06
Nov

ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ನಿಗಧಿ ಮಾಡ ಬೇಕೆಂದು ಆಗ್ರಹಿಸಿ ಈಗಾಗಲೇ ಕಬ್ಬು ಬೆಳೆಗಾರರು ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಸಹ ಸರ್ಕಾರ ಮಾತ್ರ ಹೋರಾಟಕ್ಕೆ ಮಾನ್ಯತೆ ನೀಡದೆ, ರೈತರ ಬೇಡಿಕೆಗೆ ಕ್ಯಾರೇ ಅನ್ನುತ್ತಿಲ್ಲ. ಚುನಾವಣೆಯ ಸಮಯದಲ್ಲಿ ಕೇಂದ್ರ ಸರ್ಕಾರ ರೈತ ವಿರೋಧಿ ಎಂದು ಬೊಬ್ಬೆ ಹಾಕಿದ ಕಾಂಗ್ರೆಸ್ ಪಕ್ಷ ಈಗ ಅಧಿಕಾರ ಸಿಕ್ಕ ನಂತರ ರೈತರನ್ನು, ರೈತರ ಸಮಸ್ಯೆಯನ್ನು ಕಡೆಗಣಿಸುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕಿಡಿಕಾರಿದ್ದಾರೆ. ಅಲ್ಲದೇ ರಾಜ್ಯಾದ್ಯಂತ ನಡೆಯಲಿರುವ ರೈತ ಪರ ಹೋರಾಟಕ್ಕೆ ಎಸ್.ಡಿ.ಪಿ.ಐ ತನ್ನ ಸಂಪೂರ್ಣ ಬೆಂಬಲವನ್ನು ನೀಡುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಜೀದ್ ತಿಳಿಸಿದ್ದಾರೆ.

~ಅಬ್ದುಲ್ ಮಜೀದ್‌,
ರಾಜ್ಯಾಧ್ಯಕ್ಷರು, SDPI ಕರ್ನಾಟಕ

Leave A Comment