ಬೆಂಗಳೂರು, ಆ. 20: ಕರ್ನಾಟಕದಲ್ಲಿ ಸಮುದಾಯಗಳ ನಡುವೆ ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ
ಹೋರಾಟದ ಈ ನಿರ್ಣಾಯಕ ಹಂತದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯಲಿರುವ ಜನಗಣತಿ ಹಾಗೂ ಅದರ ಜೊತೆಯಲ್ಲೇ ನಡೆಯಲಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗಳ ಬಗ್ಗೆ ಉಂಟಾಗಿರುವ ಕೆಲ ಗೊಂದಲಗಳಿಗೆ ಸಮಾಧಾನಕಾರವಾಗಿ ಪರಿಹಾರ ಕಂಡು ಕೊಳ್ಳಲು ಮತ್ತು ಸಮುದಾಯದಲ್ಲಿ ಒಮ್ಮತಾಭಿಪ್ರಾಯ ಮೂಡಿಸಲು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ಇಂದು ಬೆಂಗಳೂರಿನಲ್ಲಿ 2 ನೇ ದುಂಡು ಮೇಜಿನ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ರಾಜ್ಯದ ಪ್ರಮುಖ ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಚಿಂತಕರು ಭಾಗವಹಿಸಿ ತಮ್ಮ ತಮ್ಮ ಅಭಿಪ್ರಾಯ ಗಳನ್ನು ವ್ಯಕ್ತಪಡಿಸಿ, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಸಮಾಜವಾದ ಹಾಗೂ ಭಾರತೀಯ ಸಂವಿಧಾನದ ಪರಿಕಲ್ಪನೆಗಳನ್ನು ಆಧರಿಸಿಕೊಂಡು, ಶೋಷಿತ ಹಾಗೂ ಹಿಂದುಳಿದ ಸಮುದಾಯಗಳ ಹಕ್ಕು, ಸಮಗ್ರ ಅಭಿವೃದ್ಧಿ ಹಾಗೂ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಶೋಷಿತ ಸಮುದಾಯಗಳ ನಡುವೆ ಜಾಗೃತಿ ಮೂಡಿಸಲು ಮುಂದಿನ ಹಂತದಲ್ಲಿ ಎಲ್ಲ ಸಂಘಟನೆಗಳು, ರಾಜಕೀಯ ಹಾಗೂ ಧಾರ್ಮಿಕ ನಾಯಕರುಗಳು ಪಾಲ್ಗೊಂಡು ಜಿಲ್ಲಾ ಮಟ್ಟಿಗದಲ್ಲಿ ಸಭೆಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು ಹಾಗೂ ಈ ಸಂಬಂಧ ಸುಧಿರ್ಘ ಅಧ್ಯಯನ ನಡೆಸಲು ವಿಷಯಧಾರಿತ ತಜ್ಞರ ಸಮಿತಿಯೊಂದನ್ನು ರಚಿಸಲು ಸಭೆಯಲ್ಲಿ ಒಮ್ಮತಕ್ಕೆ ಬರಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ SDPI ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು, “ಮುಸ್ಲಿಂ ಸಮುದಾಯವು ಈ ಜನಗಣತಿ ಸರ್ವೆಯಲ್ಲಿ ಸಕ್ರಿಯವಾಗಿ ಹಾಗೂ ಸ್ಪಷ್ಟತೆಯೋಂದಿಗೆ ಪಾಲ್ಗೊಳ್ಳಬೇಕು. ಜಾತಿ ನಮೂದಿಸುವ ಸಂದರ್ಭದಲ್ಲಿ ಯಾವುದೇ ಗೊಂದಲಗಳು ಉದ್ಭವವಾದರೆ ತಡೆಯುವುದು ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ನಾಯಕರ ಪ್ರಮುಖ ಹೊಣೆಗಾರಿಕೆಯಾಗಿರುತ್ತದೆ,” ಎಂದು ಒತ್ತಿಹೇಳಿದರು.
ಕಾರ್ಯಕ್ರಮವನ್ನು ಅಮ್ಮದ್ ಖಾನ್ ನಿರೂಪಿಸಿದರು. ಅಬ್ರಾರ್ ಅಹ್ಮದ್ ಸ್ವಾಗತಿಸಿದರು. ಅಪ್ಪರ್ ಕೊಡ್ಲಿಪೇಟೆ ವಂದನಾರ್ಪಣೆ ಮಾಡಿದರು. ಸಭೆಯಲ್ಲಿ ರಾಜ್ಯದ ಪ್ರಮುಖ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ನಾಯಕರಾದ ಅಬ್ದುಲ್ ಹನ್ನಾನ್, ಮೌಲಾನಾ ಇಕ್ರಾಮ್, ಶಾಹೀದ್ ಅಲಿ ಉಡುಪಿ, ನಿವೃತ್ತ ಕೆ.ಎ.ಎಸ್ ಅಧಿಕಾರಿಗಳಾದ ಅಬ್ದುಲ್ ಹಮೀದ್, ಪ್ರೊ.ನಾನ್ ಬೇಗಂ, ಡಾ.ಅವಾಜ್ ಶರೀಫ್, ಪತ್ರಕರ್ತೆ ನಾಝಿಯಾ ಕೌಸರ್, ಡಾ. ಝಾಹಿದಾ ಖಾನ್, ರಜಾಕ್ ಉಸ್ತಾದ್, ಡಿ. ಎಂ. ಎಸ್ ರಾಜ್ಯಾಧ್ಯಕ್ಷ ಎ.ಜೆ. ಖಾನ್, ಪ್ರೊ. ಅಬ್ದುರ್ ರಹಮಾನ್, ಅಡ್ವಕೇಟ್ ಮಜೀದ್ ಖಾನ್, (ಎ.ಐ.ಎಲ್.ಸಿ), ರಿಯಾಝ್ ಕಡಂಬು, ವಕೀಲ ಎಮ್.ಕೆ. ಮೇತ್ರಿ, ದಾದಾ ಪೀರ್, ದಾದಾ ಖಲಂದರ್, ಸೇರಿದಂತೆ ಅನೇಕ ಗಣ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕ
#SDPIKarnataka
