20
Jul

ಮೌನವನ್ನು ಮುರಿಯೋಣ ಸತ್ಯಕ್ಕೆ ಧ್ವನಿಯಾಗೋಣ
ಆತ್ಮೀಯರೇ,

ಧರ್ಮಸ್ಥಳದಲ್ಲಿ ಬೆಳಕಿಗೆ ಬಂದಿರುವ ಹೃದಯವಿದ್ರಾವಕ ಘಟನೆಗಳು ಅನೇಕ ಯುವತಿಯರು ಮತ್ತು ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ಹತ್ಯೆ ಮತ್ತು ಅಮಾನವೀಯ ದೌರ್ಜನ್ಯಗಳು ಮನುಷ್ಯತ್ವಕ್ಕೂ, ಕಾನೂನು ವ್ಯವಸ್ಥೆಗೂ ಸೆಡ್ಡು ಹೊಡೆಯುವಂಥದ್ದು

ಇಂತಹ ಭೀಕರ ಅಕ್ರಮಗಳ ಅಪರಾಧಿಗಳನ್ನು ಪತ್ತೆಹಚ್ಚಿ, ಕಠಿಣ ಶಿಕ್ಷೆ ನೀಡುವುದು ಮಾತ್ರವಲ್ಲದೆ, ಭವಿಷ್ಯದಲ್ಲಿ ಇವು ಮರುಕಳಿಸದಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ನಿಮ್ಮೆಲ್ಲರ ಬೆಂಬಲದಿಂದ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಂಗಳೂರು ಜಿಲ್ಲಾ ಘಟಕದ ವತಿಯಿಂದ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ಪ್ರತಿಭಟನೆ ಹಮ್ಮಿಕೊಂಡಿದೆ.

ಧರ್ಮಸ್ಥಳ ಪ್ರಕರಣಗಳ ಕುರಿತು ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಯವರ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (SIT) ರಚನೆ ಮಾಡಬೇಕೆಂದು. ಇದು ಸತ್ಯ ಮತ್ತು ನ್ಯಾಯ ಸಾಧಿಸಲು ಅತ್ಯಗತ್ಯ ಹೆಜ್ಜೆಯಾಗಿದೆ. ಈ ಹಿನ್ನೆಲೆಯಲ್ಲಿ, ನಿಮ್ಮನ್ನು ನಾವೆಲ್ಲಾ ಈ ಬೃಹತ್‌ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸುತ್ತೇವೆ:

ಬನ್ನಿ, ಸತ್ಯದ ಪರವಾಗಿ ನಿಂತು, ನ್ಯಾಯಕ್ಕಾಗಿ ಹೋರಾಡೋಣ.

ನಿಮ್ಮ ಭಾಗವಹಿಸುವಿಕೆ ಈ ಹೋರಾಟಕ್ಕೆ ಶಕ್ತಿ ನೀಡುತ್ತದೆ ಮತ್ತು ಈ ಕ್ರೌರ್ಯಗಳ ವಿರುದ್ಧ ನಿಮ್ಮ ಧೃಡ ನಿಲುವನ್ನು ಸಮಾಜಕ್ಕೆ ತೋರಿಸುತ್ತದೆ.

ಸ್ಥಳ: ಫ್ರೀಡಂ ಪಾರ್ಕ್, ಬೆಂಗಳೂರು

SDPIKarnataka #DharmasthalaFiles #ShameonKarnatakaGovernment

Leave A Comment