ಬೆಂಗಳೂರು, ಡಿಸೆಂಬರ್ 23: ಕೇಂದ್ರದ ಬಿಜೆಪಿ ಸರ್ಕಾರ ನಿರಂತರವಾಗಿ ಎನ್.ಐ.ಎ ಮತ್ತು ಇತರ ತನಿಖಾ ಸಂಸ್ಥೆಗಳನ್ನು ಜನಪರ ಹೋರಾಟಗಾರರ ವಿರುದ್ಧ ನಿರಂತರ ದುರ್ಬಳಕೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಎಸ್.ಡಿ.ಪಿ.ಐ ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಆಗ್ರಹಿಸಿದೆ.ಬೆಂಗಳೂರಿನ ಡಿ.ಜೆ ಹಳ್ಳಿ ಹಾಗೂ ಕೆ.ಜೆ ಹಳ್ಳಿಯಲ್ಲಿ ಕಳೆದ ಆಗಸ್ಟ್ ತಿಂಗಳನಲ್ಲಿ ನಡೆದ ಪ್ರವಾದಿ ನಿಂದನೆ ವಿರುದ್ಧ ಹಿಂಸಾಚಾರ ನಡೆದಿತ್ತು, ಈ ಹಿಂಸಾಚಾರರಾಜಕೀಯ ನಂಟಿನ ಭಾಗವಾಗಿರುತ್ತದೆ. ಇದರ ತನಿಖೆಯನ್ನು ಮೊದಲು ರಾಜ್ಯ ಪೊಲೀಸ್ ನಂತರದಲ್ಲಿ ರಾಷ್ಟ್ರೀಯ ತನಿಖಾ ದಳವು ಸಹ ತನಿಖೆ ಮಾಡುತ್ತಿವೆ. ಈಗಾಗಲೇ ಸಾವಿರಾರು ಜನರ ವಿಚಾರಣೆಯನ್ನು ನಡೆಸಲಾಗಿದೆ. ಎಸ್.ಡಿ.ಪಿ.ಐ ಕಾರ್ಯಕರ್ತರು ನಿರಂತರವಾಗಿ ಎನ್.ಐ.ಎ ಕಛೇರಿಗೆ ಭೇಟಿ ನೀಡಿ ತನಿಖಾಧಿಕಾರಿಗಳಿಗೆ ವಿಚಾರಣೆಯಲ್ಲಿ ಸಂಪೂರ್ಣ ಸಹಕಾರ ನೀಡಿರುತ್ತಾರೆ. ಕೆಲವರ ಮೊಬೈಲ್ ಪರಿಶೀಲನೆ ನಡೆಸಿಯೂ, ಯಾವುದೇ ಸಾಕ್ಷಿಗಳು ಸಿಕ್ಕಿರುವುದಿಲ್ಲ. ಪಕ್ಷದ ಕೆಲವು ಕಛೇರಿಗಳಿಗೂ ದಾಳಿ ಮಾಡಲಾಗಿತ್ತು. ಎಲ್ಲಾ ಆಯಾಮಗಳಲ್ಲೂ ಈ ಗಲಭೆಯಲ್ಲಿ ಎಸ್.ಡಿ.ಪಿ.ಐನ ಯಾವುದೇ ಪಾತ್ರವಿಲ್ಲ ಎಂದು ಕಂಡು ಬಂದಿರುತ್ತದೆ. ಅದಾಗಿಯೂ ಸಹಾ ಕೇಂದ್ರ ಬಿ.ಜೆ.ಪಿ ನಾಯಕರ ನಿರ್ದೇಶನ ಮೇರೆಗೆ ಎಸ್.ಡಿ.ಪಿ.ಐ ಪಕ್ಷವನ್ನು ಸಿಲುಕಿಸುವ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ.ವಾಸ್ತವವಾಗಿ ಅಲ್ಪಸಂಖ್ಯಾತ ಅದರಲ್ಲೂ ವಿಶೇಷವಾಗಿ ಮುಸ್ಲಿಂ, ದಲಿತ ಹಾಗೂ ಇನ್ನಿತರ ದಮನಿತ ಸಮುದಾಯಗಳ ರಾಜಕೀಯ ಸಬಲೀಕರಣಕ್ಕಾಗಿ ನಿರಂತರವಾಗಿ ದುಡಿಯುತ್ತಿದ್ದು, ಅದರೊಂದಿಗೆ ಇತ್ತೀಚಿಗಿನ ಕರೋನ ಸಂಕಷ್ಟ ಕಾಲದಲ್ಲಿ ಸಂತ್ರಸ್ಥರಿಗೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿ ದೇಶದಾದ್ಯಂತ ಎಲ್ಲಾ ಧರ್ಮೀಯರಿಂದ ಪ್ರಶಂಸೆಗೆ ಪಾತ್ರವಾಗಿತ್ತು. ಈ ಸಂಬಂಧ ಎಸ್.ಡಿ.ಪಿ.ಐ ಕಳೆದ ಆಗಸ್ಟ್ ತಿಂಗಳಿನಲ್ಲಿ ಈ ಸೇವಾಕಾರ್ಯಗಳನ್ನು ಮುಂದುವರಿಸಲು ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಸಂಬಂಧ ಬೆಂಗಳೂರು ಜಿಲ್ಲೆಯ ಎಲ್ಲಾ ಹಂತದ ಸಭೆಗಳನ್ನು ನಿರಂತರ ನಡೆಸಿದ್ದು, ಇಂತಹ ಸಭೆಗಳು ನಡೆಯುವುದು ಎಲ್ಲಾ ಪಕ್ಷಗಳಲ್ಲೂ ಸರ್ವೇಸಾಮಾನ್ಯ. ಆದರೇ ಈ ರೀತಿಯ ಸಾಮಾನ್ಯ ಸಭೆಗಳನ್ನು ಎನ್.ಐ.ಎ ಕೆ.ಜೆ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಗಲಭೆಯ ಸಂಚಿಗಾಗಿ ನಡೆಸಿದ ಸಭೆಗಳೆಂದು ಸುಳ್ಳು ಸಾಕ್ಷಿ ಸೃಷ್ಠಿಸಿ ಇತ್ತೀಚೆಗೆ ಎಸ್.ಡಿ.ಪಿ.ಐ ನ ಬೆಂಗಳೂರು ಜಿಲ್ಲಾಧ್ಯಕ್ಷರಾದ ಮಹಮ್ಮದ್ ಶರೀಫ್ ಹಾಗೂ ಕೆಲವು ಸ್ಥಳೀಯ ಕಾರ್ಯಕರ್ತನ್ನು ಎನ್.ಐ.ಎ ಬಂಧಿಸಿದೆ.ಕುಚೋದ್ಯವೇನೆಂದರೆ , ಬಿ.ಜೆ.ಪಿ ಪರವಾಗಿ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲಿ ಪ್ರಚಾರ ಮಾಡುತ್ತಿದ್ದ ನವೀನ್ ಪ್ರವಾದಿ ನಿಂದನೆ ಪೋಸ್ಟ್ ಮಾಡಿದ ಮೇಲೆ ಸ್ಥಳೀಯರು ಭಾವೊದ್ರಿಕ್ತರಾಗಿದ್ದರು. ತನಿಖಾ ಸಂಸ್ಥೆಗಳು ಹಿಂಸೆಗೆ ಮೂಲ ಪ್ರಚೋದನೆ ನೀಡಿದ ನವೀನ್ ಮೇಲೆ ಸಾಮಾನ್ಯ ಕೇಸುಗಳನ್ನು ಹಾಕಿದ ಕಾರಣ ಜಾಮೀನು ಸಹ ಸಿಕ್ಕಿ ಬೀಡುಗಡೆಗೊಂಡಿದ್ದಾನೆ. ಆದರೆ ಬೆಂಗಳೂರಿನ ನೂರಾರು ಅಮಾಯಕ ಮುಸ್ಲಿಂ ಯುವಕರನ್ನು ಕರಾಳ ಕಾನೂನಿನಡಿ ಬಂಧಿಸಲಾಗಿದ್ದು ಜಾಮೀನು ಸಿಗದಂತೆ ಮಾಡಿ, ತನಿಖಾ ಸಂಸ್ಥೆಗಳಿಂದ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ. ಈ ಕಾರಣ ಅಮಾಯಕ ಯುವಕರ ನೂರಾರು ಕುಟುಂಬಗಳು ದುಖ್ಖಃತಪ್ತರಾಗಿದ್ದಾರೆ. ಕೇಂದ್ರ ಬಿ.ಜೆ.ಪಿ ಸರ್ಕಾರವು ಭೀಮಾಕೊರೆಗಾಂವ್ ಪ್ರತಿಭಟನೆ, ದೆಹಲಿ ಗಲಭೆ, ರೈತ ಹಾಗೂ ಕಾರ್ಮಿಕ ಹೋರಾಟ ಮತ್ತು ಕೆ.ಜೆ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಹಿಂಸಾಚಾರದ ಹೆಸರಲ್ಲಿ ನಿರಂತರವಾಗಿ ಸಾಮಾಜಿಕ ಹೋರಾಟಗಾರರನ್ನು, ರಾಜಕೀಯ ವಿರೋಧ ಪಕ್ಷದವರನ್ನು, ಎಡ ಪಂಥೀಯರನ್ನು, ರೈತತನ್ನು, ಕಾರ್ಮಿಕರನ್ನು ಹಾಗೂ ಮುಸ್ಲಿಮರನ್ನು ಸುಳ್ಳು ಕೇಸುಗಳಿಗೆ ಈಡು ಮಾಡಿ ಬಂಧಿಸುವುದುಕೂಡಲೇ ನಿಲ್ಲಿಸಬೇಕು. ಈ ಘಟನೆಗಳ ನೈಜ ಅಪರಾಧಿಗಳಾದ ಬಿಜೆಪಿ ಮತ್ತು ಸಂಘ ಪರಿವಾರದ ತಪ್ಪಿತಸ್ಥರನ್ನು ರಕ್ಷಣೆ ಮಾಡದೇ ಕೂಡಲೇ ಬಂಧಿಸಬೇಕು.ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಪ್ರಕರಣದಲ್ಲಿ ತನಿಖಾ ಸಂಸ್ಥೆಗಳು ನಿಪಕ್ಷಪಾತವಾಗಿ ತನಿಖೆ ಮಾಡಿ ಪಕ್ಷ ಮತ್ತು ಧರ್ಮ ಭೇದ ಮಾಡದೆ ನೈಜ ಅಪರಾಧಿಗಳನ್ನು ಬಂಧಿಸಿ ಕಾನೂನುಕ್ರಮಕ್ಕೆ ಒಳಪಡಿಸಬೇಕು. ಅಮಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು. ಯು.ಎ.ಪಿ.ಎ ಅಂತಹಾ ಕರಾಳ ಕಾನೂನನ್ನು ದುರ್ಬಳಕೆ ಮಾಡಬಾರದು. ತನಿಖಾಧಿಕಾರಿಗಳು ಯಾವುದೇ ರಾಜಕೀಯ ಒತ್ತಡಗಳಿಗೆ ಬಗ್ಗಬಾರದು ಎಂದು ಎಸ್.ಡಿ.ಪಿ.ಐ ಪ್ರತಿಭಟನೆಯಲ್ಲಿ ಒತ್ತಾಯಿಸಿತು.ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದವರು:ಪ್ರೋ. ನಾಝ್ನೀಂ ಬೇಗಂ, ರಾಷ್ಟೀಯ ಉಪಾಧ್ಯಕ್ಷರುಅಬ್ದುಲ್ ಮಜೀದ್ಖಾನ್, ರಾಜ್ಯ ಉಪಾಧ್ಯಕ್ಷರುಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿಮುಜಾಹಿದ್ ಪಾಷಾ ರಾಜ್ಯ ಪ್ರಧಾನ ಕಾರ್ಯದರ್ಶಿಪಯಾಝ್ ಬೆಂಗಳೂರು, ರಾಜ್ಯ ಸಮಿತಿ ಸದಸ್ಯರುಹೆಚ್.ಎಂ ಗಂಗಪ್ಪ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷರು,ಸಲೀಂ ಅಹಮದ್, ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಇನ್ನಿತರರು.

08
Jun- Tags:
- #BJPGovernment #NIA #Protest