ದಾವಣಗೆರೆ ಉಪಚುನಾವಣೆಯ ಹಿನ್ನೆಲೆದಲ್ಲಿ ಕಾಂಗ್ರೆಸ್ ಪಕ್ಷವು ತನ್ನದೇ ಪಕ್ಷದ ಬಂಡಾಯ ನಾಯಕರ ಮೇಲೆ SDPI ಹಣಕಾಸು ಸಹಾಯ ಪಡೆದಿದ್ದಾರೆ ಎಂಬ ಆರೋಪ ಮಾಡುತ್ತಿರುವುದು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತವಾಗಿದೆ.
ಮುಸ್ಲಿಂ ನಾಯಕರು ಮತ್ತು ಉಲಮಾಗಳು ನೀಡಿದ ಟಿಕೆಟ್ಗಾಗಿ ಮನವಿಯನ್ನು ಗಂಭೀರವಾಗಿ ಪರಿಗಣಿಸದೆ ಕಾಂಗ್ರೆಸ್ ಮಾಡಿದ ತಪ್ಪಿನಿಂದಲೇ ಈ ಚುನಾವಣೆಯಲ್ಲಿ ಅವರಿಗೆ ಹಿನ್ನಡೆಯಾಗಿದೆ. ಈಗ ಆ ನಷ್ಟವನ್ನು ಮರೆಮಾಚಲು ಕಾಂಗ್ರೆಸ್ ಮುಸ್ಲಿಂ ನಾಯಕತ್ವದೊಳಗೆ ಭಿನ್ನತೆ ಉಂಟುಮಾಡಲು ಪ್ರಯತ್ನಿಸುತ್ತಿದೆ ಮತ್ತು ಕೆಲವರನ್ನು ಗುರಿಯಾಗಿಸಿ ರಾಜಕೀಯ ದಾಳಿ ನಡೆಸುತ್ತಿದೆ.
ತಮ್ಮದೇ ವಿಫಲತೆಯನ್ನು ಒಪ್ಪಿಕೊಳ್ಳಲು ಸಿದ್ಧವಾಗದ ಕಾಂಗ್ರೆಸ್, SDPI ವಿರುದ್ಧ ಚುನಾವಣಾ ಹಣಕಾಸಿನ ಬಗ್ಗೆ ಸುಳ್ಳು ಪ್ರಚಾರ ಮಾಡಿ ಹೊಸ ನಾಟಕ ಆರಂಭಿಸಿದೆ.
SDPI ಬಗ್ಗೆ, ಅದರ ಸಿದ್ಧಾಂತಃ ದ ಬಗ್ಗೆ, ದೇಶದ ಜನತೆಗೆ ಗೊತ್ತಿದೆ.
ಸತ್ಯ ಯಾವಾಗಲೂ ಗೆಲ್ಲುತ್ತದೆ. ಜನರು ಈ ರೀತಿಯ ಸುಳ್ಳು ಪ್ರಚಾರವನ್ನು ತಿರಸ್ಕರಿಸಲಿದ್ದಾರೆ.
