02
Sep

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ #ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ನೂರುದ್ದೀನ್ ರವರು ಮಾತನಾಡಿ ಎಸ್ ಡಿ ಪಿ ಐ ಪಕ್ಷದ ಉದ್ದೇಶವನ್ನು ವಿವರಿಸಿ ಹಸಿವು ಮುಕ್ತ ಸ್ವಾತಂತ್ರ್ಯ, ಭಯ ಮುಕ್ತ ಸ್ವಾತಂತ್ರ್ಯ,
ಮತ್ತು ಕಾರ್ಯಕರ್ತ ಯಾರು? ಕಾರ್ಯಕರ್ತರು ಯಾಕೆ ಬೇಕು? ಕಾರ್ಯಕರ್ತರ ಗುಣಲಕ್ಷಣಗಳು ಮತ್ತು ಕೇಡರಿನ ವಿಶೇಷತೆಗಳನ್ನು ಸವಿಸ್ತಾರವಾಗಿ ವಿವರಿಸಿದ್ದರು.
ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಮಜಾಜ಼್ ಅಹಮದ್ ರವರು ಭಾರತದ ಸಾಮಾಜಿಕ ಪ್ರಜಾಪ್ರಭುತ್ವ ಸಿದ್ಧಾಂತ ಮತ್ತು ಪ್ರಾಯೋಗಿಕತೆ ಇದರ ಬಗ್ಗೆ ವಿವರಿಸಿದರು ಸಾಮಾಜಿಕ ನ್ಯಾಯ, ಭ್ರಷ್ಟಾಚಾರ ರಹಿತ ಆಡಳಿತ, ಮಾದರಿ ಜನನಾಯಕರು, ತಾರತಮ್ಯ ರಹಿತ ಸಮಾಜ ನಿರ್ಮಾಣ, ಮೊದಲಾದ ವೈಶಿಷ್ಟ್ಯಗಳ ಪಕ್ಷವಾದ ಎಸ್.ಡಿ.ಪಿ.ಐಯನ್ನು ಎಲ್ಲಾ ಧರ್ಮ-ಜಾತಿ-ಭಾಷೆಯ ಲಕ್ಷಾಂತರ ಜನರು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ತರಬೇತಿ ಶಿಬಿರದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಮಜಾಜ಼್ ಅಹ್ಮದ್, ರಾಜ್ಯ ಸಮಿತಿ ಸದಸ್ಯರಾದ ನೂರುದ್ದೀನ್ , ಜಿಲ್ಲಾ ಉಪಾಧ್ಯಕ್ಷರಾದ ಕಲಂದರ್ ಷರೀಫ್, ಜಿಲ್ಲಾ ಕಾರ್ಯದರ್ಶಿ ಸೈಯದ್ ಅಕ್ಬರ್, ಜಿಲ್ಲಾ ಕಾರ್ಯದರ್ಶಿಯಾದ ಸತೀಶ ಸಣ್ಣಹಳ್ಳಿ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲಿಯಾಖತ್ ಅಲಿ ಹುಣಸೂರು ತಾಲೂಕು ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಅಬ್ರೇಸ್ ಪಿರಿಯಾಪಟ್ಟಣ ತಾಲೂಕು ಸಮಿತಿ ಅಧ್ಯಕ್ಷರಾದ ಮುಬೀರ್ ಹುಣಸೂರು ನಗರಸಭೆಯ ಸದಸ್ಯರಾದ ಸಯ್ಯದ್ ಯೂನುಸ್ ಮತ್ತು ಸಮೀನಾ ಇಮ್ರಾನ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಮೈಸೂರು ಗ್ರಾಮಾಂತರ
ಸೆಪ್ಟಂಬರ್ 2 2022

Leave A Comment