28
Dec

ಇವತ್ತಿನ ಪ್ರತಿಭಟನೆಯ ಬಿಸಿ ಸರ್ಕಾರಕ್ಕೆ ಮುಟ್ಟಿದೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನಿರಾಶ್ರಿತರಿಗೆ ಪರ್ಯಾಯ ಜಾಗ ಕಲ್ಪಿಸುವ ಭರವಸೆಯನ್ನು ನೀಡಿದ್ದಾರೆ. ಆದರೆ ಭರವಸೆ ಸಾಕಾಗದು, ಕಾರ್ಯರೂಪ ಬೇಕು. ಇವತ್ತಿನ ನಮ್ಮ ಹೋರಾಟ, ಪ್ರತಿಭಟನೆ ಮತ್ತು ಜನಪರ ಒತ್ತಡದ ಪರಿಣಾಮವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಗಿಲು ಬಡಾವಣೆಯ ಧ್ವಂಸದಿಂದ ನಿರಾಶ್ರಿತರಾದ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ. ಆದರೆ, ಇದು ಕೇವಲ ಹೇಳಿಕೆಯಾಗಿ ಉಳಿಯದೇ ಕಾರ್ಯರೂಪಕ್ಕೆ ಬರಲೇಬೇಕು. ಭರವಸೆಗಳ ಮೇಲೆ ಬದುಕು ಕಟ್ಟಲಾಗುವುದಿಲ್ಲ.

ಜನರಿಗೆ ಬೇಕಾಗಿರುವುದು ತಕ್ಷಣದ ಪರಿಹಾರ, ಪುನರ್ವಸತಿ ಮತ್ತು ಶಾಶ್ವತ ಮನೆಗಳು. ಮುಖ್ಯಮಂತ್ರಿಗಳ ಭರವಸೆಯನ್ನು ಸ್ವಾಗತಿಸುತ್ತೇವೆ. ಆದರೆ ಒತ್ತಡ ಇಲ್ಲದೆ ನ್ಯಾಯ ಸಿಗುವುದಿಲ್ಲ ಎಂಬುದನ್ನು ಅನುಭವ ನಮಗೆ ಕಲಿಸಿದೆ. ಆದ್ದರಿಂದ, ಈ ಭರವಸೆ ಕಾರ್ಯರೂಪಕ್ಕೆ ಬರಬೇಕೆಂದು ಆಗ್ರಹಿಸಿ ಬುಲ್ಲೋಜರ್ ಸರ್ವಾಧಿಕಾರ ರಾಜಕೀಯ ಧೋರಣೆಯನ್ನು ಖಂಡಿಸಿ ನಾಳೆ ಎಸ್‌ಡಿಪಿಐ ಪಕ್ಷದ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ.

SDPIKarnataka #kogilulayout #bangalore

Leave A Comment