16
Jul

ದೇವನಹಳ್ಳಿ ರೈತರ ವಿಜಯವನ್ನು ಎಸ್.ಡಿ.ಪಿ.ಐ ಸ್ವಾಗತಿಸುತ್ತದೆ

ಬೆಂಗಳೂರು 15-07-2025 : ರೈತರ ಹೋರಾಟಕ್ಕೆ ಸ್ಪಂದಿಸಿ, ಬೂಸ್ವಾಧೀನ ಕೈ ಬಿಟ್ಟ ಸಿದ್ದರಾಮಯ್ಯ ಸರ್ಕಾರದ ನಿರ್ಧಾರ ಸ್ವಾಗತರ್ಹ SDPI.

ದೇವನಹಳ್ಳಿ ತಾಲ್ಲೂಕಿನ ೧೩ ಹಳ್ಳಿಯ ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ೧೧೯೮ ದಿನಗಳಿಂದ ಹೋರಾಟ ಮಾಡುತ್ತಿದ್ದರು. ತಮ್ಮ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳಲು ಅಂತಿಮ ನೋಟಿಸ್ಸನ್ನು ನೀಡಿತ್ತು. ಆದರೆ ಸರ್ಕಾರವನ್ನು ರೈತರು ತಮ್ಮ ಅದಮ್ಯ ಹೋರಾಟ ಶಕ್ತಿಯಿಂದ ಮಣಿಸಿದ್ದಾರೆ. ಈ ಯಶಸ್ಸು ಹೋರಾಟದ ಮೂಲಕ ಜನಗಳು ತಮ್ಮ ಹಕ್ಕುಗಳನ್ನು ಪಡೆಯಬಹುದು ಎಂಬ ನಂಬಿಕೆ ತಂದಿದೆ. ರಾಷ್ಟ್ರಮಟ್ಟದಲ್ಲಿ ಪಂಜಾಬ್ ರೈತರು ಒಂದು ವರ್ಷ ದೆಹಲಿಯಲ್ಲಿ ಹೋರಾಟ ಮಾಡಿ ಗೆದ್ದರು. ಈ ಹೋರಾಟ ಮಾದರಿ ಹೋರಾಟ ಆಗಿತ್ತು. ಅದಕ್ಕೂ ಮಿಗಿಲೆಂಬಂತೆ ದೇವನಹಳ್ಳಿ ರೈತರು ಮೂರುವರೆ ವರ್ಷ ಹೋರಾಟ ಮಾಡಿ ಗೆದ್ದಿದ್ದಾರೆ. ೧೩ ಹಳ್ಳಿಗಳನ್ನು ವಶಪಡಿಸಿಕೊಳ್ಳಲು ಸರ್ಕಾರ ಕೊಟ್ಟ ಕಾರಣ ಏನೇ ಇದ್ದರು ಇದರಲ್ಲಿ ರಿಯಲ್ ಎಸ್ಟೇಟ್ ಅವರ ಹಿತಾಸಕ್ತಿ ಇತ್ತು ಎಂಬುದು ಸತ್ಯ. ರಿಯಲ್ ಇಸ್ಟೇಟ್ ಅವರು ಸರ್ಕಾರ ಮಟ್ಟದಲ್ಲಿ ಬಾರೀ ಲಾಭೀ ಮಾಡುತ್ತಿದ್ದರು. ಎಲ್ಲಾ ಕುತಂತ್ರಗಳನ್ನು ಸೋಲಿಸಿ ರೈತರು ಇಂದು ಜಯ ಸಾಧಿಸಿದ್ದಾರೆ. ಮೂರುವರೆ ವರ್ಷ ಹೋರಾಟದ ದೊಡ್ಡ ಅವಧಿಯಲ್ಲಿ ರೈತರು ನಿರಾಸೆಗೊಳ್ಳಲಿಲ್ಲ, ಆತ್ಮವಿಶ್ವಾಸ ಕುಗ್ಗಲಿಲ್ಲ, ಹೋರಾಟದ ಮೇಲಿನ ವಿಶ್ವಾಸ ಕಳೆದುಕೊಳ್ಳಲಿಲ್ಲ. ರೈತರ ಈ ಆತ್ಮವಿಶ್ವಾಸಕ್ಕೆ ಹೋರಾಟದ ವಂದನೆಗಳು. ಕಾರ್ಪೋರೇಟ್ ಹಿತಾಸಕ್ತಿ ಸೋತಿದೆ, ಹಸಿರು ಗೆದ್ದಿದೆ.

ಇದನ್ನು ಸಾಧಿಸಲು ಹೆಗಲಿಗೆ ಹೆಗಲಾದ ಎಲ್ಲಾ ಸಹೋದರ ಸಂಘಟನೆಗಳಿಗು ಅಭಿನಂದನೆ ಸಲ್ಲಿಸಲು ಎಸ್.ಡಿ.ಪಿ.ಐ. ಬಯಸುತ್ತದೆ. ಇದು ರೈತರ ಸಮಸ್ಯೆ ಎಂದು ನೋಡದೆ ಕಾರ್ಮಿಕ ಸಂಘಟನೆಗಳು, ಎಡಪಕ್ಷಗಳು, ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು, ಪ್ರಗತಿಪರ ಚಿಂತಕರು, ಗಣ್ಯರು, ಕಲಾವಿದರು, ವಕೀಲರ ಸಂಘ, ವಿದ್ಯಾರ್ಥಿ ಸಂಘಟನೆಗಳು, ಹೀಗೆ ಎಲ್ಲಾರು ಇದಕ್ಕೆ ಹೆಗಲು ನೀಡಿದ್ದೀರ. ಖ್ಯಾತ ಚಿತ್ರನಟ ಪ್ರಕಾಶ್ ರಾಜ್ ಅವರು ಈ ಹೋರಾಟದ ಜವಾಬ್ದಾರಿ ಹೊತ್ತು ಮುಂಚೂಣಿಯಲ್ಲಿ ಇದ್ದರು. ಪ್ರಗತಿಪರ ಆಲೋಚನೆ ಇರುವ ಹಲವು ಚಿತ್ರನಟರು (ಮುಖ್ಯಮಂತ್ರಿ ಚಂದ್ರು ಅವರು, ಕಿಶೋರ್, ಬಿ ಸುರೇಶ್, ಇನ್ನು ಅನೇಕರು), ಕಲಾವಿದರು ತಮ್ಮ ಬೆಂಬಲವನ್ನು ಹೋರಾಟದ ಸ್ಥಳಕ್ಕೆ ಬಂದು ಸೂಚಿಸಿದರು. ಹೋರಾಟಗಾರರು ಬಂಧನವನ್ನು ಅನುಭವಿಸಿದ್ದರು. ೧೩ ಹಳ್ಳಿಯ ರೈತರಿಗು ಮತ್ತು ಹೆಗಲು ನೀಡಿದ ಇವರೆಲ್ಲಾರಿಗೂ ಎಸ್.ಡಿ.ಪಿ.ಐ ಅಭಿನಂದನೆ ಸಲ್ಲಿಸುತ್ತದೆ. ಅಷ್ಟೇ ಮುಖ್ಯವಾಗಿ ತನ್ನದೇ ಸರ್ಕಾರದೊಳಗೆ, ಸಂಪುಟ ಒಳಗೆ ಗುದ್ದಾಡಿ ರೈತರ ಪರ ಧೃಡವಾದ ತೀರ್ಮಾನ ತೆಗೆದುಕೊಂಡ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಎಸ್.ಡಿ.ಪಿ.ಐ ಅಭಿನಂದನೆ ಸಲ್ಲಿಸುತ್ತದೆ.

ಮುಂದೆಯೂ ನಾಡಿನ ರೈತ ಕಾರ್ಮಿಕರ, ಮಹಿಳೆಯರ, ದಲಿತರ, ಎಲ್ಲಾ ಶೋಷಿತ ಜನವರ್ಗದ ಹೋರಾಟದ ಪರವಾಗಿ ಸದಾ ಎಸ್.ಡಿ.ಪಿ.ಐ ನಿಂತಿರುತ್ತದೆ ಎಂದು ತಿಳಿಯಪಡಿಸುತ್ತದೆ.

Next Post

Leave A Comment