರು ಎಸ್‌ಡಿಪಿಐ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು ರಾಜ್ಯ ಪ್ರದಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಯವರು ಸಮ್ಮುಖದಲ್ಲಿ ಪಕ್ಷದ ಅಧಿಕೃತ ಸದಸ್ಯತ್ವವನ್ನು ಸ್ವೀಕರಿಸಿದರು. ಇಂತಹ ಚಟುವಟಿಕೆಗಳು ಪಕ್ಷದ ಮೌಲ್ಯಾಧಾರಿತ ಹೋರಾಟಕ್ಕೆ ಹೊಸ ಉತ್ಸಾಹ ನೀಡುತ್ತವೆ ಹಾಗೂ ಮುಂದಿನ ತಲೆಮಾರಿಗೆ ನವ ದಿಕ್ಕು ನೀಡುತ್ತವೆ ಅಪ್ಪರ್ ಕೊಡ್ಲಿಪೇಟೆ ಯವರು ಹೇಳಿದರು. ಎಸ್‌ಡಿಪಿಐ ಕೇವಲ
ರಾಜಕೀಯ ಆಯ್ಕೆಯಾಗಿ ಅಲ್ಲ – ಅದು ತಾರತಮ್ಯವಿಲ್ಲದ, ಸಮಸಮಾಜ ನಿರ್ಮಾಣದ
ದೃಢ ಸಂಕಲ್ಪದ ಚಳುವಳಿಯಾಗಿದೆ.ಈ ಕಾರ್ಯಕ್ರಮದ ವೇದಿಕೆಯಲ್ಲಿ ಎಸ್‌ಡಿಪಿಐ ಉಡುಪಿ ಜಿಲ್ಲಾ ಉಪಾಧ್ಯಕ್ಷ ಹನೀಫ್ ಮೂಳೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಶಂಶುದ್ದೀನ್, ಗಂಗೊಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ತಬ್ರೇಜ್, ಕಂಡೂರು ಗ್ರಾಮ ಪಂಚಾಯಿತಿ ಸದಸ್ಯ ಸುಹೇಲ್ ಮತ್ತಿತರ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

admin

Recent Posts

ಜ್ಞಾನೇಶ್‌ ಅವರನ್ನು ವಜಾಗೊಳಿಸಿ!SIR ಅನ್ನು ರದ್ದುಗೊಳಿಸಿ

ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಮತದಾನದ ಹಕ್ಕು, ನಮ್ಮ ಪ್ರಜಾಪ್ರಭುತ್ವದ ಆತ್ಮ ಇಂದು ಅಪಾಯದಲ್ಲಿದೆ ಚುನಾವಣಾ ಆಯೋಗವು ಜಾರಿಗೆ ತಂದಿರುವ…

10 hours ago

SACK GYANESH KUMAR SCRAP SIR

October 8 | 10:30AM Onwards Freedom Park, Bengaluru MASS PROTEST & STATE-LEVEL PEOPLE'S TRIBUNAL ON…

1 day ago

ಗ್ಯಾನೇಶ್ ಅನ್ನು ವಜಾಗೊಳಿಸಿ

SIR ರದ್ದುಗೊಳಿಸಿ ಅಕ್ಟೋಬರ್ 8 | ಬೆಳಗ್ಗೆ 10:30 ರಿಂದ ಫ್ರೀಡಂ ಪಾರ್ಕ್, ಬೆಂಗಳೂರು ಬೃಹತ್‌ ಪ್ರತಿಭಟನೆ ಹಾಗೂ SIR…

1 day ago

ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿಯಂದು ದೇಶದ ಎಲ್ಲ ಜನತೆಗೆ ಹೃತ್ಪೂರ್ವಕ ಶುಭಾಶಯಗಳು. ಗಾಂಧೀಜಿ ಕಂಡ ಭಾರತ ಸರ್ವಾಧಿಕಾರದ ಭಾರತವಾಗಿರಲಿಲ್ಲ.…

5 days ago

SIR ವಿರೋಧಿ ಒಕ್ಕೂಟದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ

“ಕರ್ನಾಟಕ SIR: ದ್ರೋಹ ಮತ್ತು ಕಣ್ಣೀರ ಕಥನ” ಎಂಬ ಶೀರ್ಷಿಕೆಯಡಿ ಸಿದ್ಧಪಡಿಸಲಾದ ಪರಿಶೋಧನಾ ವರದಿಯನ್ನು SIR ವಿರೋಧಿ ಒಕ್ಕೂಟದ ನಿಯೋಗವು…

6 days ago