30/11/2023
ಹಾವೇರಿ ನವೆಂಬರ್ 27, 2023:

ಕಾಂತರಾಜ್ ವರದಿ ಅಂಗೀಕರಿಸುವಂತೆ,2ಬಿ ಮೀಸಲಾತಿ ಪುನರ್ ಸ್ಥಾಪಿಸಿ ಅದರಡಿಯಲ್ಲಿ ಇರುವ ಮೀಸಲು ಪ್ರಮಾಣವನ್ನು ಶೇಕಡ 8% ಏರಿಸುವಂತೆ ಹಾಗೂ ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಬೇಕೆಂದು ಆಗ್ರಹಿಸಿ

ಶಹಾಪುರ, ನ, 30: ಕಾಂತರಾಜ್ ಆಯೋಗದ ವರದಿ ಬಿಡುಗಡೆ, ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಹಾಗು #2B ಮೀಸಲಾತಿಯ ಗೊಂದಲ ನಿವಾರಣೆ ಮಾಡಿ ಮೀಸಲಾತಿ ಪ್ರಮಾಣವನ್ನು ಶೇ8% ಏರಿಸಲು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಪಡಿಸಲು ಕೋರಿ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ರವರನ್ನು ಭೇಟಿ ಮಾಡಿದ ಎಸ್ಡಿಪಿಐ ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕೋಶಾಧಿಕಾರಿ ಸೈಯದ್ ಇಸಾಕ್ ಹುಸೇನ್ ಖಾಲಿದ್, ಜಿಲ್ಲಾಧ್ಯಕ್ಷ ಮಹ್ಮದಸಾ ಢಾಲಾಯತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಜಾನಿ,ಬಂದೇನವಾಜ್ ಗೋಗಿ,ಎಜಾಝ್, ಝಮೀರ್,ಶಕೀಲ್, ರಾಶೀದ್, ಪುರ್ಖಾನ್,ರಫೀಕ್, ಬಾಶುಮಿಯಾ ಇತರರು ಉಪಸ್ಥಿತರಿದ್ದರು.

ಕನಕ ಜಯಂತಿಯ ಶುಭಾಶಯಗಳು

“ದಾಸ ಸಾಹಿತ್ಯದ ಮೂಲಕ ಜಾತಿ, ಮತ, ಕುಲಗಳ ಭೇದ-ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಸಂತ ಕನಕದಾಸರ ಮಾನವೀಯತೆಯ ಸಂದೇಶ ಮನೆಮನೆಗಳಲ್ಲಿ ಪಸರಿಸಲಿ.” ~ಅಬ್ದುಲ್

29
Nov

27/11/2023
ಕಾಂತರಾಜ್ ವರದಿ ಅಂಗೀಕರಿಸುವಂತೆ, 2ಬಿ ಮೀಸಲಾತಿ ಪುನರ್ ಸ್ಥಾಪಿಸಿ ಅದರಡಿಯಲ್ಲಿ ಇರುವ ಮೀಸಲು ಪ್ರಮಾಣವನ್ನು ಶೇಕಡ 8% ಏರಿಸುವಂತೆ ಹಾಗೂ ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಬೇಕೆಂದು ಆಗ್ರಹಿಸಿ ಗಂಗಾವತಿ ಕ್ಷೇತ್ರದ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಯವರಿಗೆ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ,ಗಂಗಾವತಿ ವಿಧಾನ ಸಭಾ ಕ್ಷೇತ್ರದ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ SDPI ಗಂಗಾವತಿ ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರದ ಮುದ್ದಾಸಿರ್.ಪ್ರಧಾನ ಕಾರ್ಯದರ್ಶಿ ಎಂ ಡಿ ಅಜರುದ್ದಿನ್. ಕೋಶಾಧಿಕಾರಿ ಫೈಯಾಜ್ ಅಹ್ಮದ್.ಇಮ್ರಾನ್ ಅಡ್ವೋಕೇಟ್. ಖಾಜಾ ಬಜಾಜ್.ಮಹೇಬೂಬ್ ಮುರಹರಿ ನಗರ್. ಖಾಜಾ ಮೇಕನಿಕ್ ಮತ್ತು ಕಾರ್ಯಕರ್ತರು

29
Nov
28
Nov

ಸ್ಮರಣೆ

ಶತಮಾನಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದ ಅಸ್ಪೃಶ್ಯರಿಗೆ ಮೊಟ್ಟ ಮೊದಲ ಬಾರಿಗೆ ಶಾಲೆ ತೆರೆಯುವ ಮೂಲಕ ಕ್ರಾಂತಿಗೆ ಮುನ್ನುಡಿ ಹಾಡಿದ ಮಹಾತ್ಮ ಜ್ಯೋತಿಬಾ ಫುಲೆ ಅವರ ಪುಣ್ಯಸ್ಮರಣೆಯಂದು ಅವರಿಗೆ ಶ್ರದ್ದಾಂಜಲಿಗಳು. ~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ SDPIKarnataka

28
Nov