20
Jul

(20/07/2025)

ಟ್ವಿಟ್ಟರ್ ಅಭಿಯಾನವನ್ನು ಮುಂದೂಡಲಾಗಿದೆ

ಧರ್ಮಸ್ಥಳ ಪ್ರಕರಣ – ಎಸ್‌ಡಿಪಿಐ ಪ್ರತಿಕ್ರಿಯೆ

ಧರ್ಮಸ್ಥಳದಲ್ಲಿ ನೂರಾರು ಹೆಣ್ಣುಮಕ್ಕಳ ಅಸಹಜ ಸಾವುಗಳು, ಅತ್ಯಾಚಾರ ಹಾಗೂ ಕೊಲೆ ಶಂಕಿತ ಪ್ರಕರಣಗಳು ದೇಶವನ್ನು ಬೆಚ್ಚಿ ಬೀಳಿಸುವಂತಿದೆ. ಈ ಪ್ರಕರಣಗಳ ಸತ್ಯ ಹೊರಹಾಕಿ, ನಿಜಕ್ಕೂ ನ್ಯಾಯ ದೊರೆಯುವಂತೆ ಮಾಡಲು ಎಸ್‌ಡಿಪಿಐ (SDPI) ಪಕ್ಷ ಕಳೆದ ಹಲವು ದಿನಗಳಿಂದ ರಾಜ್ಯದಾದ್ಯಂತ ಹೋರಾಟ ನಡೆಸುತ್ತಿದೆ.

ಈ ಹೋರಾಟದ ಅಭಿಯಾನದ ಅಂಗವಾಗಿ ಇಂದು ಸಂಜೆ #ShameOnKarnatakaGovernment w ‘X’ ( ಟ್ವಿಟ್ಟರ್) ನಲ್ಲಿ ಅಭಿಯಾನ ನಡೆಸುತ್ತಿದೆ.

ರಾಜ್ಯ ಸರಕಾರ ಇಂದು ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿರುವುದನ್ನು ಎಸ್‌ಡಿಪಿಐ ಸ್ವಾಗತಿಸುತ್ತದೆ. ಸರಕಾರದ ಈ ಕ್ರಮವು ಸಾರ್ವಜನಿಕ ಒತ್ತಡಕ್ಕೆ ಸಿಕ್ಕ ಸ್ಪಂದನೆಯಾಗಿದೆ.

ಇದೇ ಸಮಯದಲ್ಲಿ, ಇಂದಿನ (20/07/2025) ಸಂಜೆ 4 ಗಂಟೆಗೆ ಯೋಜಿಸಲಾಗಿದ್ದ ಟ್ವಿಟ್ಟರ್ ಅಭಿಯಾನವನ್ನು ಪಕ್ಷ ತಾತ್ಕಾಲಿಕವಾಗಿ ಮುಂದೂಡಿದೆ. ಆದರೆ, ಸರ್ಕಾರ ರಚಿಸಿರುವ SIT ಗೆ ನಿಜವಾದ ನೈತಿಕ ಮತ್ತು ಕಾನೂನಾತ್ಮಕ ಬಲ ಸಿಗಬೇಕಾದರೆ, ತನಿಖೆಯ ನೇತೃತ್ವವನ್ನು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗೆ ನೀಡಬೇಕು ಎಂಬುದು ಎಸ್‌ಡಿಪಿಐ ಪಕ್ಷದ ಬಲವಾದ ಬೇಡಿಕೆಯಾಗಿದೆ.

ನಿಷ್ಪಕ್ಷಪಾತ ತನಿಖೆ, ಸೌಜನ್ಯ ಸೇರಿದಂತೆ ನೂರಾರು ಪೀಡಿತ ಹೆಣ್ಣುಮಕ್ಕಳಿಗೆ ನ್ಯಾಯ ನೀಡುವ ದೃಢ ಸಂಕಲ್ಪದೊಂದಿಗೆ, ಎಸ್‌ಡಿಪಿಐ ತನ್ನ ಹೋರಾಟವನ್ನು ಮುಂದುವರಿಸುತ್ತದೆ.

Leave A Comment