ಹೈದರಾಬಾದ್ ಬೆಂಗಳೂರು ಹೆದ್ದಾರಿಯಲ್ಲಿ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದ ಬಸ್ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನಕೋಟೆ ಬಳಿ ಬೆಂಕಿಗಾಹುತಿಯಾಗಿ, ಮಕ್ಕಳನ್ನು ಒಳಗೊಂಡು 20 ಜನರು ವಿಧಿಯಾಟದ ಮುಂದೆ ಶರಣಾಗಿ ಸಾವನ್ನಪ್ಪಿದ್ದಾರೆ ಎಂಬ ದುಃಖದ ಸುದ್ದಿ ಕೇಳಿ ಹೃದಯ ಕಲುಕಿದೆ. ಮೃತರ ಕುಟುಂಬಗಳಿಗೆ ನನ್ನ ಹೃತ್ತೂರ್ವಕ ಸಂತಾಪವನ್ನು ತಿಳಿಸುತ್ತೇನೆ.
ಸೃಷ್ಟಿಕರ್ತನು ಮೃತರ ಕುಟುಂಬಗಳಿಗೆ ತಮ್ಮ ಪ್ರಿಯವರನ್ನು ಕಳೆದುಕೊಂಡ ನೋವನ್ನು ತಾಳುವ ಶಕ್ತಿ ನೀಡಲಿ ಹಾಗೂ ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
ಹಾಗೆಯೇ ಸರ್ಕಾರವು ಸಂತ್ರಸ್ತ ಕುಟುಂಬಗಳಿಗೆ ಗರಿಷ್ಠ ಪ್ರಮಾಣದ ಪರಿಹಾರಧನ ನೀಡಿಸಿ, ಅವರ ಸಂಕಷ್ಟಕ್ಕೆ ನೆರವಾಗಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.
~ಅಬ್ದುಲ್ ಹನ್ನಾನ್,
ರಾಜ್ಯ ಉಪಾಧ್ಯಕ್ಷರು, SDPI ಕರ್ನಾಟಕ
