11
Oct

ಗಾಜಾದಲ್ಲಿ ಯುದ್ಧ ವಿರಾಮದ ಪ್ರಾರಂಭಿಕ ಹಂತಗಳನ್ನು ವಿಶ್ವವು ಕಣ್ತುಂಬಿಕೊಳ್ಳುತ್ತಿರುವ ಈ ಮಹತ್ವದ ಮುನ್ನಡೆಯ ಸಾಧನೆಗೆ ಕಾರಣರಾದ ಎಲ್ಲರಿಗೂ ಹೃತೂರ್ವಕ ಕೃತಜ್ಞತೆಯನ್ನು ಎಸ್.ಡಿ.ಪಿ.ಐ ಸಲ್ಲಿಸುತ್ತದೆ. ಖತಾರ್, ಈಜಿಪ್ಟ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಟರ್ಕಿ, ಜೋರ್ಡನ್ ಹಾಗೂ ಇಂಡೋನೇಷಿಯಾ ದೇಶಗಳ ಮಧ್ಯಸ್ಥಿಕೆ ಮತ್ತು ನಿರಂತರ ಶ್ರಮವೂ ಯುದ್ದದಿಂದ ನಾಶವಾದ ಪ್ರದೇಶಕ್ಕೆ ಮತ್ತೆ ಸ್ವಲ್ಪ ಆಶಾಕಿರಣವನ್ನು ತಂದುಕೊಟ್ಟಿದೆ.

ಬಂಧಿತರ ವಿನಿಮಯ, ಸೈನ್ಯದ ಭಾಗಶಃ ಹಿಂಪಡೆತ ಹಾಗೂ ಮಾನವೀಯ ಸಹಾಯದ ಪ್ರವೇಶವನ್ನು ಒಳಗೊಂಡಿರುವ ಈ ಒಪ್ಪಂದವು ಶಾಂತಿಯ ಕಡೆ ಸಾಗುವ ಪ್ರಮುಖ ಮೊದಲ ಹೆಜ್ಜೆಯಾಗಿದೆ.

ಶಾಶ್ವತ ಮತ್ತು ನ್ಯಾಯಯುತ ಪರಿಹಾರಕ್ಕಾಗಿ ಇನ್ನೂ ಬಹಳ ಶ್ರಮವಹಿಸುವ ಅಗತ್ಯತೆವಿದೆ.

ಪೂರ್ವ ಜೆರುಸಲೇಮ್‌ನ್ನು ರಾಜಧಾನಿಯಾಗಿ ಹೊಂದಿರುವ, 1967 ರ ಗಡಿಗಳ ಆಧಾರದ ಮೇಲೆ ಸ್ಥಾಪನೆಯಾಗಿರುವ ಸ್ವತಂತ್ರ ಪ್ಯಾಲೆಸ್ತೀನ್ ರಾಷ್ಟ್ರಕ್ಕೆ ಈ ರೀತಿಯ ದಶಕಗಳ ಆಕ್ರಮಣ ಮತ್ತು ಅನ್ಯಾಯವನ್ನು ಅಂತ್ಯಗೊಳಿಸಲು ಏಕೈಕ ಮತ್ತು ನಂಬಿಕಾರ್ಹ ಮಾರ್ಗವಾಗಿದೆ.

ಇಸ್ರೇಲ್ ತನ್ನ ಸೈನ್ಯವನ್ನು ಪಶ್ಚಿಮ ಕಿನಾರಾ, ಗಾಜಾ ಹಾಗೂ ಗೋಲನ್ ಪರ್ವತ ಪ್ರದೇಶ ಸೇರಿದಂತೆ ಎಲ್ಲ ಆಕ್ರಮಿತ ಪ್ಯಾಲೆಸ್ತೀನ್ ಭೂಮಿಯಿಂದ ತಕ್ಷಣ ಹಿಂತೆಗೆದುಕೊಳ್ಳಬೇಕು.

ಈ ಸಕಾರಾತ್ಮಕ ಬೆಳವಣಿಗೆಗೆ ಹಮಾಸ್‌ನ ದೃಢ ಪ್ರತಿರೋಧವೇ ಕಾರಣವಾಗಿದೆ ಎಂಬುದನ್ನು ನಾವು ಒಪ್ಪುತ್ತೇವೆ.

ಅವರ ಧೈರ್ಯ ಹಾಗೂ ದೃಢನಿಶ್ಚಯವೇ ಜಗತ್ತಿನ ಸಮುದಾಯವನ್ನು ಪ್ಯಾಲೆಸ್ತೀನಿಯರ ಹಕ್ಕುಗಳು ಇಸ್ರೇಲ್ ನ ಕಠೋರ ವಾಸ್ತವ್ಯದ ಮುಂದೆ ನಿಲ್ಲಿಸಿದೆ.

ನಾವೆಲ್ಲ ಪ್ಯಾಲೆಸ್ತೀನ್ ಜನರ ಅಸಾಧಾರಣ ಧೈರ್ಯ, ತಾಳ್ಮೆ ಮತ್ತು ತ್ಯಾಗಕ್ಕೆ ಅಭಿಮಾನ ವ್ಯಕ್ತಪಡಿಸುತ್ತೇವೆ. ಅತ್ಯಂತ ದುಃಖ ಮತ್ತು ವಿನಾಶದ ನಡುವೆಯೂ ಅವರು ನ್ಯಾಯಕ್ಕಾಗಿ ಅಚಲವಾಗಿ ಹೋರಾಡುತ್ತಿದ್ದಾರೆ. ಅದೇ ರೀತಿ, ಜಗತ್ತಿನಾದ್ಯಂತ ನ್ಯಾಯಕ್ಕಾಗಿ ಧ್ವನಿ ಎತ್ತಿದ, ಬೀದಿಗಿಳಿದ, ಬಹಿಷ್ಕಾರಗಳಲ್ಲಿ ಪಾಲ್ಗೊಂಡ, ಹಾಗೂ ಮಾನವೀಯತೆಗಾಗಿ ಹೋರಾಡಿದ ಎಲ್ಲಾ ಹೃದಯಸಹಿತ ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಸಮುಡ್ ಫ್ಲೋಟಿಲ್ಲಾ ನ ಸಾಹಸಿಕ ಹೋರಾಟಗಾರರು ಗಾಜಾಕ್ಕೆ ಸಹಾಯ ಸಾಮಗ್ರಿಗಳನ್ನು ತಲುಪಿಸಲು ನಿಷೇಧಗಳನ್ನು ಉಲ್ಲಂಘಿಸಿ ಸಾಗಿದ ಧೈರ್ಯಕ್ಕೆ ವಿಶೇಷ ಗೌರವ ಸಹ ಈ ಸಂದರ್ಭದಲ್ಲಿ ಅರ್ಪಿಸುತ್ತೇವೆ.

ಆದರೆ 50,000 ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಸಾವಿಗೆ ಕಾರಣವಾದ ಇಸ್ರೇಲ್‌ನ ಈ ಕೃತ್ಯಗಳು ಸಂಯುಕ್ತ ರಾಷ್ಟ್ರಗಳ ಜನಾಂಗಹತ್ಯೆ ಒಪ್ಪಂದದ ಪ್ರಕಾರ ಇದು ಮಹಾ ಅಪರಾಧ ಆಗಿದೆ. ನಾಗರಿಕರ ಮೇಲೆ ಉದ್ದೇಶಿತ ದಾಳಿ, ಮೂಲಸೌಕರ್ಯಗಳ ಧ್ವಂಸ ಮತ್ತು ಹಸಿವನ್ನು ಯುದ್ಧಾಸ್ತ್ರವಾಗಿ ಬಳಸಿದ ಕ್ರಮಗಳಿಗೆ ಇಸ್ರೇಲ್ ಅಂತಾರಾಷ್ಟ್ರೀಯ ನ್ಯಾಯಮಂಡಳಿಗಳ ಮುಂದೆ ಆರ್ಥಿಕ ನಿರ್ಬಂಧಗಳು ಹಾಗೂ ಪರಿಹಾರಕ್ಕೆ ಕಡಿವಾಣ ಹಾಕಿದ್ದಕ್ಕೆ ಉತ್ತರದಾಯಕನಾಗಬೇಕು ಅಲ್ಲದೇ, ಈ ರೀತಿಯ ದುರಂತಗಳು ಪುನರಾವರ್ತನೆಗೊಳ್ಳದಂತೆ ಖಚಿತಪಡಿಸಬೇಕಾಗಿದೆ.

ಪ್ಯಾಲೆಸ್ತೀನ್ ಸ್ವಯಂನಿರ್ಣಯ ಹಕ್ಕಿನ ಹೋರಾಟದ ಪರವಾಗಿ ತನ್ನ ಅಚಲ ಬದ್ದತೆಯನ್ನು ಪುನರುಚ್ಚರಿಸುತ್ತದೆ. ಈ ಯುದ್ಧ ವಿರಾಮವು ನಿಜವಾದ ಶಾಂತಿಯ ಪ್ರಾರಂಭವಾಗಲಿ, ಅನ್ಯಾಯದ ಮಧ್ಯೆ ಇದು ಕೇವಲ ಒಂದು ವಿರಾಮವಾಗಿರಬಾರದು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಮೊಹಮ್ಮದ್ ಶಫೀ ತಿಳಿಸಿದ್ದಾರೆ.

~ಮೊಹಮ್ಮದ್ ಶಫಿ,
SDPI ರಾಷ್ಟ್ರೀಯ ಉಪಾಧ್ಯಕ್ಷರು

Leave A Comment