ಸಮಸ್ತ ಮಾಧ್ಯಮ ಮಿತ್ರರಿಗೆ
ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಶುಭಾಶಯಗಳು
ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭ ಎಂದು ಕರೆಯಲ್ಪಡುವ ಮಾಧ್ಯಮ ಕ್ಷೇತ್ರವು, ನಮ್ಮ ದೇಶದ ಪ್ರತಿಯೊಂದು ಘಟನೆ, ಪ್ರತಿಯೊಂದು ಬದಲಾವಣೆ, ಪ್ರತಿಯೊಂದು ಸತ್ಯವನ್ನು ಸಮಾಜದ ಮುಂದೆ ತರುವುದು ಎಂಬ ಮಹತ್ತರವಾದ ಜವಾಬ್ದಾರಿಯನ್ನು ಹೊತ್ತಿದೆ.
ಸತ್ಯನಿಷ್ಠತೆ, ನಿಷ್ಪಕ್ಷಪಾತತೆ ಮತ್ತು ಧೈರ್ಯದ ವರದಿಗೇರಿಕೆ ಇವುಗಳ ಮೂಲಕ ಮಾಧ್ಯಮವು ದೇಶವನ್ನು ಜಾಗೃತಗೊಳಿಸುವ ಶಕ್ತಿ ಹೊಂದಿದೆ. ಜನತೆಯ ಧ್ವನಿಯನ್ನು ನಿರ್ಣಯ ಕೇಂದ್ರಗಳಿಗೆ ತಲುಪಿಸಿ, ನ್ಯಾಯಬದ್ಧತೆ ಮತ್ತು ಪಾರದರ್ಶಕತೆಗೆ ದಾರಿದೀಪವಾಗಿರುವ ಈ ಕ್ಷೇತ್ರದ ಪಾತ್ರ ಅಭೂತಪೂರ್ವ.ಈ ದೇಶದ ಅಗತ್ಯವಾದ ಸತ್ಯಸಂಧ ವರದಿಗಾರಿಕೆ ಮುಂದುವರಿದು, ಸಮಾಜ ನಿರ್ಮಾಣದಲ್ಲಿ ಮಾಧ್ಯಮ ಮತ್ತಷ್ಟು ಬಲವಾಗಿ ನಿಲ್ಲಲಿ ಎಂಬ ಹಾರೈಕೆ. ಇಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ, ದೇಶಾದ್ಯಂತ ಸೇವೆ ಸಲ್ಲಿಸುತ್ತಿರುವ ಎಲ್ಲಾ ಮಾಧ್ಯಮ ಮಿತ್ರರಿಗೆ ಹೃತ್ತೂರ್ವಕ ಶುಭಾಶಯಗಳು.
~ಅಫ್ಸರ್ ಕೊಡ್ಲಿಪೇಟೆ ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI
