ಬೆಂಗಳೂರು ಜೂನ್ 24 : ಬೆಂಗಳೂರಿನ ಡಿಜೆ ಹಳ್ಳಿ- ಕೆಜಿ ಹಳ್ಳಿಯಲ್ಲಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಹಿಂಸಾಚಾರ ನಡೆದಿತು. ಪ್ರವಾದಿ ಮೊಹಮ್ಮದ್ (ಸ.ಅ) ಬಗ್ಗೆ ಆಕ್ಷೇಪಾರ್ಹ ಪೋಸ್ಟನ್ನು ಬಿಜೆಪಿ ಬೆಂಬಲಿಗ ನವೀನ್ ಎಂಬಾತ ಹಾಕಿದ್ದ. ಇದರ ವಿರುದ್ಧ ಮುಸ್ಲಿಂ ಸಮುದಾಯ ಪೊಲೀಸ್ ಠಾಣೆಯಲ್ಲಿ ಜಮಾವಣೆಗೊಂಡು ನವೀನನನ್ನು ಬಂಧಿಸಲು ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ಹಿಂಸಾಚಾರ ನಡೆದು ಪೊಲೀಸ್ ಗೋಲಿಬಾರಿನಲ್ಲಿ 3 ಮುಸ್ಲಿಂ ಜೀವ ಹಾನಿಯಾಗಿತ್ತುಈ ಸಂದರ್ಭದಲ್ಲಿ ನಾನೂರಕ್ಕೂ ಹೆಚ್ಚು ಮುಸ್ಲಿಮರನ್ನು ಬಂಧಿಸಲಾಗಿತ್ತು. ಅವರಲ್ಲಿ ಬಹುತೇಕರು ಅಮಾಯಕರಾಗಿದ್ದರು. ಕಳೆದ ಮೂರು ತಿಂಗಳುಗಳಿಂದ ನೂರಾರು ಜನ ಬಿಡುಗಡೆ ಹೊಂದುತ್ತಿದ್ದಾರೆ. ಈ ಪೈಕಿ ಎಸ್ಡಿಪಿಐ ಪಕ್ಷದ 8-10 ಕಾರ್ಯಕರ್ತರನ್ನು ಬಂಧಿಸಲಾಗಿತ್ತು ಅವರಲ್ಲಿ ನಿನ್ನೆ ಪಕ್ಷದ ಬೆಂಗಳೂರು ಕಾರ್ಯದರ್ಶಿ ಮುಝಮ್ಮಿಲ್ ಪಾಷಾ ಮತ್ತಿತರರು ಜಾಮೀನಿನಲ್ಲಿ ಬಿಡುಗಡೆ ಹೊಂದಿರುತ್ತಾರೆ. ಅವರು ಇಂದು ಪತ್ರಿಕಾಗೋಷ್ಟಿ ನಡೆಸಿ ಪ್ರಕರಣದ ಸಂಪೂರ್ಣ ಸತ್ಯಾಂಶವನ್ನು ಮಾದ್ಯಮದ ಮುಂದೆ ಹೇಳಿದರು. ಬಿಜೆಪಿ ಮಂತ್ರಿಗಳ ಒತ್ತಡದಿಂದ ನೂರಾರು ಅಮಾಯಕ ಮುಸ್ಲಿಮರನ್ನು ಬಂಧಿಸಿ ಕೇಸು ಜಡಿಯಲಾಗಿತ್ತು. ನಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ಭರವಸೆ ಇತ್ತು ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಿದೆವು. ಮುಂದೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನಿರಪರಾಧಿಗಳು ಎಂದು ಸಾಬೀತಾಗುವ ಎಲ್ಲಾ ಭರವಸೆ ಇದೆ ಎಂದು ಮುಝಮ್ಮಿಲ್ ಪಾಷಾ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಅಡ್ವೋಕೇಟ್ ಮಜೀದ್ ಖಾನ್, ಬೆಂಗಳೂರು ಜಿಲ್ಲಾಧ್ಯಕ್ಷರಾದ ಫಯಾಝ್ ಅಹಮದ್, ಜಾಮೀನಿನಲ್ಲಿ ನಿನ್ನೆ ಬಿಡುಗಡೆಗೊಂಡ ಎಸ್ಡಿಪಿಐ ಕಾರ್ಯಕರ್ತರಾದ ಸೈಯದ್ ಅಯಾಝ್ ಮತ್ತು ಸೈಯದ್ ಮಸೂದ್ ಉಪಸ್ಥಿತರಿದ್ದರು
- Tags:
- #DjHalli #KgHalli #MuzammilPasha