ಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡುವ ಕಾರ್ಯ ನಡೀತಾ ಇದೆ.
ಟಿಪ್ಪು ಗುಲಾಮಗಿರಿ ಒಪ್ಪಲಿಲ್ಲ, ಅದರಿಂದಾಗಿಯೇ ಅವರು ಮರಣಹೊಂದಿದ 200 ವರ್ಷಗಳ ನಂತರವೂ ಬ್ರಿಟೀಷರ ಬೂಟು ನೆಕ್ಕಿದವರಿಗೆ ಕಾಡುತ್ತಿದ್ದಾರೆ.
ಈ ರಾಜ್ಯವನ್ನು ಉಳಿಸಿಕೊಳ್ಳಲು ನಾವು ಇನ್ನೊಂದು ಸ್ವಾತಂತ್ರ‍್ಯ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ.
ನಾನು ಮನೆಯಲ್ಲಿ ಉರ್ದು ಮಾತಾನಾಡುವ ಮುಸ್ಲಿಂ, ಆದರೆ ನಿಮ್ಮ ಮುಂದೆ ಮಾತಾಡುವ ಶಕ್ತಿ ಕೊಟ್ಟಿದ್ದು ಕರ್ನಾಟಕ. ನಾನು ಮೊದಲು ಕಲಿತ ಅಕ್ಷರ ಅ, ಆ, ಇ, ಈ.. ಎಲ್ಲ ಕ್ಷೇತ್ರ, ಉದ್ಯಮಗಳಲ್ಲಿಯೂ ಕನ್ನಡವೇ ಮೊದಲಿರಬೇಕು,
ಎಸ್.ಎಸ್.ಸಿ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶ ಇಲ್ಲ, ಇಲ್ಲಿನ ಸಂಸದರಿಗೆ ಅದನ್ನು ಪ್ರಶ್ನೆ ಮಾಡುವ ಧೈರ್ಯವೂ ಇಲ್ಲ. ಅವರೆಲ್ಲ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ.
ಈ ವೇದಿಕೆ ಮೇಲೆ ಯಾರೂ ಜಾತಿ ಧರ್ಮದ ಬಗ್ಗೆ ಮಾತಾಡಲಿಲ್ಲ. ಎಲ್ಲರೂ ರಾಜ್ಯ ಕಟ್ಟುವ ಮಾತನ್ನಾಡಿದರು, ಕನಸಿನ ಕರ್ನಾಟಕ ಕಟ್ಟಲು ನಾವೆಲ್ಲ ಜಾತಿ ಮತ ಧರ್ಮ ಬೇಧವಿಲ್ಲದೆ ಕೆಲಸ ಮಾಡೋಣ.
ಅಫ್ಸರ್ ಕೊಡ್ಲಿಪೇಟೆ ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್.ಡಿ.ಪಿ.ಐ ಕರ್ನಾಟಕ