29
Nov

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಜ್ಯ ಸಮಿತಿ ಸಭೆ ದಿನಾಂಕ 28/11/2025 ರಂದು ಪಕ್ಷದ ಮುಖ್ಯ ಕಚೇರಿ, ಬೆಂಗಳೂರ ದಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ರಾಜ್ಯದ ಪ್ರಸ್ತುತ ರಾಜಕೀಯ ಪರಿಸ್ಥಿತಿ, ಕಾನೂನು-ವ್ಯವಸ್ಥೆಯ ಹದಗೆಟ್ಟ ಸ್ಥಿತಿ, ಕೇಂದ್ರ ಸರ್ಕಾರದ SIR ನೀತಿಯ ಪರಿಣಾಮಗಳು ಹಾಗೂ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ನಡೆಯುತ್ತಿರುವ ಅನ್ಯಾಯಗಳ ಕುರಿತು ವಿವರವಾದ ಚರ್ಚೆ ನಡೆಯಿತು.

ಸಭೆಯನ್ನು ರಾಜ್ಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ನೇತೃತ್ವವಹಿಸಿದ್ದರು ಹಾಗೂ ರಾಜ್ಯದ ಪ್ರಮುಖ ನಾಯಕರ ಉಪಸ್ಥಿತಿ ಸಭೆಗೆ ವಿಶೇಷ ಮಹತ್ವ ನೀಡಿತು. SDPI ನ್ಯಾಯ, ಸಮಾನತೆ ಮತ್ತು ಜನಹಿತಕ್ಕಾಗಿ ಬದ್ಧವಾಗಿ ಹೋರಾಟ ಮುಂದುವರಿಸಲು ನಿರ್ಧರಿಸಿದೆ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ

Leave A Comment