19
Nov

ಬೆಂಗಳೂರು, 18-11-2025: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನಾನ್ ರವರ ಅಧ್ಯಕ್ಷತೆಯೊಂದಿಗೆ ಬೆಂಗಳೂರಿನಲ್ಲಿ ದಕ್ಷಿಣ ಕರ್ನಾಟಕ, ಹಳೇ ಮೈಸೂರು, ಮಧ್ಯ ಕರ್ನಾಟಕ ಹಾಗೂ ಕೆಲವು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಅಬ್ದುಲ್ ಹನ್ನಾನ್ ರವರು ಪ್ರಸ್ತುತ ಮುಂಬರುವ ವರ್ಷ ಚುನಾವಣೆಗಳ ವರ್ಷವಾಗಿದೆ, ನಡೆಯುವಂತಹ ಈ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಮತ್ತು ಜನಪ್ರತಿನಿಧಿಗಳ ಮೂಲಕ ಹೆಚ್ಚಿನ ಸಾಮಾಜಿಕ ನ್ಯಾಯವನ್ನು ದೊರಕಿಸಿ ಕೊಡುವಂತಹ ಜನ ನವಾಗಬೇಕಿದೆ, ಜಿಲ್ಲಾ ನಾಯಕರು ಹಿಂದಿಗಿಂತಲೂ ಹೆಚ್ಚಾಗಿ ಸಾಮಾಜಿಕ ಸಮಸ್ಯೆಗಳ ಗ್ರಹಿಸುವ, ಗುರುತುಪಡಿಸುವ ಮತ್ತು ಅವುಗಳನ್ನು ಹೋರಾಟಗಳ ಮೂಲಕ ನಿವಾರಿಸುವ ಕೆಲಸಗಳಲ್ಲಿ ಮುನ್ನುಗ್ಗಬೇಕಿದೆ, ತುರ್ತು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ, ಎಂಬ ವಿಶಯಗಳನ್ನು ಪ್ರಸ್ಥಾಪಿಸಿ ಬೆಳಕು ಚೆಲ್ಲಿದರು.

ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸುವುದು, ಬೂತ್ ಆಧಾರಿತ ಚಟುವಟಿಕೆಗಳನ್ನು ವೇಗಗೊಳಿಸುವುದು ಮತ್ತು ಜನಸಂಪರ್ಕ ಕಾರ್ಯಕ್ರಮಗಳನ್ನು ಹೆಚ್ಚಿಸುವ ಕುರಿತು ವಿಷಯ ಮಂಡಿಸಿದರು.

ಉಪಸ್ಥಿತರಿದ್ದ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ತಮ್ಮ ಜಿಲ್ಲೆಗಳ ಪಕ್ಷ-ಕಾರ್ಯ ಪ್ರಗತಿ, ಕಾರ್ಯಸಾಧನೆ ಹಾಗೂ ಎದುರಿರುವ ರಾಜಕೀಯ ಸವಾಲುಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.

ಮುಂದುವರಿದು, ಪಕ್ಷ ವಿಸ್ತರಣೆ ವಿಷಯದಲ್ಲಿ ಹೆಚ್ಚಿನ ಚರ್ಚೆ ನಡೆದು, ಪಕ್ಷ ಉಪಸ್ಥಿತ ಇಲ್ಲದ ಸ್ಥಳಗಳಲ್ಲಿ ಉಪಸ್ಥಿತಿಯನ್ನು ಕಾಣಬೇಕಿದೆ. ಹಾಗಾಗಿ, ಜಿಲ್ಲಾ ನಾಯಕರು ಇದರ ಬಗ್ಗೆ ಕ್ರಮವಹಿಸಬೇಕೆಂದು ನಿರ್ದೇಶಿಸಲಾಯಿತು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹೀದ್ ಪಾಷಾ ರವರು ಪರಿಣಾಮಕಾರಿ ಪಕ್ಷ ನಿರ್ವಹಣೆ ಮತ್ತು ಬೆಳವಣಿಗೆ, ಉತ್ತಮ ಕಾರ್ಯಶೈಲಿ, ಜನಸಂಪರ್ಕ ಮತ್ತು ವಿಷಯಾಧಾರಿತ ಚಳುವಳಿಗಳ ಮಹತ್ವವನ್ನು ಒತ್ತಿಹೇಳಿದರು. ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟು ಪಕ್ಷದ ಚಟುವಟಿಕೆಗಳನ್ನು ಇನ್ನಷ್ಟು ವೇಗಗೊಳಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಸಭೆಯ ಅಂತ್ಯದಲ್ಲಿ, ರಾಜ್ಯವನ್ನು ಕಲ್ಯಾಣ ರಾಜ್ಯ – ಸುಖೀ ರಾಜ್ಯವಾಗಿ ನಿರ್ಮಿಸುವ ಪರಿಕಲ್ಪನೆಯನ್ನು ಏಕತೆ, ಶಿಸ್ತು ಮತ್ತು ಸಮರ್ಪಣೆಯೊಂದಿಗೆ ಸಾಧಿಸಬೇಕಿದೆ, ಇದಕ್ಕಾಗಿ ತಳಮಟ್ಟದಿಂದ ಅಧಿಕಾರ ಹಿಡಿಯುವಂತಹ ಪ್ರಕ್ರಿಯೆ ಆಗಬೇಕಿದೆ ಎಂದು ಒಮ್ಮತ ವ್ಯಕ್ತವಾಯಿತು. ರಾಜ್ಯ ಕಾರ್ಯದರ್ಶಿ ಅಪ್ಪರ್ ಕೆ.ಆರ್.ನಗರ, ರಾಜ್ಯ ಮುಖಂಡರಾದ ರಫೀಕ್ ತುಮಕೂರು ಸಹ ಸಭೆಯಲ್ಲಿ ಉಪಸ್ಥಿತರಿದ್ದರು.

Leave A Comment