02
Dec

ಶ್ರೀ ಆರ್.ವಿ. ದೇವರಾಜ್
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಹಿರಿಯ ಕಾಂಗ್ರೆಸ್‌ ನಾಯಕರು

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಹಿರಿಯ ಕಾಂಗ್ರೆಸ್ ನಾಯಕರು ಆಗಿದ್ದ ಶ್ರೀ ಆರ್.ವಿ. ದೇವರಾಜ್ ಅವರ ಅಗಲಿಕೆ ನನಗೆ ಅಪಾರವಾದ ದುಃಖ ತಂದಿದೆ. ಜನಸೇವೆಗೆ ಅವರ ಬದ್ಧತೆ, ಸರಳ ನಾಯಕತ್ವ ಮತ್ತು ಎಲ್ಲ ವರ್ಗಗಳ ಜನರೊಂದಿಗೆ ಹೊಂದಿಕೊಂಡು ಕೆಲಸ ಮಾಡಿದ ಗುಣಗಳು ಅವರಿಗೆ ವಿಶಾಲವಾದ ಗೌರವವನ್ನು ತಂದಿದ್ದವು. ಎಸ್‌ಡಿಪಿಐ ಕರ್ನಾಟಕ ರಾಜ್ಯ ಸಮಿತಿಯ
ಪರವಾಗಿ ಅವರ ಕುಟುಂಬದವರಿಗೆ, ಬಂಧು-ಬಳಗಕ್ಕೆ ಮತ್ತು ಅಭಿಮಾನಿಗಳಿಗೆ ನನ್ನ ಹೃತ್ತೂರ್ವಕ ಸಂತಾಪಗಳು. ಸರ್ವಶಕ್ತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಈ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ.

~ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, SDPI ಕರ್ನಾಟಕ

Leave A Comment