28
Jul

ಪರ್ಯಾಯ ರಾಜಕೀಯ ಚಳುವಳಿಯ ಅಗತ್ಯತೆ ಮತ್ತು ಸವಾಲುಗಳು ವಿಚಾರ ಸಂಕಿರಣ ಎಸ್‌ಡಿಪಿಐ ಕೇವಲ ರಾಜಕೀಯ ಆಯ್ಕೆಯಾಗಿ ಅಲ್ಲ ಅದು ತಾರತಮ್ಯವಿಲ್ಲದ, ಸಮಸಮಾಜ ನಿರ್ಮಾಣದ ದೃಢ ಸಂಕಲ್ಪದ ಚಳುವಳಿಯಾಗಿದೆ: ಅಪ್ಸರ್ ಕೊಡ್ಲಿಪೇಟೆ

ಕುಂದಾಪುರ, ಜುಲೈ 27: ಉಡುಪಿ ಜಿಲ್ಲೆಯ ಕುಂದಾಪುರದ ಶರೋನ್ ಹೋಟೆಲ್ ಸಭಾಂಗಣದಲ್ಲಿ ”ಪ್ರಸಕ್ತ ಕಾಲಘಟ್ಟದಲ್ಲಿ ಪರ್ಯಾಯ ರಾಜಕೀಯ ಚಳುವಳಿಯ ಅಗತ್ಯತೆ ಮತ್ತು ಸವಾಲುಗಳು” ಎಂಬ ಮಹತ್ವದ ವಿಷಯದ ಕುರಿತು ವಿಶೇಷ ವಿಚಾರ ಸಂಕಿರಣವನ್ನು ಆಯೋಜಿಸಲಾಯಿತು.