ಪತ್ರಿಕಾ ಪ್ರಕಟನೆಗಾಗಿ


ಮತದಾರರಲ್ಲಿ ಮಾಡುತ್ತಿರುವ ಮನವಿ
ಮಾನ್ಯರೇ, ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಸ್.ಡಿ.ಪಿ.ಐ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.ಕಳೆದ ಹಲವಾರು ವರ್ಷಗಳಿಂದ ಮತದಾರ ಆರಿಸಿ ಕಳುಹಿಸಿದ ಕಾರ್ಪೋರೇಟರ್‌ಗಳು ವಾರ್ಡಿನ ಸಮಸ್ಯೆಗಳನ್ನು ಪರಿಹರಿಸಿಲ್ಲ. ಉತ್ತಮ ರಸ್ತೆ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲ. ಬೀದಿ ದೀಪ ಸರಿಯಾಗಿಲ್ಲ  , ಶುದ್ಧ ಕುಡಿಯುವ ನೀರಿನ ಪೂರೈಕೆ ಇಲ್ಲ, ಕಸ ವಿಲೇವಾರಿ ಮೊದಲಾದ ಹಲವಾರು ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ.

ನಿಮ್ಮ ವಾರ್ಡಿನ ಸಮಗ್ರ ಅಭಿವೃದ್ದಿಗೆ.
ಸರ್ಕಾರ ಸೌಲಭ್ಯಗಳಾದ ಪಿಂಚಣಿ, ವಿಧ್ಯಾರ್ಥಿ ವೇತನ, ಸ್ವ ಉದ್ಯೋಗ ಸಹಾಯ, ವಸತಿ ಮತ್ತಿತರ ವ್ಯವಸ್ಥೆ ನಿಮ್ಮ ಮನೆ ಬಾಗಿಲಿಗೆ ತಲುಪಿಸಲು ಸರ್ಕಾರದ ನಿಧಿಗಳನ್ನು ಸೋರಿಕೆಯಿಲ್ಲದೆ ವಾರ್ಡಿನ ಸಮರ್ಪಕ ಅಭಿವೃದ್ಧಿಗೆ ಉಪಯೋಗಿಸಲು ಲಂಚ ರಹಿತ, ಪಾರದರ್ಶಕ, ತಾರತಮ್ಯ ರಹಿತ, ಭ್ರಷ್ಟಚಾರ ರಹಿತ ವ್ಯವಸ್ಥೆ ಸ್ವಾಪಿಸಲು ಎಸ್.ಡಿ.ಪಿ.ಐ ಪಕ್ಷದ ಪ್ರಾಮಾಣಿಕ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿ ವಿನಂತಿ.

2009ರಲ್ಲಿ ಸ್ಥಾಪನೆಯಾಗಿ ದೇಶ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಜನಪರ ಹೋರಾಟ ಮಾಡುತ್ತಿರುವ ಪಕ್ಷವಾಗಿದೆ ಎಸ್.ಡಿ.ಪಿ.ಐ. ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ 300ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದು ಜನ ಸೇವೆ ಮಾಡುತ್ತಾ ಕಳಂಕ ರಹಿತ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲಾ ಜಾತಿ, ಧರ್ಮ, ಭಾಷೆಯ ಜನರ ಕಲ್ಯಾಣಕ್ಕಾಗಿ ಎಸ್.ಡಿ.ಪಿ.ಐ ಪಕ್ಷಕ್ಕೆ ಮತ ನೀಡಬೇಕೆಂದು ಎಸ್‌ಡಿಪಿಐ ರಾಜ್ಯ ಮಾಧ್ಯಮ ಉಸ್ತುವಾರಿ ಅಕ್ರಮ ಹಸನ್ ರವರು ಮತದಾರರಲ್ಲಿ ವಿನಂತಿಸಿಕೊಂಡರು.

ಧಾರವಾಡ ವಾರ್ಡ್ ನಂ.22 ಅಭ್ಯರ್ಥಿ ಅಫ್ರೀನ್ ಅಧೋನಿ ಇವರ ಚಿನ್ಹೆ ಕುಕ್ಕರ್

ಹುಬ್ಬಳ್ಳಿ ವಾರ್ಡ್ ನಂ. 71 – ಅಭ್ಯರ್ಥಿ ಸಮೀರ್ ಬೆಟಗೇರಿ ಇವರ ಚಿನ್ಹೆ ಆಟೋರಿಕ್ಷಾ

ಹುಬ್ಬಳ್ಳಿ ವಾರ್ಡ್ ನಂ 79 – ಅಭ್ಯರ್ಥಿ ವಹೀದಾ ಜಮಖಂಡಿ ಇವರ ಚಿನ್ಹೆ ಆಟೋರಿಕ್ಷಾ

ಹುಬ್ಬಳ್ಳಿ ವಾರ್ಡ್ ನಂ 75 – ಅಭ್ಯರ್ಥಿ ಸಈದಾ ನಲಬಂದ್ ಇವರ ಚಿನ್ಹೆ ಕುಕ್ಕರ್

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಶ್ರೀ ರಫೀಕ್ ಲಷ್ಕರ್, ಪ್ರಧಾನ ಕಾರ್ಯದರ್ಶಿ ಶ್ರೀ ಇರ್ಷಾದ್ ಅತ್ತರ್, ಜಿಲ್ಲಾ ಮಾಧ್ಯಮ ಉಸ್ತುವಾರಿ ಶ್ರೀ. ಇರ್ಷಾದ್ ಅಹ್ಮದ್ ರಿತ್ತಿ ಹಾಗೂ ವಾರ್ಡ್ ಸಮಿತಿ ಅಧ್ಯಕ್ಷ ಶ್ರೀ. ಪ್ರತಾಪ್ ವಾಲ್ಮೀಕಿ ಉಪಸ್ಥಿತರಿದ್ದರು

Leave A Comment