ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಡಾ. ವಿಜಯ್ ಎಮ್ ಗುಂಟ್ರಾಳ ಅವರು ಶತ ಶತಮಾನಗಳಿಂದ ಭಾರತ ದೇಶದ ಮೂಲನಿವಾಸಿಗಳು ನೆಲ ಸಂಸ್ಕೃತಿ ತಳ ಸಮುದಾಯಗಳ ಆಚಾರ ವಿಚಾರಗಳನ್ನು ವಾಲಿಸುತ್ತಾ ನೈಸರ್ಗಿಕ ಸಂಪತ್ತುಗಳು ಹಾಗೂ ಧಾರ್ಮಿಕ ಆಚರಣೆಯನ್ನು ರಕ್ಷಣೆ ಮಾಡಿದ್ದಾರೆ 75 ವರ್ಷಗಳ ಸ್ವತಂತ್ರ ಭಾರತದಲ್ಲಿ ಇಂದಿಗೂ ಸಂವಿಧಾನ ಬದ್ಧ ಹಕ್ಕು ಅಧಿಕಾರ ಸೌಲಭ್ಯಗಳಿಂದ ಅಲೆಮಾರಿಗಳಿಗೆ ವಂಚನೆ ಮಾಡಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವ ವಿಚಾರಗಿದೆ. ಆಳುವ ಸರ್ಕಾರಗಳು ದೇಶದ ಪ್ರಜೆಗಳಿಗೆ ಘನತೆಯ ಬದುಕನ್ನು ಕಟ್ಟಿಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಮುಂದಿನ ದಿನಗಳಲ್ಲಿ ಪಕ್ಷವು ದೇಶಾದ್ಯಂತ ಧ್ವನಿ ಇಲ್ಲದ ಇಂತಹ ಅಲೆಮಾರಿ ಸಮುದಾಯಗಳ ಪರವಾಗಿ ಸಂವಿಧಾನ ಬದ್ಧ ಹಕ್ಕು ಅಧಿಕಾರ ಸೌಲಭ್ಯಗಳನ್ನು ದೊರಕಿಸಿಕೊಡಲು ಮುಂದಾಗುತ್ತದೆ ಎಂದು ತಿಳಿಸಿದರು.
ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ನಿರ್ಣಯಗಳನ್ನು ಮಂಡಿಸಿದರು. ಪಕ್ಷದ ಜಿಲ್ಲಾ ಅಧ್ಯಕ್ಷರಾದ ಮತ್ತು ಹುಸನ್ ಹೊಸಮನಿ ಸುಡಗಾಡ ಸಿದ್ದರು, ಸಮುದಾಯದ ಅಧ್ಯಕ್ಷರಾದ ರಾಮಯ್ಯ ಡೋಕ್ಕನವರ, ಬುಡಗ ಜಂಗಮ ಸಮುದಾಯದ ಅಧ್ಯಕ್ಷರಾದ ರಾಮಕುಮಾರ್ ಮಹಾಂತ್, ಶಿಳ್ಳಿ ಖ್ಯಾತನ್ ಸಮುದಾಯದ ಜಿಲ್ಲಾ ಮುಖಂಡರಾದ ಮಾರುತಿ ಕಟ್ಟಿಮನಿ, ಹನುಮಂತಪ್ಪ ಪುಲಾವಿ, ಚಂದ್ರಶೇಖರ ಮಹಾಂತ್ ಶಿವಶಂಕರ್ ಭಂಡಾರಿ ಪಕ್ಷದ ಪ್ರಧಾನ ಕಾರ್ಯದರ್ಶಿ ಗಪ್ಪು ಅಹ್ಮದ್ ಕುರಟ್ಟಿ, ಸಮೀರ್ ಬೆಟಗೇರಿ, ರಫೀಕ್ ಲಷ್ಕರ್ ಹಮೀದ್ ಬಂಗಾಲಿ ಮಲಿಕ್ ಕಳಸ್ ಇನ್ನು ಮುಂತಾದ ನೂರಾರು ಜನರು ಉಪಸ್ಥಿತರಿದ್ದರು.