SIR ಮೂಲಕ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ – ಅಬ್ರಾರ್
12.01.2026
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ SDPI ಪಕ್ಷದ ವತಿಯಿಂದ ಎಸ್.ಐ.ಆರ್ ಕುರಿತು ಜನಜಾಗೃತಿ ಸಭೆ ಆಯೋಜಿಸಲಾಯಿತು. ಸಭೆಯಲ್ಲಿ ಮಾತನಾಡಿದ ರಾಜ್ಯ ಸಮಿತಿ ಸದಸ್ಯರಾದ ಅಬ್ರಾರ್ ಅಹಮದ್ ಎಸ್.ಐ.ಆರ್ ಮೇಲ್ನೋಟಕ್ಕೆ ಮತದಾರರ ಪರಿಷ್ಕರಣೆ ಎಂದು ಇದೆ. ಇದು ಶುದ್ಧ ಸುಳ್ಳು. ಮತದಾರರ ಪರಿಷ್ಕರಣೆಯ ನೆಪವುಡ್ಡಿ, ಈ ದೇಶದ ಮೂಲ ನಿವಾಸಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಒಂದು ಷಡ್ಯಂತರವಾಗಿದೆ ಮತದಾರರ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿ ನೀವು ಭಾರತೀಯರು ಎಂದು ಸಾಬೀತುಪಡಿಸಲು ದಾಖಲೆಗಳನ್ನು ನೀಡಬೇಕು ಎಂದು ಒತ್ತಾಯ ಮಾಡುತ್ತಿರುವುದು ಯಾಕೆ ಎಂದು ಅಬ್ರಾರ್ ಪ್ರಶ್ನಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವ ಈ ಎಸ್.ಐ.ಆರ್ ಪ್ರಕ್ರಿಯೆ ಜನರಿಗೆ ತೊಂದರೆ ಕೊಡುವಂತಹ ಒಂದು ಕರಾಳ ನಿಯಮವಾಗಿದೆ ಎಂದು ಕಿಡಿ ಕಾಡಿದರು. ರಾಮದುರ್ಗ ತಾಲ್ಲೂಕು ಅಧ್ಯಕ್ಷರಾದ ಜಾಕೀರ್ ಕೌಜಲಗಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದಲ್ಲಿ ಬೆಳಗಾವಿ ಜಿಲ್ಲಾಧ್ಯಕ್ಷ ಮೊಅಜ್ಜಮಜಾ ಮುಲ್ಲಾನಿ, ಜಿಲ್ಲಾ ಸಮಿತಿ ಸದಸ್ಯ ಸಾದೀಕ ದಿಲಾವರ, ರಾಮದುರ್ಗ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು, ಸಮುದಾಯ ನಾಯಕರು, ಪ್ರಜ್ಞಾವಂತ ನಾಗರಿಕರು ಉಪಸ್ಥಿತರಿದ್ದರು.
