18
May

ನವದೆಹಲಿ, ೧೭ ಮೇ ೨೦೨೦: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ 209 ಕಿ.ಮೀ ದೂರದಲ್ಲಿರುವ ಔರೈಯಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ೨೪ ವಲಸೆ ಕಾರ್ಮಿಕರು ಸಾವು, ಸರ್ಕಾರದ ನಿರಾಸಕ್ತಿ ಮತ್ತು ನಿರ್ಲಕ್ಷ್ಯದಿಂದಾಗಿ ಉಂಟಾದ ನರಹತ್ಯೆಯಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಫಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ರೀತಿಯ ಪ್ರಕರಣಗಳಲ್ಲಿ, ಆರೋಪಿಗಳು ಉನ್ನತ ಸರ್ಕಾರಿ ಹುದ್ದೆಗಳಲ್ಲಿ ಆಕ್ರಮಿಸಿಕೊಂಡಿರುವುದರಿಂದ ಅಪರಾಧಿಗಳನ್ನು ಕಾನೂನಿನ ಮುಂದೆ ತರಲಾಗುವುದಿಲ್ಲ. ಈ ಅಪಘಾತವು ಮೋದಿ ಸರ್ಕಾರದ ಯೋಜಿತವಲ್ಲದ ಲಾಕ್‌ಡೌನ್‌ನಿಂದ ಉಂಟಾದ ಮಾನವೀಯ ಬಿಕ್ಕಟ್ಟಿನ ಫಲಿತಾಂಶವಾಗಿದೆ ಎಂದು ಅವರು ಟೀಕಿಸಿದ್ದಾರೆ. ವಲಸೆ ಕಾರ್ಮಿಕರು, ಸಮಾಜದ ಅತ್ಯಂತ ಬಡವರು ಆಡಳಿತಗಾರರ ಈ ಬಲವಂತದ ‘ಡೆತ್-ಮಾರ್ಚ್’ಗೆ ಬಲಿಯಾಗುತ್ತಿದ್ದಾರೆ. ಬಿಸಿಲು, ಹಸಿವು, ಬಾಯಾರಿಕೆ ಮತ್ತು ಬಳಲಿಕೆಯೊಂದಿಗೆ ಸಾವಿರಾರು ಕಿಲೋಮೀಟರ್ ನಡೆದುಕೊಂಡು ಅವರು ತಮ್ಮ ಮನೆಗಳಿಗೆ ಹೋಗುತ್ತಿದ್ದಾರೆ. ಸರಿಯಾದ ಪೂರ್ವ ತಯಾರಿ ಇಲ್ಲದೆ ಘೋಷಿಸಲಾದ ಲಾಕ್‌ಡೌನ್‌ನಿಂದಾಗಿ ಕಾರ್ಮಿಕರು ತಮ್ಮ ಮನೆಗಳಿಗೆ ಹೋಗಲು ಸಾಧ್ಯವಾಗದೆ, ಅವರನ್ನು ಅನಿವಾರ್ಯವಾಗಿ ನಡೆದುಕೊಂಡು ಹೋಗುವಂತೆ ಮಾಡಿ ರಸ್ತೆಗಳು ಮತ್ತು ರೈಲ್ವೆ ಹಳಿಗಳಲ್ಲಿ ಅವರನ್ನು ಕೊಲ್ಲಲಾಗುತ್ತಿದೆ. ಕೇಂದ್ರ ಮತ್ತು ಕೆಲವು ರಾಜ್ಯಗಳ ಸಂವೇದನಾರಹಿತ ಸರ್ಕಾರಗಳು ಈ ಬಡ ಜನರ ಸಾವನ್ನು ಆನಂದಿಸುತ್ತಿವೆ ಎಂದು ಅವರು ಹೇಳಿದ್ದಾರೆ.
ಕೋವಿಡ್ -೧೯ ಸೋಂಕು ಹಿಂದುತ್ವ ಬಲಪಂಥೀಯರ ಬೂಟಾಟಿಕೆಯನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದೆ. ಬಿಜೆಪಿಯೇತರ ರಾಜ್ಯ ಸರ್ಕಾರಗಳು, ಎನ್‌ಜಿಒಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಈ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದ್ದರೆ, ಬಿಜೆಪಿ ಸರ್ಕಾರಗಳು ಕಾರ್ಮಿಕರಿಗೆ ಸಹಾಯ ಮಾಡುವವರನ್ನು ತಪ್ಪಿತಸ್ಥರೆಂದು ಪರಿಗಣಿಸುತ್ತಿವೆ. ಈ ಕಾರ್ಮಿಕರಿಗೆ ಆಹಾರ ಮತ್ತು ಆಶ್ರಯ ನೀಡುವುದನ್ನು ಉತ್ತರ ಪ್ರದೇಶ ಸರ್ಕಾರ ಅಪರಾಧವೆಂದು ಘೋಷಿಸಿದೆ.
ಈ ವಲಸೆ-ಕಾರ್ಮಿಕರ ಬಿಕ್ಕಟ್ಟು ಭಾರತದ ಕೊರೊನಾವೈರಸ್ ಲಾಕ್‌ಡೌನ್‌ಗೆ ಅವಮಾನವಾಗಿದೆ. ೩೦೦ಕ್ಕೂ ಹೆಚ್ಚು ಕಾರ್ಮಿಕರು ಈಗಾಗಲೇ ಸಾವನ್ನಪ್ಪಿದ್ದು, ಅವರ ಸಾವುಗಳು ವೈರಸ್‌ಗೆ ಸಂಬAಧಿಸಿಲ್ಲ. ವಲಸೆ ಕಾರ್ಮಿಕರಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಒದಗಿಸಿ ಅವರು ತಮ್ಮ ಮನೆಗೆ ಸುರಕ್ಷಿತವಾಗಿ ತಲುಪುವಂತೆ ನೋಡಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಾಫಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Leave A Comment